newsfirstkannada.com

ಜಾರ್ಖಂಡ್ ಮುಖ್ಯಮಂತ್ರಿ ನಾಪತ್ತೆ.. ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ ಘೋಷಣೆ

Share :

Published January 30, 2024 at 2:18pm

Update January 30, 2024 at 2:25pm

    ರಾಜ್ಯ ಬಿಜೆಪಿ ಅಧ್ಯಕ್ಷರಿಂದ 11 ಸಾವಿರ ಬಹುಮಾನ ಘೋಷಣೆ

    ಕಳೆದ 24 ಗಂಟೆಯಿಂದ ಮೊಬೈಲ್ ಸ್ವಿಚ್ಡ್ ಆಫ್, ಸಂಪರ್ಕಕ್ಕೆ ಸಿಕ್ಕಿಲ್ಲ

    ಇಡಿ ವಿಚಾರಣೆಗೆ ಹೆದರಿ ತಲೆ ಮರೆಸಿಕೊಂಡಿದ್ದಾರೆಂದು ಆರೋಪ

ಜಾರ್ಖಂಡ್ ಮುಖ್ಯಂತ್ರಿ ಹೇಮಂತ್ ಸೊರೇನ್ ಎಲ್ಲಿದ್ದಾರೆಂದು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಟ್ರ್ಯಾಕ್ ಮಾಡ್ತಿದ್ದಾರೆ. ಕಳೆದ 28 ಗಂಟೆಯಿಂದ ಯಾರ ಸಂಪರ್ಕಕ್ಕೂ ಸಿಗದೇ ನಿಗೂಢವಾಗಿರುವ ಸೊರೇನ್ ಅವರನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಸರ್ಕಸ್ ಮಾಡಲಾಗ್ತಿದೆ. ಈ ಪ್ರಕರಣವು ಇದೀಗ ಜಾರ್ಖಂಡ್​​ನಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಬುಲಾಲ್ ಮರಂಡಿ ಸೋಶಿಯಲ್ ಮೀಡಿಯಾದಲ್ಲಿ ‘ಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ’ ಎಂಬ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಾಪತ್ತೆಯಾಗಿರುವ ಜಾರ್ಖಂಡ್ ಮುಖ್ಯಮಂತ್ರಿಗಾಗಿ ಹುಡುಕಾಟ ನಡೆಯುತ್ತಿದೆ. ಯಾರಾದರೂ ನೋಡಿದ್ದಲ್ಲಿ, ಈ ವಿಳಾಸಕ್ಕೆ ತಿಳಿಸಿ. ಸರಿಯಾದ ಮಾಹಿತಿ ನೀಡಿದರೆ 11 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಗೇಲಿ ಮಾಡಿದೆ.

ಇದನ್ನೂ ಓದಿ: CM ಸೊರೇನ್ ನಾಪತ್ತೆ! 36 ಲಕ್ಷ, BMW ಕಾರು ಸೀಜ್ ಮಾಡಿದ ED; ಏನಾಗ್ತಿದೆ ಜಾರ್ಖಂಡ್​ನಲ್ಲಿ?

ಅಂದ್ಹಾಗೆ ಜಾರ್ಖಂಡ್ ಮುಖ್ಯಮಂತ್ರಿ ಕಳೆದ 28 ಗಂಟೆಗಳಿಂದ ನಾಪತ್ತೆಯಾಗಿದ್ದಾರೆ. ದೆಹಲಿಯ ನಿವಾಸದಿಂದ ನಾಪತ್ತೆಯಾಗಿರುವ ಸಿಎಂ ಹೇಮಂತ್ ಸೊರೇನ್ ಎಲ್ಲಿದ್ದಾರೆಂದು ಗೊತ್ತಿಲ್ಲ. ಇತ್ತ ದೆಹಲಿ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು 36 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾರ್ಖಂಡ್ ಮುಖ್ಯಮಂತ್ರಿ ನಾಪತ್ತೆ.. ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ ಘೋಷಣೆ

https://newsfirstlive.com/wp-content/uploads/2024/01/HEMANT-SOREN-1.jpg

Load More