RCB ಟೀಮ್​ಗೆ ರಣಬೇಟೆಗಾರ ಎಂಟ್ರಿ.. ಸ್ಪೀಡ್‌ಸ್ಟರ್ ಮಾರಕಕ್ಕೆ ಎದುರಾಳಿ ಉಡೀಸ್ ಪಕ್ಕಾ!

author-image
Bheemappa
Updated On
RCB ಟೀಮ್​ಗೆ ರಣಬೇಟೆಗಾರ ಎಂಟ್ರಿ.. ಸ್ಪೀಡ್‌ಸ್ಟರ್ ಮಾರಕಕ್ಕೆ ಎದುರಾಳಿ ಉಡೀಸ್ ಪಕ್ಕಾ!
Advertisment
  • ತಂಡದಲ್ಲಿ ದೊಡ್ಡ ಬದಲಾವಣೆ ಮಾಡ್ತಿರುವ ಬೆಂಗಳೂರು ತಂಡ
  • ಆರ್​ಸಿಬಿ ತಂಡದಿಂದ ಅಖಾಡಕ್ಕೆ ಧುಮುಕುತ್ತಿರುವ ಸ್ಪೀಡ್‌ಸ್ಟರ್
  • ರಾಯಲ್ ಚಾಲೆಂಜರ್ಸ್​ ಈ ಬದಲಾವಣೆ ಮಾಡ್ತಿರುವುದು ಏಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದ್ಯ ಐಪಿಎಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ತಂಡವಾಗಿದೆ. ಪಾಯಿಂಟ್​ ಟೇಬಲ್​ನಲ್ಲಿ 17 ಅಂಕಗಳಿಂದ 2ನೇ ಸ್ಥಾನದಲ್ಲಿ ಇದೆ. ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದು ಆಗಿ 1 ಅಂಕ ಪಡೆದಿದ್ದ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಆಗಿದೆ. ಇದರ ಬೆನ್ನಲ್ಲೇ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ.

ಆರ್​ಸಿಬಿ ತಂಡದಲ್ಲಿ ಇರುವ ವೇಗದ ಬೌಲರ್​ ಲುಂಗಿ ಎನ್​ಗಿಡಿ ಅವರು ಮುಂದಿನ ತಂಡಗಳಿಗೆ ಲಭ್ಯ ಇರುವುದಿಲ್ಲ. ಮೇ 26 ರಿಂದ ದಕ್ಷಿಣ ಆಫ್ರಿಕಕ್ಕೆ ಮರಳಲಿದ್ದಾರೆ. ಈ ಕುರಿತು ಆರ್​ಸಿಬಿ ಫ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಹೊಸ ಆಟಗಾರ, ವೇಗದ ಬೌಲರ್​ಗೆ ವೆಲ್​ಕಮ್ ಮಾಡುತ್ತಿದೆ.

ಇದನ್ನೂ ಓದಿ:ಕೇವಲ 6 ವಾರ, 10 ಕೆಜಿ ತೂಕ ಇಳಿಸಿದ ಟೀಮ್ ಇಂಡಿಯಾದ ಯಂಗ್ ಪ್ಲೇಯರ್​.. ಎಲ್ಲರೂ ಶಾಕ್!

publive-image

6 ಅಡಿ 8 ಇಂಚು ಎತ್ತರದ 28 ವರ್ಷದ ಜಿಂಬಾಬ್ವೆಯ ಬೌಲರ್​ ಸ್ಪೀಡ್‌ಸ್ಟರ್ ಬ್ಲೆಸ್ಸಿಂಗ್​ ಮುಜರಬಾನಿ ಅವರನ್ನು ಆರ್​ಸಿಬಿ ತಂಡಕ್ಕೆ ಸ್ವಾಗತ ಮಾಡಿಕೊಳ್ಳುತ್ತಿದೆ. ದಕ್ಷಿಣ ಆಫ್ರಿಕಾ ತಂಡದಿಂದ ಲುಂಗಿ ಎನ್​ಗಿಡಿ ಅವರಿಗೆ ಕರೆ ಬಂದ ಹಿನ್ನೆಲೆಯಲ್ಲಿ ವಾಪಸ್ ಆಗುತ್ತಿದ್ದಾರೆ. ಹೀಗಾಗಿ ಜಿಂಬಾಬ್ವೆಯ ಆಕ್ರಮಣಕಾರಿ ಬೌಲರ್ ಆಗಿರುವ ಸ್ಪೀಡ್‌ಸ್ಟರ್ ಬ್ಲೆಸ್ಸಿಂಗ್​ ಮುಜರಬಾನಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಆರ್​ಸಿಬಿ ಅನೌನ್ಸ್ ಮಾಡಿದೆ.

ಇನ್ನು ಸ್ಪೀಡ್‌ಸ್ಟರ್ ಬ್ಲೆಸ್ಸಿಂಗ್​ ಮುಜರಬಾನಿ ಅವರು ಅತ್ಯುತ್ತಮ ಬೌಲಿಂಗ್ ಸಾಧನೆ ಹೊಂದಿದ್ದಾರೆ. ಕೇವಲ 12 ಟೆಸ್ಟ್​ಗಳನ್ನು ಆಡಿರುವ ಇವರು 51 ವಿಕೆಟ್​ ಕೆಡವಿದ್ದಾರೆ. 55 ಏಕದಿನ ಪಂದ್ಯಗಳಲ್ಲಿ ಬಲಿಷ್ಠ 69 ವಿಕೆಟ್​ಗಳನ್ನು ನೆಲಕ್ಕೆ ಉರುಳಿಸಿದ್ದಾರೆ. ಟ್ವಿ20ಯಲ್ಲೂ ಸಾಧನೆ ಮಾಡಿದ ಬ್ಲೆಸ್ಸಿಂಗ್​ ಮುಜರಬಾನಿ, 70 ಪಂದ್ಯಗಳಲ್ಲಿ 78 ವಿಕೆಟ್​​ ಕಬಳಿಸಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಐಪಿಎಲ್​ ಸೀಸನ್​ನಲ್ಲಿ ಆಡುತ್ತಿದ್ದಾರೆ. ವಿಶೇಷ ಎಂದರೆ ಆರ್​ಸಿಬಿ ಇಂದ ಅವರು ಅಖಾಡಕ್ಕೆ ಧುಮುಕುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment