ಬೇಕರಿ ಮೇಲೂ ಯುದ್ಧದ ಎಫೆಕ್ಟ್.. ಹೈದರಾಬಾದ್ ಬಳಿಕ ಬೆಂಗಳೂರಿನ ‘ಕರಾಚಿ’ ಮೇಲೂ ಸ್ಟ್ರೈಕ್..!

author-image
Ganesh
Updated On
ಬೇಕರಿ ಮೇಲೂ ಯುದ್ಧದ ಎಫೆಕ್ಟ್.. ಹೈದರಾಬಾದ್ ಬಳಿಕ ಬೆಂಗಳೂರಿನ ‘ಕರಾಚಿ’ ಮೇಲೂ ಸ್ಟ್ರೈಕ್..!
Advertisment
  • ಪಾಕಿಸ್ತಾನದ ಕರಾಚಿ ಹೆಸ್ರು ಬದಲಾವಣೆಗೆ ಹೆಚ್ಚಾಯ್ತು ಕೂಗು
  • ಹೈದರಾಬಾದ್‌​ ನಂತ್ರ ಬೆಂಗಳೂರಿನಲ್ಲೂ ಮರು ನಾಮಕರಣಕ್ಕೆ ಆಗ್ರಹ
  • ಬೇಕರಿ ಮೇಲೆ ರಾಷ್ಟ್ರ, ನಾಡ ಧ್ವಜ ಕಟ್ಟಿ ಸಿಬ್ಬಂದಿಯಿಂದ ದೇಶ ಪ್ರೇಮ

ಭಾರತ-ಪಾಕಿಸ್ತಾನದ ನಡುವೆ ಆವರಿಸಿದ್ದ ಯುದ್ಧದ ಕಾರ್ಮೋಡದ ಎಫೆಕ್ಟ್ ಬೇಕರಿಗೂ ತಟ್ಟಿದೆ. ಹೈದ್ರಾಬಾದ್ ಬಳಿಕ ಬೆಂಗಳೂರಲ್ಲೂ ಕರಾಚಿ ಕಿಚ್ಚು ಶುರುವಾಗಿದೆ. ಬಿಸ್ಕೆಟ್ ಪ್ರಿಯರ ಫೆವರೇಟ್ ಸ್ಪಾಟ್, ಕರಾಚಿ ಬೇಕರಿಯ ಮರುನಾಮಕರಣಕ್ಕೆ ನಗರದಲ್ಲೂ ಆಗ್ರಹ ಕೇಳಿ ಬಂದಿದೆ.

ಬೆಂಗಳೂರಿನಲ್ಲೂ ಕರಾಚಿ ಬೇಕರಿ ಹೆಸ್ರು ಬದಲಾವಣೆಗೆ ಆಗ್ರಹ

ಬೆಂಗಳೂರಿನ ಇಂದಿರಾನಗರದಲ್ಲಿರುವ ಕರಾಚಿ ಬೇಕರಿಯ ಹೆಸರನ್ನ ಬದಲಾಯಿಸುವಂತೆ, ಮರುನಾಮಕರಣಕ್ಕೆ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆ ಮುಂಜಾಗೃತವಾಗಿ ಹೋಟೆಲ್ ಸಿಬ್ಬಂದಿ ಭದ್ರತೆಯ ಕೋರಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ತಮ್ಮ ಬೇಕರಿಯ ಮೇಲೆ ರಾಷ್ಟ್ರ ಧ್ವಜ, ನಾಡ ಧ್ವಜ ಹಾಕುವ ಮೂಲಕ ಈ ಮಣ್ಣಿಗೆ ಎಂದಿಗೂ ಚಿರ ಋಣಿ ಅನ್ನೋ ಸಂದೇಶ ರವಾನಿಸಿದ್ದಾರೆ.

ನಾವೆಂದೂ ದೇಶ ಪ್ರೇಮಿಗಳು

ಖಂಚಂದ್ ರಾಮ್ನಾನಿ ಎಂಬ ಸಿಂಧಿ ಹಿಂದೂ ಕುಟುಂಬದವರು 1947ರಲ್ಲಿ ಈ ಬೇಕರಿಯನ್ನು ಸ್ಥಾಪಿಸಿದ್ರು. ಭಾರತದ ವಿಭಜನೆಯಾಗುವ ಸಂದರ್ಭದಲ್ಲಿ ಪಾಕಿಸ್ತಾನದ ಕಾರಾಚಿಯಿಂದ ಹೈದರಾಬಾದ್‌ಗೆ ವಲಸೆ ಬಂದಿದ್ರು. ತಮ್ಮ ಕುಟುಂಬ ಕಸುಬಾದ ಬೇಕರಿ ತಿನಿಸುಗಳ ತಯಾರಿಕೆಯನ್ನು ಹೈದರಾಬಾದ್​ನಲ್ಲಿ ಸ್ಥಾಪಿಸಿದ್ರು. ಬೇಕರಿಯ ಹೆಸರನ್ನು ತಮ್ಮೂರಾದ ಕರಾಚಿಯ ನೆನಪಿಗಾಗಿ ಇಟ್ಟಿದ್ರು. ನಾವೆಂದೂ ದೇಶ ಪ್ರೇಮಿಗಳು. ಈಗ ಯುದ್ಧದ ಸಮಯದಲ್ಲಿ ಸಮಸ್ಯೆಯಾಗಿದೆ. ಯಾರೂ ಆವೇಶಕ್ಕೆ ಒಳಗಾಗಬಾರದು ಎಂದು ಕರಾಚಿ ಬೇಕರಿ ಮ್ಯಾನೇಜ್ಮೆಂಟ್ ಹೇಳಿದೆ.

ಒಟ್ಟಿನಲ್ಲಿ ಭಾರತ-ಪಾಕಿಸ್ತಾನದ ನಡುವೆ ಆವರಿಸಿದ್ದ ಯುದ್ಧದ‌ಕಾರ್ಮೋಡ ತಿಳಿಯಾಗಿದೆ. ಈ ಯುದ್ಧದ ವಾತಾವರಣ ಜನರಿಗೆ, ವ್ಯಾಪಾರಸ್ಥರಿಗೆ ತೊಂದರೆ ಉಂಟು ಮಾಡದಿರಲಿ ಅನ್ನೋ ಮಾತುಗಳು ಕೂಡ ಸಾರ್ವಜನಿಕ ಪಡಸಾಲೆಯಲ್ಲಿ ಕೇಳಿ ಬರ್ತಿದೆ.

ಇದನ್ನೂ ಓದಿ: ಅಂತೂ ತವರಿಗೆ ಬಂದ ಸಮಾಧಾನ.. ಕಾಶ್ಮೀರಕ್ಕೆ ಓದಲು ಹೋಗಿದ್ದ ಕನ್ನಡಿಗರ ಪಾಡು ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment