Advertisment

ಗೋವಿಂದ, ಗೋವಿಂದ.. ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ, ಜೆಡಿಎಸ್‌ ಸದಸ್ಯರ ಹಂಗಾಮ; ಫೋಟೋಗಳಲ್ಲಿ ನೋಡಿ!

author-image
Gopal Kulkarni
Updated On
ಗೋವಿಂದ, ಗೋವಿಂದ.. ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ, ಜೆಡಿಎಸ್‌ ಸದಸ್ಯರ ಹಂಗಾಮ; ಫೋಟೋಗಳಲ್ಲಿ ನೋಡಿ!
Advertisment
  • ತಾಳ, ಭಜನೆ, ಗೋವಿಂದ ಗೋವಿಂದ ಎಂದು ಘೋಷಣೆ
  • ವಿಧಾನಸಭೆಯಲ್ಲಿ ಬಿಜೆಪಿ ಅಹೋರಾತ್ರಿ ಧರಣಿ ಆರಂಭ
  • ಆಡಳಿತ ಪಕ್ಷದ ವಿರುದ್ಧ ಗುಡುಗಿದ ಬಿಜೆಪಿ, ಜೆಡಿಎಸ್ ಸದಸ್ಯರು

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಹೋರಾತ್ರಿ ಧರಣಿಗೆ ಮುಂದಾಗಿವೆ. ವಿಧಾನಸಭೆಯಲ್ಲಿ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಾಜಿ ಮಾಜಿ ಸಚಿವರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ ಸೇರಿ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ.

Advertisment

publive-image

ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಸೈಟ್‌ ಹಗರಣದ ವಿರುದ್ಧ ರೊಚ್ಚಿಗೆದ್ದಿರುವ ವಿಪಕ್ಷಗಳು ನಮಗೆ ಸದನದಲ್ಲಿ ಮಾತನಾಡಲು ಬಿಡುತ್ತಿಲ್ಲ. ಚರ್ಚೆ ಮಾಡಲು ಅವಕಾಶ ಕೊಡುತ್ತಿಲ್ಲವೆಂದು ಆರೋಪಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

publive-image

ಇದನ್ನೂ ಓದಿ : ಚನ್ನಪಟ್ಟಣ ಮೇಲೆ ಕೈ ನಾಯಕರ ಕಣ್ಣು, ಉಪಚುನಾವಣೆ ಗೆಲ್ಲಲು ಕಸರತ್ತು; ಅಖಾಡಕ್ಕೆ ಇಳಿದ ಸಿಎಂ ಸಿದ್ದರಾಮಯ್ಯ

ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಹಗರಣ: ಸರ್ಕಾರದ ವಿರುದ್ಧ ಅಶೋಕ್ ಗರಂ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಎರಡು ದೊಡ್ಡ ಹಗರಣಗಳು ನಡೆದಿವೆ. ಒಂದು ಹಗರಣದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯನವರೇ ಭಾಗಿಯಾಗಿದ್ದಾರೆ. ಮೂರರಿಂದ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಇದು ಜನರಿಗೆ ಹಂಚಬೇಕಾದ ನಿವೇಶನಗಳು, ಅದನ್ನು ಸಿಎಂ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ. ಇದು ಅಕ್ಷರಶಃ ಸ್ವಜನಪಕ್ಷಪಾತ ವಾಲ್ಮೀಕಿ ನಿಗಮ ಮಂಡಳಿಯಲ್ಲಿಯೂ ಕೂಡ ದಲಿತರ ಹಣ ಲೂಟಿ ಮಾಡಲಾಗಿದೆ. ದಲಿತರಿಗೆ ಮೀಸಲಿಟ್ಟ ಹಣ ಲೂಟಿಯಾಗಿದೆ, ಸದನದಲ್ಲಿ ಈ ಬಗ್ಗೆ ಮಾತನಾಡಲು ಅವಕಾಶ ಕೇಳಿದ್ದೇವೆ, ಆದ್ರೆ ಕೊಟ್ಟಿಲ್ಲ, ಸಿಎಂ ಉತ್ತರಿಸಿದ್ದಾರೆ. ನಾನು ಅಕ್ರಮ ಮಾಡಿಲ್ಲ ಅಂತಾರೆ ಅಕ್ರಮ ಮಾಡಿಲ್ಲ ಅಂದ್ರೆ ಚರ್ಚೆಗೆ ಏಕೆ ಭಯ ಪಡುತ್ತಿದ್ದಾರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಅದು ಮಾತ್ರವಲ್ಲ ಚರ್ಚೆ ಮಾಡೋಣ ಅಂದ್ರೆ ಸಿಎಂ ಹಾಗೂ ಅವರ ತಂಡ ಓಡಿ ಹೋಗುತ್ತಿದೆ. ಕಾನೂನು ಸಚಿವರು ಅಕ್ರಮ ನಡೆದಿದೆ ಅಂತಾರೆ. ಹಾಗಿದ್ರೆ ಅಪರಾಧಿ ಯಾರು, ಸಿಎಂ ಅವರೇ ಅಪರಾಧಿ, ನಿಲುವಳಿ ಮಂಡನೆಗೆ ಸಿದ್ಧರಾಗಿದ್ದೇವೆ, ಅದಕ್ಕೂ ಅವಕಾಶ ಕೊಡುತ್ತಿಲ್ಲ. ಸ್ಪೀಕರ್ ನಡೆಯೂ ಕೂಡ ಅನುಮಾನ ಮೂಡಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಮಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ ಎಂದು ಗುಡುಗಿದ್ದಾರೆ.

Advertisment

publive-image

ವಿಧಾನಸಭೆಗೆ ಬಂತು ಭೂರಿ ಭೋಜನ

ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ಜೆಡಿಎಸ್ ಸದಸ್ಯರಿಗೆ ವಿಧಾನಸಭಾ ಮೊಗಸಾಲೆಯಲ್ಲಿ ಬಿಸಿಬಿಸಿ ಭೂರಿ ಭೋಜನ ಬಂದಿತ್ತು. ಜಿ. ಕೆ ಕ್ಯಾಂಟ್ರಿಸ್​ನಿಂದ ಚಪಾತಿ, ಪಲಾವ್, ಮೊಸರನ್ನ ಬಜ್ಜಿ ಹಣ್ಣುಗಳು ಜೆ.ಕೆ ಕ್ಯಾಂಟ್ರಿಸ್​ನಿಂದ ವಿಧಾನಸಭೆಗೆ ತರಲಾಗಿತ್ತು. ಇದನ್ನು ಸ್ವಂತ ಖರ್ಚಿನಿಂದಲೇ ಆರ್ ಅಶೋಕ್ ತರಿಸಿಕೊಂಡಿದ್ದರು. ಸರ್ಕಾರದ ಹಣದಲ್ಲಿ ತಮಗೆ ಊಟ ಬೇಡ ಎಂದಿರುವ ಅಶೋಕ್ ನಾಲ್ಕಾರು ಸಾವಿರ ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಮಾತನಾಡಬೇಕು ಊಟ ಯಾರಿಗೆ ಬೇಕು ಎಂದು ಗುಡುಗಿದ್ದಾರೆ. ಹೀಗಾಗಿ ತಮ್ಮ ಹಣದಲ್ಲಿಯೇ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ:ವಾಲ್ಮೀಕಿ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ MD ಕಲ್ಲೇಶಪ್ಪ ಅಮಾನತು ಆದೇಶದ ಸಾಕ್ಷಿ ಬಿಚ್ಚಿಟ್ಟ ಬಿಜೆಪಿ!

publive-image

ವಿಧಾನಸೌಧಕ್ಕೆ ರಗ್ಗು-ದಿಂಬು, ಹೊದಿಕೆ ವ್ಯವಸ್ಥೆ

ಇನ್ನು ಅಹೋರಾತ್ರಿ ಧರಣಿ ನಡೆಸಲು ಸಜ್ಜಾಗಿರುವ ಬಿಜೆಪಿ, ಎಲ್ಲ ಶಾಸಕರಿಗೆ ರಗ್ಗು ದಿಂಬು ಹೊದಿಕೆ ವ್ಯವಸ್ಥೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಬಂದು ವಿಧಾನಸೌಧದ ಮೊಗಸಾಲೆಯಲ್ಲಿ ರಗ್ಗು ದಿಂಬು ಹೊದಿಕೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಮಲಗಲು ನನಗೆ ಸ್ವಂತ ರಗ್ಗು ದಿಂಬು ಹೊದಿಕೆಯೇ ಬೇಕು ಎಂದು ಶಾಸಕ ಪ್ರಭು ಚೌವ್ಹಾಣ್​ ತಮ್ಮದೇ ರಗ್ಗು ದಿಂಬು ಹೊದಕೆಯನ್ನು ತಂದಿದ್ದರು.

Advertisment

publive-image

ಬಿಜೆಪಿ-ಜೆಡಿಎಸ್ ಶಾಸಕರಿಂದ ಭಜನೆ ಕುಣಿತ ಆರಂಭ

ಅಹೋರಾತ್ರಿ ಧರಣಿ ಮಾಡುತ್ತಿರುವ ಬಿಜೆಪಿ ಶಾಸಕರು ಭಜನೆ ಮಾಡುತ್ತಾ ತಾಳ ತಮಟೆ ಬಡೆಯುತ್ತಾ ವಿಭಿನ್ನವಾಗಿ ಧರಣಿ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸಿಟಿ ರವಿ, ಸುನೀಲ್ ಕುಮಾರ್, ಎನ್ ರವಿಕುಮಾರ್ಮ ಶರವಣ, ಸುರೇಶ್​ಗೌಡ ಸುರೇಶ್ ಕುಮಾರ್, ಶಾಂತಾರಾಮ್ ಸಿದ್ಧಿ, ಅರಗ ಜ್ಞಾನೆಂದ್ರ ಸೇರಿ ಹಲವು ಶಾಸಕರು ಭಜನೆಯಲ್ಲಿ ಭಾಗಿಯಾದ್ರು. ಇನ್ನು ಪ್ರಭು ಚೌವ್ಹಾಣ್​ ಭಜನೆಯ ತಾಳಕ್ಕೆ ಕುಣಿದು ಕುಪ್ಪಳಿಸಿದ್ರು. ವಾಲ್ಮೀಕಿ ನಿಗಮ ಗೋವಿಂದ, ಮೂಡ ಸೈಟು ಗೋವಿಂದ ಎಂದು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

publive-image

ಒಟ್ಟಾರೆ ವಿಧಾನಸಭೆಯ ಮುಂಗಾರು ಅಧಿವೇಶನ ಇನ್ನು ಎರಡು ದಿನ ನಡೆಯಬೇಕಿದೆ. ಆದ್ರೆ ಇಷ್ಟು ದಿನ ನಡೆದ ಸದನದಲ್ಲಿ ಯಾವುದೇ ಪ್ರಮುಖ ಬೆಳವಣಿಗೆಗಳು ಆಗಿಲ್ಲ. ಸರಿಯಾದ ಚರ್ಚೆಗೆ ಈ ಮುಂಗಾರು ಅಧಿವೇಶನ ಸಾಕ್ಷಿಯಾಗಿಲ್ಲ. ಉಭಯ ಪಕ್ಷಗಳ ಕೆಸರೆರಚಾಟಕ್ಕಷ್ಟೇ ಸೀಮಿತವಾಗಿದೆ. ಇನ್ನೆರಡು ದಿನ ನಡೆಯಲಿರುವ ಸದನವೂ ಕೂಡ ಅದೇ ಮಾದರಿಯಲ್ಲಿ ಸಾಗಿ ಮುಗಿಯಲಿದೆ ಅನ್ನೋದಕ್ಕೆ ಇವೆಲ್ಲಾ ಘಟನೆಗಳು ಸಾಕ್ಷಿಯಾಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment