ವಿಶ್ವದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?

author-image
Gopal Kulkarni
Updated On
ವಿಶ್ವದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?
Advertisment
  • ವಿಶ್ವದಲ್ಲಿ ಮತ್ತೆ ಮರುಕಳಿಸಲಿದೆಯಾ 1987ರಲ್ಲಿ ನಡೆದ ಬ್ಲ್ಯಾಕ್​ ಮಂಡೇ?
  • ಷೇರುಮಾರುಕಟ್ಟೆ ಇತಿಹಾಸದಲ್ಲಿ ಮೊದಲ ಬಾರಿ ಕಂಡ ಕರಾಳ ಇತಿಹಾಸ
  • ವಿಶ್ವದ ಆರ್ಥಿಕ ತಜ್ಞರು, ಷೇರುಪೇಟೆ ತಜ್ಞರು ಆತಂಕದಲ್ಲಿರುವುದು ಏಕೆ?

ಇಲ್ಲಿಯವರೆಗೂ ನಾವು ಬ್ಲ್ಯಾಕ್ ಎಂದ ತಕ್ಷಣ ಬ್ಲ್ಯಾಕ್​ ಫ್ರೈಡೇ ಕನೆಕ್ಟ್ ಆಗುತ್ತಿದ್ದೇವು. ಅಂದು ಅನೇಕ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಅನೇಕ ರೀತಿಯ ರಿಯಾಯಿತಿ ದೊರೆಯುತ್ತವೆ ಎಂಬ ಹುರುಪಿನಲ್ಲಿ ಇರುತ್ತಿದ್ದೇವು. ಈಗ ವಿಶ್ವಕ್ಕೆ ಹೊಸದೊಂದು ಶಬ್ದ ಪರಿಚಯಗೊಂಡಿದೆ ಅದು ಬ್ಲ್ಯಾಕ್ ಮಂಡೇ. ಈ ಬ್ಲ್ಯಾಕ್ ಮಂಡೇ ಈಗ ಜಾಗತಿಕವಾಗಿ ಷೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿಟ್ಟಿದೆ. ಅದಕ್ಕೆ ಕಾರಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್.

ಯುಎಸ್ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿಧಿಸುತ್ತಿರುವ ಆಮದು ಸುಂಕದಿಂದಾಗಿ ಈಗ ವಿಶ್ವದ ಅನೇಕ ರಾಷ್ಟ್ರಗಳ ಷೇರುಮಾರುಕಟ್ಟೆ ಕುಸಿದು ಪಾತಾಳಕ್ಕೆ ಕುಸಿದಿದೆ. ಏಪ್ರಿಲ್ 7, 2025 ಅಂದ್ರೆ ಇಂದು ಯುರೊಪ್ ಮತ್ತು ಏಷ್ಯಾದ ಷೇರುಮಾರುಕಟ್ಟೆಗಳು ದೊಡ್ಡ ಹೊಡೆತವನ್ನು ಪಡೆದಿವೆ. ಮಾರ್ಚ್​ 2020ರಿಂದ ಇದೇ ಮೊದಲ ಬಾರಿ ಜಪಾನ್ ಮತ್ತು ತೈವಾನ್​​ನ ಷೇರು ಮಾರುಕಟ್ಟೆ ತಲ್ಲಗೊಂಡಿದೆ. ಟೋಕಿಯೋದ ನಿಕ್ಕಿ 255, 18 ತಿಂಗಳಲ್ಲಿ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದಿದೆ. ಬ್ಯಾಂಕ್​ ಸ್ಟಾಕ್ಸ್​​ಗಳು ಮೂರು ದಿನಗಳಲ್ಲಿ ಶೇಕಡಾ 25 ರಷ್ಟು ಕುಸಿತ ಕಂಡಿವೆ. ಭಾರತದ ಷೇರು ಮಾರುಕಟ್ಟೆಯೂ ಕೂಡ ಇದಕ್ಕೆ ಹೊರತಲ್ಲ ಇಂದು ಷೇರು ಮಾರುಕಟ್ಟೆ ಸುಮಾರು ಶೇಕಡಾ 5 ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಟ್ರಂಪ್ ತೆರಿಗೆ ಯುದ್ಧಕ್ಕೆ ನಡುಗಿದ ಜಗತ್ತು.. ಭಾರತ ಸೇರಿ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣ..!

ಏಪ್ರಿಲ್ 6, 2025ರಂದು ಅಮೆರಿಕಾದ ಷೇರು ಮಾರುಕಟ್ಟೆ ವಿಶ್ಲೇಷಕ ಜಿಮ್ ಕ್ರಾಮೆರ್​ ಟ್ರಂಪ್​​ ತೆರಿಗೆ ನೀತಿ ನಮ್ಮನ್ನು 1987ನೇ ಇಸ್ವಿಗೆ ಕರೆದುಕೊಂಡು ಹೋಗುತ್ತಿದೆ. ಯಾವುದೇ ಸೂಚನೆ ನೀಡದೇ ಆ ಸಮಯದಲ್ಲಿ ಇದೇ ರೀತಿ ಷೇರು ಮಾರುಕಟ್ಟೆ ದೊಡ್ಡ ಹೊಡೆತಕ್ಕೆ ಈಡಾಗಿತ್ತು ಎಂದು ಹೇಳಿದ್ದಾರೆ.

publive-image

ಏನಿದು ಬ್ಲ್ಯಾಕ್ ಮಂಡೇ?
ಅಕ್ಟೋಬರ್ 19, 1987ನ್ನು ಬ್ಲ್ಯಾಕ್ ಮಂಡೆ ಎಂದು ಗುರುತಿಸಲಾಗುತ್ತದೆ. ಈ ಕಾಲದಲ್ಲಿ ಡೊವ್​ ಜೋನ್ಸ್ ಇಂಡಸ್ಟ್ಟೀಯಲ್​ನ ಷೇರುಗಳು ಒಂದೇ ದಿನದಲ್ಲಿ ಶೇಕಡಾ 22.6 ರಷ್ಟು ನೆಲಕ್ಕೆ ಕುಸಿದಿತ್ತು. ಇದು ವಿಶ್ವದಾದ್ಯಂತ ಷೇರು ಮಾರುಕಟ್ಟೆಗೆ ದೊಡ್ಡ ಹೊಡೆತ ಕೊಟ್ಟಿತ್ತು. ಟ್ರಿಲಿಯನ್​ಗಳ ಮಟ್ಟದಲ್ಲಿ ವಿಶ್ವದಾದ್ಯಂತ ಷೇರುಮಾರುಕಟ್ಟೆ ನಷ್ಟಕ್ಕೆ ಈಡಾಗಿತ್ತು. ಕೇವಲ ಒಂದೇ ಒಂದು ದಿನದಲ್ಲಿ. ಇದು ಷೇರು ಮಾರುಕಟ್ಟೆಯಲ್ಲಿಯೇ ಕರಾಳ ಇತಿಹಾಸವನ್ನು ಬರೆದಿತ್ತು. ಸದ್ಯ ಅದೇ ರೀತಿಯ ಮಹಾಪತನವೊಂದು ಷೇರು ಮಾರುಕಟ್ಟೆಯಲ್ಲಿ ಸಂಭವಿಸಲಿದೆ ಎಂದು ಷೇರುಪೇಟೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 1987ರಲ್ಲಿ ಎಲ್ಲ ದೊಡ್ಡ ಆರ್ಥಿಕ ಶಕ್ತಿಗಳು ಅನುಭವಿಸಿದ ನಷ್ಟವು ಮರುಕಳಿಸಬಹುದು ಎಂದು ಭಯದಲ್ಲಿದ್ದಾರೆ.

ಇದನ್ನೂ ಓದಿ: Hands Off! ಟ್ರಂಪ್​ನ ‘ನಾ ಮಾಟೇ ಶಾಸನಂ’ ವಿರುದ್ಧ ತಿರುಗಿಬಿದ್ದ ಜನ.. ಅಮೆರಿಕದಲ್ಲಿ ದೊಡ್ಡ ಬಿರುಗಾಳಿ..!

ಜನರು ಬ್ಲ್ಯಾಕ್ ಮಂಡೇ ಬಗ್ಗೆ ಮತ್ತೆ ಮಾತನಾಡುತ್ತಿರುವುದೇಕೆ?

ಶುಕ್ರವಾರ ಏಪ್ರಿಲ್ 4, 2025ರಂದು ಯುಎಸ್ ಮಾರುಕಟ್ಟೆ ಕೋವಿಡ್ 19 ಬಳಿಕ ದೊಡ್ಡ ಹೊಡೆತ ಅನುಭವಿಸಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 5 ಟ್ರಿಲಿಯನ್ ಡಾಲರ್​ಗಳಷ್ಟು ಷೇರುಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಸುಮಾರು 180 ದೇಶಗಳ ಮೇಲೆ ಟ್ರಂಪ್​ ಹೇರಿರುವ ಆಮದು ಸುಂಕ ಸದ್ಯ ಜಾಗತಿಕ ವ್ಯಾಪಾರ ಯುದ್ಧಕ್ಕೆ ವೇದಿಕೆಯಾಗಲಿದೆ ಎಂದು ಎಲ್ಲ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲ ಉದ್ಯಮಗಳು ದೊಡ್ಡ ಒತ್ತಡದಲ್ಲಿವೆ. ಇನ್ನೂ ಹೂಡಿಕೆದಾರರು ಹೂಡಿಕೆ ಮಾಡಲು ಕೂಡ ಭಯ ವ್ಯಕ್ತಪಡಿಸುತ್ತಿದ್ದಾರೆ. ಇದು ಬ್ಲ್ಯಾಕ್ ಮಂಡೇ 2.O ಗೆ ದೊಡ್ಡ ವೇದಿಕೆಯಾಗುವ ಸಂಭಾವ್ಯವಿದೆ ಎಂದು ಷೇರುಮಾರುಕಟ್ಟೆಯ ಕ್ಷೇತ್ರ ಭೀತಿಯಿಂದ ಬೆಚ್ಚಿ ಬಿದಿದೆ. ಅಂದಿನ ಇತಿಹಾಸ ಮರಳಿ ಸಂಭವಿಸದಿರಲಿ ಎಂಬ ಭರವಸೆಯೊಂದಿಗೆ ಷೇರುಮಾರುಕಟ್ಟೆಯ ಏರಿಳಿತದತ್ತ ಕಣ್ಣು ನೆಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment