ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿತಾ ಭಸ್ಮ, ಮಾನವನ ಬುರುಡೆಗಳು.. ಮಾಟ ಮಂತ್ರ, ಬಲಿದಾನದ ಭಯ!

author-image
admin
Updated On
ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿತಾ ಭಸ್ಮ, ಮಾನವನ ಬುರುಡೆಗಳು.. ಮಾಟ ಮಂತ್ರ, ಬಲಿದಾನದ ಭಯ!
Advertisment
  • 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು, ಅಕ್ಕಿ ಪತ್ತೆ!
  • ಮಾಟ, ಮಂತ್ರಕ್ಕಾಗಿ ಬಲಿದಾನಗಳು ನಡೆದಿರುವ ಅನುಮಾನ
  • ಇತ್ತೀಚೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಿಕಿತ್ಸೆ

ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಯಲ್ಲಿ ಮಾಟ-ಮಂತ್ರದ ಕುತಂತ್ರ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಖಾಯಂ ಟ್ರಸ್ಟಿ ಪ್ರಶಾಂತ್ ಮೆಹ್ತಾ ಅವರು ಆಸ್ಪತ್ರೆಯಲ್ಲಿ ನಡೆದಿರುವ ಅನಾಚಾರದ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಲೀಲಾವತಿ ಆಸ್ಪತ್ರೆಯ ಆಫೀಸ್‌ನ 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಹಾಗೂ ಅಕ್ಕಿಯನ್ನು ತುಂಬಿದ್ದು ಪತ್ತೆಯಾಗಿವೆ. ಆಸ್ಪತ್ರೆ ಟ್ರಸ್ಟಿ ಪ್ರಶಾಂತ್ ಮೆಹ್ತಾ ಅವರು ಇದು ಮಾಜಿ ಆಡಳಿತ ಮಂಡಳಿ ಸದಸ್ಯರು ಮಾಡಿರುವ ಕೃತ್ಯ ಎಂದು ನೇರ ಆರೋಪ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಬಲಿದಾನ!
ಲೀಲಾವತಿ ಆಸ್ಪತ್ರೆಯಲ್ಲಿ ಮಾಜಿ ಆಡಳಿತ ಮಂಡಳಿ ಸದಸ್ಯರು ಮಾಟ, ಮಂತ್ರದಲ್ಲಿ ನಿರತರಾಗಿದ್ದರು. 2024ರ ಡಿಸೆಂಬರ್‌ನಲ್ಲಿ ಆಸ್ಪತ್ರೆಯ ಮಾಜಿ ಉದ್ಯೋಗಿಗಳು ಇದನ್ನ ನನ್ನ ಗಮನಕ್ಕೆ ತಂದಿದ್ದರು. ಆಗ ನಮಗೆ 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಪತ್ತೆಯಾದವು. ಇದರ ಮೂಲಕ ಲೀಲಾವತಿ ಆಸ್ಪತ್ರೆಯಲ್ಲಿ ಮಾಟ, ಮಂತ್ರಕ್ಕಾಗಿ ಬಲಿದಾನಗಳು ನಡೆದಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ? 

ಲೀಲಾವತಿ ಆಸ್ಪತ್ರೆಯು ಮುಂಬೈ ನಗರದಲ್ಲೇ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದಾಗಿದೆ. ಇತ್ತೀಚೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಮನೆಯಲ್ಲಿ ಚಾಕು ಇರಿತದ ಬಳಿಕ ಇದೇ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಬಾಲಿವುಡ್‌ನ ಸಾಕಷ್ಟು ಸೆಲಬ್ರಿಟಿಗಳು ಭೇಟಿ ನೀಡುವ ಆಸ್ಪತ್ರೆ ಇದಾಗಿದೆ.


">March 11, 2025

ಮಾಟ-ಮಂತ್ರಕ್ಕೆ ಕಾರಣವೇನು?
ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಹಾಲಿ ಟ್ರಸ್ಟಿಯಾಗಿರುವ ಪ್ರಶಾಂತ್ ಮೆಹ್ತಾ ಹಾಗೂ ಮಾಜಿ ಆಡಳಿತ ಮಂಡಳಿ ಸದಸ್ಯರ ಮಧ್ಯೆ ಸಮರ ಶುರುವಾಗಿದೆ. ಮಾಜಿ ಟ್ರಸ್ಟಿಗಳು ದುಬೈ ಮತ್ತು ಬೆಲ್ಜಿಯಂ ಮೂಲದವರಾಗಿದ್ದು, ಕಳೆದ 20 ವರ್ಷದಲ್ಲಿ 1250 ಕೋಟಿ ರೂಪಾಯಿ ದುರುಪಯೋಗ ಪಡಿಸಿಕೊಂಡಿರುವ ಆರೋಪವಿದೆ. 17 ಮಂದಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ. ಇದೀಗ ಮಾಟ-ಮಂತ್ರದ ಆರೋಪ ಹೊಸ ಸಂಚಲನ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment