ನಿರಂತರ ಕಿರುಕುಳ, ಒಂದು ಜೀವ ಬಲಿಯಾಗಿದೆ -ಮೃತ ಬಿಜೆಪಿ ಕಾರ್ಯಕರ್ತ ಪರ ವಕೀಲರಿಂದ ಆರೋಪ

author-image
Veena Gangani
Updated On
ನಿರಂತರ ಕಿರುಕುಳ, ಒಂದು ಜೀವ ಬಲಿಯಾಗಿದೆ -ಮೃತ ಬಿಜೆಪಿ ಕಾರ್ಯಕರ್ತ ಪರ ವಕೀಲರಿಂದ ಆರೋಪ
Advertisment
  • ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
  • ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಾವಿಗೆ ಶರಣು
  • ಸೋಮವಾರಪೇಟೆ ಗೋಣಿಮರೂರು ನಿವಾಸಿಯಾಗಿದ್ದ ವಿನಯ್​

ಬೆಂಗಳೂರು:ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವು ಪ್ರಕರಣ ತುಂಬಾ ಬೇಸರದ ಸಂಗತಿ. ಅನಾವಶ್ಯಕವಾಗಿ ಒಂದು ಜೀವ ಬಲಿಯಾಗಿದೆ ಎಂದು ವಿನಯ್ ಪರ ವಕೀಲ ನಿಶಾಂತ್ ಕುಶಾಲಪ್ಪ ಆರೋಪಿಸಿದ್ದಾರೆ.

ಏನಿದು ಪ್ರಕರಣ..?

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗವಾರದಲ್ಲಿ ನಡೆದಿದೆ. ವಿನಯ್ ಸೋಮಯ್ಯ (39) ಆತ್ಮಹತ್ಯೆಗೆ ಶರಣಾಗಿರುವ ಬಿಜೆಪಿ ಕಾರ್ಯಕರ್ತ. ವಿನಯ್ ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ಗೋಣಿಮರೂರು ನಿವಾಸಿಯಾಗಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಇಂದು ಬೆಳಗ್ಗೆ 4.30ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿನಯ್​ಗೆ ಮದುವೆ ಆಗಿತ್ತು, ಒಂದು ಮಗು ಕೂಡ ಇದೆ.

ಇದನ್ನೂ ಓದಿ:Breaking: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಸಾವಿನ ಸುತ್ತ ಹಲವು ಅನುಮಾನ

publive-image

ವಿನಯ್ ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ಹೆಸರಿನ ವಾಟ್ಸ್​ಆ್ಯಪ್​ ಗ್ರೂಪ್​ನ ಅಡ್ಮಿನ್ ಆಗಿದ್ದರು. ಇತ್ತೀಚೆಗೆ ಇದೇ ಗ್ರೂಪ್​ ಮೂಲಕ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಆಕ್ಷೇಪಾರ್ಹ ಫೋಟೋ ಒಂದು ವೈರಲ್ ಆಗಿತ್ತು. ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆ‌ರ್ ದಾಖಲಾಗಿತ್ತು. ಇದರಿಂದ ಮನನೊಂದು ವಿನಯ್ ಡೆತ್​ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

publive-image

ವಕೀಲರು ಹೇಳಿದ್ದೇನು..?

ಘಟನೆಗೆ ಸಂಬಂಧಿಸಿದಂತೆ ಮಾತಾಡಿರುವ ಮೃತ ವಿನಯ್ ಪರ ವಕೀಲ ನಿಶಾಂತ್ ಕುಶಾಲಪ್ಪ, ವಿನಯ್ ಕೇಸ್​​ನಲ್ಲಿ ಮೂರನೇ ಆರೋಪಿ ಆಗಿದ್ದರು. ಕೇಸ್​​ಗೆ ತಡೆಯಾಜ್ಞೆ ಇದ್ದರೂ ನಿರಂತರ ಕಿರುಕುಳ ನೀಡಿದ್ದಾರೆ. ದೂರುದಾರ, ಇಬ್ಬರು ಶಾಸಕರ ಕಡೆಯವರು ಹಿಂಸೆ ಕೊಟ್ಟಿದ್ದಾರೆ. ಮೃತ ವಿನಯ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡ್ತಾರೆ. ವಿನಯ್ ಡೆತ್​​​ನೋಟ್​​​ನಲ್ಲಿ ಎಲ್ಲಾ ಡಿಟೈಲ್ಸ್ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment