ಕೊರೊನಾ ನಂತರ ಬೆಚ್ಚಿ ಬೀಳಿಸ್ತಿದೆ ಬ್ಲೀಡಿಂಗ್ ಐ ವೈರಸ್​; UK, ಆಫ್ರಿಕಾ ಹೋಗೋರಿಗೆ ಎಚ್ಚರಿಕೆ!

author-image
Ganesh
Updated On
ಕೊರೊನಾ ನಂತರ ಬೆಚ್ಚಿ ಬೀಳಿಸ್ತಿದೆ ಬ್ಲೀಡಿಂಗ್ ಐ ವೈರಸ್​; UK, ಆಫ್ರಿಕಾ ಹೋಗೋರಿಗೆ ಎಚ್ಚರಿಕೆ!
Advertisment
  • Bleeding Eye Virus ಅಂದರೆ ಏನು ಗೊತ್ತಾ?
  • ಎಬೊಲಾ ವೈರಸ್​ನ​ ತಳಿ ಇದು, ಲಕ್ಷಣಗಳು ಏನು?
  • ವಿನಾಶಕಾರಿ ಮಾರ್ಬರ್ಗ್​​ಗೆ ಚಿಕಿತ್ಸೆ ಇಲ್ಲ, ಪರಿಹಾರ ಏನು?

ಕೊರೊನಾ ವೈರಸ್ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತೊಂದು ಮಾರಣಾಂತಿಕ ಕಾಯಿಲೆಯ ಬಗ್ಗೆ ಎಚ್ಚರಿಕೆ ನೀಡಿದೆ. ವಿನಾಶಕಾರಿ ಮಾರ್ಬರ್ಗ್ (Marburg) ವೈರಸ್​ನ ಉಪದ್ರ ಹೆಚ್ಚಾಗಿದ್ದು, ಎಚ್ಚೆತ್ತುಕೊಳ್ಳುವಂತೆ ವಾರ್ನಿಂಗ್ ಕೊಟ್ಟಿದೆ.

ಆಫ್ರಿಕನ್ ದೇಶಗಳಾದ ರುವಾಂಡಾ (Rwanda), ತಾಂಝನಿಯಾ (Tanzania), ಘಾನ (Ghana)ದಲ್ಲಿ ಮಾರ್ಬರ್ಗ್​ ಸೋಂಕು ಬೆಚ್ಚಿಬೀಳಿಸಿದೆ. ಇತ್ತೀಚೆಗಿನ ದಿನಗಳಲ್ಲಿ ಈ ಸೋಂಕಿಗೆ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವೈರಸ್​ ತಗುಲಿದ ರೋಗಿಗಳ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ರಕ್ತಸ್ರಾವ ಆಗುತ್ತಿದೆ. ಅದಕ್ಕಾಗಿ ಇದನ್ನೂ ಬ್ಲೀಡಿಂಗ್ ಐ ವೈರಸ್ (Bleeding Eye Virus) ಅಂತಲೂ ಕರೆಯುತ್ತಾರೆ.

‘ಬ್ಲೀಡಿಂಗ್ ಐ ವೈರಸ್​’ ಎಂದರೇನು?

ಮಾರ್ಬರ್ಗ್ ಇದು ಎಬೋಲಾ ವೈರಸ್​ನ ತಳಿ. ಇದೊಂದು ಗಂಭೀರವಾದ ಕಾಯಿಲೆ. ಆಫ್ರಿಕಾದಂತಹ ದೇಶಗಳಲ್ಲಿ ಗಣಿಗಾರಿಕೆ ಹೆಚ್ಚಾಗಿರುತ್ತದೆ. ದೀರ್ಘಕಾಲದವರೆಗೆ ಗಣಿ ಅಥವಾ ಗುಹೆಗಳ ಸಂಪರ್ಕದಲ್ಲಿರೋರು ಮೊದಲು ಸೋಂಕಿಗೆ ಒಳಗಾಗುತ್ತಾರೆ. ನಂತರ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಹೆಚ್ಚಾಗಿ ಬಾವಲಿಗಳು ವಾಸಿಸುವ ಸ್ಥಳದಲ್ಲಿ ಇದು ಕಂಡು ಬರುತ್ತದೆ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

publive-image

ವೈರಸ್ ಹೇಗೆ ಹರಡುತ್ತದೆ?

ಮಾರ್ಬರ್ಗ್ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ದೈಹಿಕ ದ್ರವಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣೀರು, ಬೆವರು, ಮಲ, ಮೂತ್ರಗಳಿಂದ ಬರುತ್ತದೆ. ಅಲ್ಲದೇ ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳ ಮೂಲಕವೂ ಇನ್ನೊಬ್ಬರಿಗೆ ಹರಡುತ್ತದೆ. ಅಂದರೆ ಸೋಂಕಿತ ವ್ಯಕ್ತಿಯೊಂದಿಗೆ, ವ್ಯಕ್ತಿ ಬಳಸಿದ ವಸ್ತುಗಳ ಜೊತೆ ನೇರ ಸಂಪರ್ಕ ಮಾಡಿದರೆ ಮಾರ್ಬರ್ಗ್ ವೈರಸ್ ಹರಡುತ್ತದೆ.

WHO ಪ್ರಕಾರ ಲಕ್ಷಣಗಳೇನು?

  • ವ್ಯಕ್ತಿಯ ದೇಹ ಹೊಕ್ಕಿದ 21 ದಿನಗಳ ನಂತರ ವೈರಸ್ ಬಾಲ ಬಿಚ್ಚುತ್ತದೆ
  • ಇದ್ದಕ್ಕಿಂದ್ದಂತೆ ಹುಷಾರು ತಪ್ಪಿಸಿ ದೇಹವನ್ನು ಕಂಟ್ರೋಲ್​ಗೆ ತೆಗೆದುಕೊಳ್ಳುತ್ತದೆ
  • ಮೊದಲ ಎರಡು ದಿನ: ತೀವ್ರ ಜ್ವರ ಮತ್ತು ತೀವ್ರ ತಲೆನೋವು
  • ಮೂರನೇ ದಿನ: ಅತಿಸಾರ, ಹೊಟ್ಟೆ ನೋವು, ಸ್ನಾಯು ಸೆಳೆತ, ವಾಕರಿಕೆ ಮತ್ತು ವಾಂತಿ
  • ಕೆಲವು ಸಂದರ್ಭಗಳಲ್ಲಿ ಕಣ್ಣುಗಳಿಂದ ರಕ್ತವು ಹೊರಬರುತ್ತದೆ
  • 5 ಮತ್ತು 7 ದಿನಗಳ ನಡುವೆ: ರೋಗದ ಗಂಭೀರತೆ ಮತ್ತಷ್ಟು ಹೆಚ್ಚಾಗುತ್ತ ಹೋಗುತ್ತದೆ. ರಕ್ತಸ್ರಾವ, ಕಣ್ಣುಗಳಲ್ಲಿಯೂ ರಕ್ತ ಹೊರ ಬರುತ್ತದೆ.
  • 8 ರಿಂದ 9 ದಿನಗಳ ನಡುವೆ: ಇಷ್ಟು ದಿನಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕಿನ ತೀವ್ರತೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.
  • publive-image

ತಡೆಯುವುದು ಹೇಗೆ?

ಮಾರ್ಬರ್ಗ್​ಗೆ ಪ್ರಸ್ತುತ ಅನುಮೋದಿತ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಸಂಭಾವ್ಯ ಲಸಿಕೆಗಳು ಮತ್ತು ಚಿಕಿತ್ಸೆಗಳು ಪರೀಕ್ಷೆಗೆ ಒಳಗಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ.. ಮಾರ್ಬರ್ಗ್ ವೈರಸ್ ಸೋಂಕಿತ ಜನರ ಸಂಪರ್ಕದಿಂದ ಹರಡುತ್ತದೆ. ಇದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವೈರಸ್ ಸೋಂಕಿತ ಪ್ರದೇಶಗಳಿಗೆ ಹೋಗಬಾರದು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಆಗಾಗ ಕೈ ತೊಳೆಯುವ ಮೂಲಕ ವೈರಸ್​ನಿಂದ ದೂರ ಇರಬಹುದು. ಸೋಂಕಿತ ವ್ಯಕ್ತಿ ನೇರ ಸಂಪರ್ಕಕ್ಕೆ ಬರದಂತೆ ತಪ್ಪಿಸಿಕೊಳ್ಳಬೇಕು. ಈ ಮುನ್ನೆಚ್ಚರಿಕೆಗಳೇ ಇದಕ್ಕೆ ಮದ್ದಾಗಿದೆ.

ವೈರಸ್​ಗೆ ಚಿಕಿತ್ಸೆ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ.. ವೈರಸ್​ನಿಂದ ಜೀವ ಕಳೆದುಕೊಳ್ಳುವ ಪ್ರಮಾಣ ಶೇಕಡಾ 50 ರಷ್ಟು ಇದೆ. ಮರಣದ ತೀವ್ರತೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ರೋಗಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿರೋಧಕ ಚಿಕಿತ್ಸೆಯ ಮೂಲಕ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಯಾವುದೇ ಅಧಿಕೃತ ಲಸಿಕೆ ಲಭ್ಯವಿಲ್ಲ. ಲಸಿಕೆ ತಯಾರಿಸುವ ಪ್ರಕ್ರಿಯೆಯು ಆರಂಭಿಕ ಹಂತದಲ್ಲಿದೆ.

17 ದೇಶಗಳಿಗೆ ಪ್ರಯಾಣ ಮಾಡೋರಿಗೆ ಎಚ್ಚರಿಕೆ..!
ಆಫ್ರಿಕಾ ದೇಶಗಳಲ್ಲಿ ಬ್ಲೀಡಿಂಗ್ ಐ ವೈರಸ್​ನ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ 17 ದೇಶಗಳಿಗೆ ಪ್ರಯಾಣಿಸೋರಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ಆರೋಗ್ಯ ಸುರಕ್ಷತೆ ಬಗ್ಗೆ ಎಚ್ಚರ ಇರಲಿ. ಇಂಗ್ಲೆಂಡ್​ಗೆ ಹೋಗೋರು ಜಾಗೃತರಾಗಿರಬೇಕು ಎಂದಿದೆ.

ಇದನ್ನೂ ಓದಿ:BBK11 ಹಳಬರು, ಹೊಸಬರ ಮಹಾ ಮಿಲನ.. ಸಂತು-ಪಂತು​​ ಜೊತೆ ಬಿಗ್​ಬಾಸ್ ವಿಶೇಷ ಮನವಿ ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment