ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವು.. ಡೆತ್​ನೋಟ್​ನಲ್ಲಿ ಮಾಡಿದ ಆರೋಪಗಳು ಏನೇನು..?

author-image
Ganesh
Updated On
ಪೊನ್ನಣ್ಣ, ಮಂಥರ್‌ಗೌಡ ವಿ‌ರುದ್ಧ FIR ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ -ಪಟ್ಟು ಹಿಡಿದ ವಿನಯ್ ಕುಟುಂಬ
Advertisment
  • ರಾಜಕೀಯ ಚರ್ಚೆಗೆ ನಾಂದಿ ಹಾಡಿದ ವಿನಯ್ ಸಾವು ಪ್ರಕರಣ
  • ವಿನಯ್ ಸೋಮಯ್ಯ ಯಾರ ಮೇಲೆ ಆರೋಪ ಮಾಡಿದ್ದಾರೆ?
  • ರಾಜ್ಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಕಾರ್ಯಕರ್ತನ ಸಾವು

ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆತ್ಮಹತ್ಯೆಗೂ ಮುನ್ನ ವಿನಯ್, ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್​​ನೋಟ್ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ..

ಏನಿದು ಪ್ರಕರಣ..?

ಕೊಡಗು ಜಿಲ್ಲೆಯ ಸೋಮವಾರಪೇಟೆ ಗೋಣಿಮರೂರು ನಿವಾಸಿ ವಿನಯ್ ಸೋಮಯ್ಯ ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದು, ಇಂದು ಬೆಳಗ್ಗೆ 4.30ಕ್ಕೆ ಸಾವಿಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮುನ್ನ ತಮ್ಮ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾರೆ ಎನ್ನಲಾಗಿದೆ. ಸಾಯುವುದಕ್ಕೂ ಮೊದಲು ವಿನಯ್ ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್​ನೋಟ್​ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್​ ಮುಖಂಡ ತೆನ್ನಿರ ಮೈನಾ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Breaking: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಸಾವಿನ ಸುತ್ತ ಹಲವು ಅನುಮಾನ

ಡೆತ್​​ನೋಟ್​ನಲ್ಲಿ ಏನಿದೆ..?

ಎಲ್ಲರಿಗೂ ನನ್ನ ಕೊನೆಯ ನಮಸ್ತೆ.. ನಾನು ವಿನಯ್ KS,

2 ತಿಂಗಳಿನಿಂದ ಮನಸ್ಸು ಹತೋಟಿಗೆ ಬರುತಿಲ್ಲ. ಯಾರೋ ಒಬ್ಬರು ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ whatsapp ಗ್ರೂಪ್​ನಲ್ಲಿ ಹಾಕಿದ ಮೆಸೇಜ್​ಗೆ ಅಡ್ಮಿನ್ ಆದ ನಮ್ಮನ್ನು ಹೊಣೆ ಮಾಡಿ ರಾಜಕೀಯ ಪ್ರೇರಿತ FIR ಹಾಕಿದರು. ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ ರಾಜಕೀಯ ದ್ವೇಷಕ್ಕೆ ಜೀವನದ ಜೊತೆ ಆಟ ಆಡಿದ ತೆನ್ನಿರ ಮೈನಾ ನನ್ನ ಸಾವಿಗೆ ನೇರ ಹೊಣೆ.
ನಮ್ಮ ಮೇಲೆ FIR ಹಾಕಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಇವನೇ. ನಮ್ಮ ಪರ್ಮಿಷನ್ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹೇಗೆ ಉಪಯೋಗಿಸುತಾರೆ? ನನ್ನ ಮೇಲಿನ ಆರೋಪ ಸಬೀತಾಗಿಲ್ಲ. ಇದನ್ನೆಲ್ಲ ನೋಡಿದ ನಮ್ಮ ಮನೆಯವರಿಗೆ, ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತಾ ನೀವೇ ಊಹಿಸಿಕೊಳ್ಳಿ..

FIR ದಿನದಿಂದ ಜಾಮೀನು ಸಿಗುವ ತನಕ ಅಮ್ಮನ ಜೊತೆ ಮಾತಾಡಿಲ್ಲ. ಇವರ ಕಾರಣಕ್ಕೆ ಜೀವ ಕಳೆದುಕೊಳ್ತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಅವರನ್ನೇ ಕೇಳಿ, ಅವರ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಯ ತನಿಖೆಯೂ ಆಗಬೇಕು.

ಆ ಗ್ರೂಪ್​ನಲ್ಲಿರುವ ಯಾರನ್ನು ಬೇಕಾದರೂ ಕೇಳಿ.. ನನ್ನ ಒಂದು ಮೆಸೇಜ್ ಕೂಡಾ ಯಾರನ್ನೂ ತೇಜೋವಧೆ ಮಾಡುವ ಹಾಗಿರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕಾಗಿ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ FIR ಹಾಕಿದರು. ಜಾಮೀನು ಸಿಕ್ಕಿದ ನಂತರ ಕೂಡಾ ಆತ್ಮೀಯರಿಗೆ ಕರೆ ಮಾಡಿ ಮಡಿಕೇರಿ ಪೊಲೀಸರು ನನಗಾಗಿ ಹುಡುಕಾಟ ನಡೆಸಿದರು. ಶುಕ್ರವಾರ ಜಾಮೀನು ಸಿಕ್ಕಿದ್ದರೂ ಶನಿವಾರ ಸ್ನೇಹಿತನ ಮನೆಗೆ ಹೋಗಿ ವಿಚಾರಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ವಿರಾಜಪೇಟೆಯ MLA ಆದ ಪೊನ್ನಣ್ಣನ ಆದೇಶ ಅಂತ ಸ್ವತಃ ಮಡಿಕೇರಿಯ ಒಬ್ಬ ಪೊಲೀಸ್ ಹೇಳಿದರು.

ನಾನು ಕುಶಾಲನಗರದ ಸರ್ಕಾರಿ ಹಾಸ್ಪಿಟಲ್ ಬಗ್ಗೆ ಗ್ರೂಪ್​ನಲ್ಲಿ ಕೇಳಿದಕ್ಕೆ ಮಡಿಕೇರಿಯ MLA ಮಂಥರ್ ಗೌಡ ನನಗೆ ಕಾಲ್ ಮಾಡಿ ಹಾಗೆಲ್ಲ ಗ್ರೂಪ್​ನಲ್ಲಿ ಯಾಕೆ ಮೆಸೇಜ್ ಹಾಕ್ತೀಯಾ ಎಂದು ಗದರಿದ್ದಾರೆ. ಏನಿದ್ರೂ ನನಗೆ ಹೇಳು, ಗ್ರೂಪ್​ನಲ್ಲಿ ಹಾಕಿದ್ರೆ ಸರಿ ಇರಲ್ಲ ಎಂದಿದ್ದಾರೆ. ಪೂರಕ ಸಾಕ್ಷಿಯಾಗಿ ವಾಟ್ಸ್​​ಆ್ಯಪ್​ ಕಾಲ್​ನ ಸ್ಕ್ರೀನ್​ಶಾಟ್ ಕಳಿಸಿದ್ದೇನೆ. ಅದರಲ್ಲಿ ನೀವೇ ನೋಡಿ, ನಾನು ಅವರಿಗೆ ಕಾಲ್ ಮಾಡಿದ್ದಾ ಅಥವಾ ಅವರೇ ನನಗೆ ಮಾಡಿದ್ದಾ ಅಂತಾ.

ಹರೀಶ್ ಪೂವಯ್ಯ ಇವನು, ಮಾರ್ಚ್ 11ಕ್ಕೆ ಪೆರ್ಮೆರ ಕೊಡವ ಹಾಗೂ ನಂಗ ಕೊಡಗ್​ರ ಕೊಡವ ಮಕ್ಕ ಗ್ರೂಪ್​ನಲ್ಲಿ ಪುನಃ ಪುನಃ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ತೇಜವಧೆ ಮಾಡುತಿದ್ದಾರೆ. ಇದಕೆಲ್ಲ ಕಾರಣ Tenneera Maheena. ನನ್ನ ಮೇಲೆ ದಾಖಲಾಗಿದ್ದ ಎಫ್​​ಐಆರ್​ಗೆ ಹೈಕೋರ್ಟ್​ ತಡೆ ನೀಡಿದೆ. ಇಷ್ಟೆಲ್ಲ ಆದಮೇಲೂ ಕೆಲವು ರಾಜಕೀಯ ಪ್ರೇರಿತ ಜನರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ನನ್ನ ತೇಜೋವಧೆ ಮಾಡ್ತಿದ್ದಾರೆ. ನಮ್ಮನ್ನು ಕಿಡಿಗೇಡಿಗಳು ಎಂದು ಕರೆಯೋದು ಎಷ್ಟು ಸರಿ? ನಮ್ಮ ಮೇಲೆ ರೌಡಿ ಶೀಟರ್ ಓಪನ್ ಮಾಡುವ ಹುನ್ನಾರ ನಡೆದಿದೆ ಎಂದು ತಿಳಿದುಬಂದಿದೆ. ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಬೇಕು. ಆಗಲೇ ನನ್ನ ಸಾವಿಗೆ ನ್ಯಾಯ ದೊರಕುವುದು.

ಬಿಜೆಪಿಗರಿಗೆ ನನ್ನ ಮನವಿ..

ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಕುಟುಂಬಕ್ಕೆ ಕೈಲಾದಷ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಹಾಯ ಮಾಡಿ. ನನ್ನ ತಾಯಿ, ಮಡದಿ, ಮಗಳು ಹಾಗೂ ನಮ್ಮ ಕುಟುಂಬಕ್ಕೆ ನನ್ನ ಸಾವಿನ ಸಮಯದಲ್ಲಿ ಟಾರ್ಚರ್ ಕೊಡದೆ ಕಾರ್ಯ ಸುಸೂತ್ರವಾಗಿ ನಡೆಯಲು ಸಹಾಯ ಮಾಡಿ. ಇದು ನನ್ನ ಕಳಕಳಿಯ ವಿನಂತಿ. ಯಾರೂ ಕೂಡಾ ನನ್ನ ಸಾವಿಗೆ ರಜೆ ಹಾಕಿ ದೂರದೂರಿಂದ ಬರುವ ಅವಶ್ಯಕತೆಯಿಲ್ಲ. ನೀವೆಲ್ಲಿದ್ದೀರೋ ಅಲ್ಲಿಂದಲೇ ನಮ್ಮ ಕುಟುಂಬಕ್ಕೆ ಆಶೀರ್ವದಿಸಿ.

ಚಲನ್ ಅಣ್ಣ, ವಿಷ್ಣು ಅಣ್ಣ, ಹಾಗೂ ಸಚಿನ್ ಅಣ್ಣ ನನ್ನ ಮನೆಯವರೊಂದಿಗೆ ನಿಂತು ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಡಿ. ನನ್ನ ಮೇಲೆ FIR ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್, ಚಲನ್, ಸಚಿನ್, ರಾಕೇಶ್ ದೇವಯ್ಯ, ಅಡ್ವೋಕೇಟ್ ನಿಶಾಂತ್, ಅಡ್ವೋಕೇಟ್ ಮೋಹನ್ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.

ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ FIRಗೆ ಒಂದು ಪಾಠವಾಗಬೇಕು. ಪೊಲೀಸ್​ನವರು ಸ್ವಲ್ಪ ವಿಚಾರ ಮಾಡಿ FIR ಹಾಕಬೇಕು. ಯಾರೋ ಒಬ್ಬರು ದೂರು ದಾಖಲಿಸಿದರು ಅಂತ ಸುಖಾ ಸುಮ್ಮನೆ FIR ಹಾಕುವುದು ಎಷ್ಟು ಸರಿ? ಈ ಮೆಸೇಜ್ ಎಲ್ಲಾ ಸಾಮಾಜಿಕ ಜಾಲತಣದಲ್ಲಿ ಹಾಕಿ. ಇದರಿಂದಾಗಿ ಅಮಾಯಕರ ಮೇಲೆ ರಾಜಕೀಯ ಪ್ರೇರಿತ FIR ಹಾಕುವುದು ಕೊನೆಗೊಳ್ಳಲಿ. ನಾನು ನಮ್ಮ ಮನೆಯವರಿಗೆ ಏನೂ ಬರೆಯುತಿಲ್ಲ, ಯಾಕೆಂದರೆ ನನಗೆ ಅವರಿಗೆ ಏನು ಹೇಳುವುದೆಂದು ತಿಳಿಯುತಿಲ್ಲ.

ಎಲ್ಲರೂ ಯೋಚಿಸಬಹುದು ಘಟನೆ ಆಗಿ ಇಷ್ಟು ದಿನ ಆದ ಮೇಲೆ ಇವನಿಗೆ ಏನಾಯಿತು ಅಂತ. ನಾನು ಒಮ್ಮೆ ನನ್ನ ಮನೆಗೆ ಹೋಗಿ ಬರೋದನ್ನ ಕಾಯುತಿದ್ದೆ. ನನ್ನ ಮನೆಗೆ ಹೋಗಿ ಎಲ್ಲಾ ಕುಟುಂಬದವರ ಜೊತೆ ಕಳೆದು ಒಳ್ಳೆಯ ಸಮಯದ ನೆನಪಿನಲ್ಲಿ ನಾನು ವಿದಾಯ ಹೇಳುತಿದ್ದೇನೆ.

ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.
ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೋಗುತಿದ್ದೇನೆ.
ಇಂತಿ ನಿಮ್ಮ
VINAY KS

ಇದನ್ನೂ ಓದಿ:ನಿರಂತರ ಕಿರುಕುಳ, ಒಂದು ಜೀವ ಬಲಿಯಾಗಿದೆ -ಮೃತ ಬಿಜೆಪಿ ಕಾರ್ಯಕರ್ತ ಪರ ವಕೀಲರಿಂದ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment