newsfirstkannada.com

ಡಾ.ಸಿ.ಎನ್ ಮಂಜುನಾಥ್‌ಗೆ ಬಿಜೆಪಿ ಟಿಕೆಟ್​ ಫಿಕ್ಸ್​​; ಹೈಕಮಾಂಡ್‌ ಲೆಕ್ಕಾಚಾರ ಏನು?

Share :

Published March 11, 2024 at 2:39pm

Update March 11, 2024 at 3:09pm

    ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

    ಪ್ರಬಲ ಒಕ್ಕಲಿಗ ಸಮುದಾಯ, ಹೆಚ್‌ಡಿಡಿ ಕುಟುಂಬಕ್ಕೆ ಸೇರಿದವರು

    ಮಂಜುನಾಥ್‌ಗೆ ಮಣೆ ಹಾಕಿದ್ರೆ ಮೂರ್ನಾಲ್ಕು ಕ್ಷೇತ್ರಗಳ ಮೇಲೆ ಪ್ರಭಾವ

ಬೆಂಗಳೂರು: ಲೋಕಸಭಾ ಚುನಾವಣಾ ಸಮರದಲ್ಲಿ ಕಾಂಗ್ರೆಸ್, ಬಿಜೆಪಿ ಟಿಕೆಟ್ ಫೈಟ್‌ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸಾಲು, ಸಾಲು ಮೀಟಿಂಗ್ ಮಾಡುತ್ತಿರುವ ಹೈಕಮಾಂಡ್ ನಾಯಕರು ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಕಾಂಗ್ರೆಸ್ ಈಗಾಗಲೇ 7 ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತೀವ್ರ ಕುತೂಹಲ ಕೆರಳಿಸಿದೆ.

ಇಂದು ದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖವಾಗಿ ಕರ್ನಾಟಕ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಈ ಬಗ್ಗೆ ಬಿಜೆಪಿ ಉನ್ನತ ಮೂಲಗಳಿಂದ ನ್ಯೂಸ್‌ ಫಸ್ಟ್‌‌ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಬಿಗ್​ ಶಾಕ್.. ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಯುತ್ತಾರಾ ಡಾ.ಕೆ ಸುಧಾಕರ್? ಕ್ಷೇತ್ರ ಯಾವುದು?

ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಬಹುತೇಕ ಫೈನಲ್​ ಆಗುವ ಸಾಧ್ಯತೆ ಇದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್‌ಗೆ ಟಿಕೆಟ್​ ಬಹುತೇಕ ಫಿಕ್ಸ್​​ ಎನ್ನಲಾಗಿದೆ.

ಡಾ. ಮಂಜುನಾಥ್​ಗೆ ಬಿಜೆಪಿ ಟಿಕೆಟ್ ಯಾಕೆ?

ಕಾರಣ 01. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 16 ವರ್ಷಗಳ ಕಾಲ ಸೇವೆ
ಕಾರಣ 02. ಬಡವರಿಗೆ & ಮಧ್ಯಮ ವರ್ಗದವರಿಗೆ ಸಹಾಯ ಮಾಡಿದ ಖ್ಯಾತಿ
ಕಾರಣ 03. ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಹಿರಿಮೆ
ಕಾರಣ 04. ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲೂ ಚಿರಪರಿಚಿತ
ಕಾರಣ 05. ಪ್ರಬಲ ಒಕ್ಕಲಿಗ ಸಮುದಾಯ, ಹೆಚ್‌ಡಿಡಿ ಕುಟುಂಬಕ್ಕೆ ಸೇರಿದವರು
ಕಾರಣ 06. ಡಿ.ಕೆ ಬ್ರದರ್ಸ್ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ರೆ ಬಿಜೆಪಿಗೆ ಪ್ಲಸ್
ಕಾರಣ 07. ಮಂಜುನಾಥ್‌ಗೆ ಮಣೆ ಹಾಕಿದ್ರೆ ಮೂರ್ನಾಲ್ಕು ಕ್ಷೇತ್ರಗಳ ಮೇಲೆ ಪ್ರಭಾವ
ಕಾರಣ 08. ಹೊಸಮುಖದ ಅಭ್ಯರ್ಥಿಗೆ ಮಣೆ ಹಾಕಿದ್ದೇವೆ ಎಂಬ ಸಂದೇಶ ರವಾನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಸಿ.ಎನ್ ಮಂಜುನಾಥ್‌ಗೆ ಬಿಜೆಪಿ ಟಿಕೆಟ್​ ಫಿಕ್ಸ್​​; ಹೈಕಮಾಂಡ್‌ ಲೆಕ್ಕಾಚಾರ ಏನು?

https://newsfirstlive.com/wp-content/uploads/2023/08/Dr-C-N-Manjunath.jpg

Load More