/newsfirstlive-kannada/media/post_attachments/wp-content/uploads/2024/11/HEALTH-1.jpg)
ದ್ರಾಕ್ಷಿ, ಹಣ್ಣುಗಳ ಪರಿವಾರಕ್ಕೆ ಸೇರುತ್ತವೆ. ಇವುಗಳನ್ನು ಹಸಿಯಾಗಿ ತಿನ್ನಬಹುದು ಅಥವಾ ಒಣಗಿಸಿ ಕೂಡ ತಿನ್ನಬಹುದು. ದ್ರಾಕ್ಷಿಗಳನ್ನು ವಿವಿಧ ಆಹಾರಗಳಲ್ಲಿ ಬಳಕೆ ಮಾಡುವುದಲ್ಲದೇ ಪಾನೀಯಗಳನ್ನಾಗಿಯೂ ತಯಾರು ಮಾಡುತ್ತಾರೆ. ವೈನ್, ಜ್ಯಾಮ್, ಜ್ಯೂಸ್, ಒಣದ್ರಾಕ್ಷಿ, ವಿನಿಗರ್ ಮತ್ತು ದ್ರಾಕ್ಷಿ ಬೀಜದ ಎಣ್ಣೆ ಕೂಡ ತಯಾರಿ ಮಾಡುತ್ತಾರೆ. ಸದ್ಯ ಈಗ ಕಪ್ಪು ಒಣದ್ರಾಕ್ಷಿಗಳಿಂದ ಆರೋಗ್ಯಕ್ಕೆ ಏನು ಉಪಯೋಗ ಎನ್ನುವ ಮಾಹಿತಿ ಇಲ್ಲಿದೆ.
/newsfirstlive-kannada/media/post_attachments/wp-content/uploads/2024/11/HEALTH_1.jpg)
ಕಪ್ಪು ಒಣದ್ರಾಕ್ಷಿ ಹಲವು ಪೋಷಕಾಂಶ ಹೊಂದಿರುತ್ತವೆ. ಕಬ್ಬಿಣದ ಅಂಶವಿರುವ ಈ ಒಣ ಹಣ್ಣು ಆಮ್ಲಜನಕದ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಅನೇಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇವುಗಳಲ್ಲಿ ವಿಟಮಿನ್-ಸಿ ಯ ಅತ್ಯುತ್ತಮ ಮೂಲವಾಗಿದೆ. ನಿದ್ರೆಯ ಸಮಸ್ಯೆಗಳಿಗೆ ಸಂಬಂಧಿಸಿದ ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುವ ಅಂಶಗಳು ಇವೆ. ಹಾಗಾದ್ರೆ ಕಪ್ಪು ಒಣದ್ರಾಕ್ಷಿಯನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು?.
ಕಪ್ಪು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಸೇರಿಸಿ ನಾವು ತಿನ್ನುವುದರಿಂದ ಕೂದಲಿನ ಬೆಳವಣಿಗೆಗೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು ಕೂದಲಿಗೆ ಪೋಷಣೆ ನೀಡುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಕಾಪಾಡುತ್ತ ಮತ್ತು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ಕಿತ್ತಳೆ ಹಣ್ಣಿನಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು.. ಚಳಿಗಾಲದಲ್ಲಿ ಮೂಸಂಬಿ ಒಳ್ಳೆಯದಾ?
ಒಣದ್ರಾಕ್ಷಿಗಳಲ್ಲಿ ಆಂಥೋಸಯಾನಿನ್‌ಗಳು (anthocyanins), ಫ್ಲೇವನಾಯ್ಡ್ (flavonoids) ಮತ್ತು ಪಾಲಿಫಿನಾಲ್‌ಗಳ (polyphenols) ಇವೆ. ಇವು ಮಿದುಳಿನ ಹಾನಿಯನ್ನು ಕಡಿಮೆ ಮಾಡುತ್ತವೆ. ಇಷ್ಟೇ ಅಲ್ಲದೇ, ಫ್ಲೇವನಾಯ್ಡ್‌ಗಳು (flavonoids) ನ್ಯೂರೋಇನ್‌ಫ್ಲಮೇಶನ್ (neuroinflammation) ನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ಇವುಗಳಲ್ಲಿ ವಿಟಮಿನ್ ಸಿ ಮತ್ತು ಬಿ ಹೆಚ್ಚಾಗಿ ಇರುತ್ತದೆ. ಇವುಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯವಾಗಿರಿಸುತ್ತವೆ. ಒಣದ್ರಾಕ್ಷಿ ದೇಹದ ನೈಸರ್ಗಿಕ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಯಾವುದೇ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ.
ನೀರಿನಲ್ಲಿ ನೆನೆಸಿದ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಅನುಕೂಲಗಳು ಇವೆ. ಒಣದ್ರಾಕ್ಷಿಗಳನ್ನು ಹಾಲಿನಲ್ಲಿ ಸೇರಿಸಿ ತಿನ್ನಬಹುದು. ಇದನ್ನು ನೀವು ಬೆಳಗ್ಗೆ, ಸಂಜೆ ಮತ್ತು ರಾತ್ರಿ ಪಾಲನೆ ಮಾಡಿದರೆ ನಿಮ್ಮ ಚರ್ಮದ ತೇಜಸ್ಸು ಹೆಚ್ಚುತ್ತದೆ.
/newsfirstlive-kannada/media/post_attachments/wp-content/uploads/2024/11/HEALTH_2.jpg)
ಕಪ್ಪು ಒಣದ್ರಾಕ್ಷಿಗಳಲ್ಲಿ ಪೊಟ್ಯಾಷಿಯಂ ಅಂಶ ಸಮೃದ್ಧವಾಗಿದೆ. ಹೀಗಾಗಿ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ಟ್ರೈಗ್ಲಿಸರೈಡ್‌ಗಳು (triglycerides), ಅಧಿಕ ಕೊಲೆಸ್ಟ್ರಾಲ್ (cholesterol) ಅಥವಾ ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಲಕ್ಷಣ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us