Advertisment

3 ದಿನ ಮನೆಯಲ್ಲಿ ಮಗ ಸತ್ತಿದ್ದೂ ಗೊತ್ತಾಗಲಿಲ್ಲ.. ತುತ್ತು ಅನ್ನ ತಿಂದಿಲ್ಲ; ಅಂಧ ಅಪ್ಪ, ಅಮ್ಮನ ಕರುಣಾಜನಕ ಕಥೆ!

author-image
admin
Updated On
3 ದಿನ ಮನೆಯಲ್ಲಿ ಮಗ ಸತ್ತಿದ್ದೂ ಗೊತ್ತಾಗಲಿಲ್ಲ.. ತುತ್ತು ಅನ್ನ ತಿಂದಿಲ್ಲ; ಅಂಧ ಅಪ್ಪ, ಅಮ್ಮನ ಕರುಣಾಜನಕ ಕಥೆ!
Advertisment
  • ವೃದ್ಧ ಅಂಧ ಅಪ್ಪ ಅಮ್ಮ 3 ದಿನದಿಂದ ಅನ್ನ ನೀರಿಗಾಗಿ ಕಾಯ್ತಿದ್ರು
  • ಮಗ ಸತ್ತಿದ್ದೂ ಗೊತ್ತಿಲ್ಲದೇ ದೀನರಂತೆ ಕುಳಿತಿದ್ದರು ಈ ಪೋಷಕರು
  • ಈ ಹೃದಯವಿದ್ರಾವಕ ಘಟನೆ ನೋಡಿ ಪೊಲೀಸರು ಕಣ್ಣೀರಿಟ್ಟರು

ಮೂರು ದಿನಗಳೇ ಉರುಳಿದವು. ಒಂದು ಹನಿ ನೀರು ಕುಡಿದಿಲ್ಲ. ಒಂದು ತುತ್ತು ಅನ್ನವನ್ನೂ ತಿಂದಿಲ್ಲ. ಮಗ ಬರ್ತಾನೆ ಅನ್ನ ನೀರು ತರ್ತಾನೆ ಅಂತ ಕಾಣದ ಕಣ್ಣುಗಳನ್ನ ಪಿಳಿಪಿಳಿ ಬಿಟ್ಟುಕೊಂಡು ಕಾಯುತ್ತಾ ಕುಳಿತಿದ್ದರು ವೃದ್ಧ ತಂದೆ ತಾಯಿ. ಆದರೆ ಮಗ ಬರಲೇ ಇಲ್ಲ. ಕೆಟ್ಟ ವಾಸನೆ ಬಂದರೂ ಏನಾಗುತ್ತಿದೆ ಅನ್ನೋದು ಗೊತ್ತಾಗಲಿಲ್ಲ. ಕರುಳು ಹಿಂಡುವ ಘಟನೆಗೆ ಅದೊಂದು ಊರು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದೆ.

Advertisment

publive-image

ಅಂಧ ಅಪ್ಪ ಅಮ್ಮನಿಗೆ ಕುಡುಕ ಮಗ ಸತ್ತಿದ್ದೂ ಗೊತ್ತಾಗಲಿಲ್ಲ!
ಮಕ್ಕಳು ಬೇಕು ಅಂತಾರೆ ಮಕ್ಕಳು ಇಲ್ಲದವರು ಅನ್ನೋ ಫೇಮಸ್ ಹಾಡು ಕೇಳಿರ್ತೀರಿ. ಆದರೆ ಇಲ್ಲಿ ಇಬ್ಬರು ಮಕ್ಕಳ ವೃದ್ಧ ತಂದೆ ತಾಯಿ ಅನಾಥರಾಗಿದ್ದಾರೆ. ಕಿರಿ ಮಗ ಮದುವೆ ಆಗಿ ಅಂಧ ಅಪ್ಪ ಅಮ್ಮನನ್ನ ಬಿಟ್ಟು ಹೆಂಡ್ತಿ ಜೊತೆ ಬೇರೆ ಮನೆ ಮಾಡಿಬಿಟ್ಟ. ಇನ್ನು, ಹಿರಿ ಮಗ ಮದುವೆ ಆಗದೇ ಕುಡಿತವನ್ನೇ ಚಟವಾಗಿಸಿಕೊಂಡು ಅಪ್ಪ ಅಮ್ಮನೊಂದಿಗಿದ್ದ. ಪ್ರತಿ ದಿನ ಮಗನೇ ಬಂದು ಸ್ನಾನ ಮಾಡಿಸಿ ಊಟ ಕೊಡುತ್ತಿದ್ದ. ಆದರೆ ಇಳಿ ವಯಸ್ಸಿನಲ್ಲಿ ಏನಂದ್ರೆ ಏನೂ ಮಾಡೋಕಾಗದ ಸ್ಥಿತಿಯಲ್ಲಿದ್ದ ಅಜ್ಜ ಅಜ್ಜಿ ಮಗನಿಗಾಗಿಯೇ ಕಾದು ಕುಳಿತಿದ್ದರು. ಮೂರು ದಿನಗಳಿಂದ ಅನ್ನ ನೀರಿಲ್ಲದೇ ದೀನರಂತೆ ಕುಳಿತಿದ್ದ ಅಜ್ಜ ಅಜ್ಜಿಗೆ ಮಗ ಕಣ್ಣೆದುರೆ ಸತ್ತಿದ್ದೂ ಗೊತ್ತಾಗಲಿಲ್ಲ.

publive-image

ಇದನ್ನೂ ಓದಿ: ಪತಿಯನ್ನ ಪತ್ನಿ ಮುಗಿಸಿದ ಕೇಸ್​; ಉಡುಪಿಯ ಈ ಲ್ಯಾಬ್​ನಿಂದ ವಿಷ ತಂದು ಕೊಟ್ಟಿದ್ದ ಪ್ರಿಯಕರ.. ಬಾಟಲಿ ಎಲ್ಲಿ? 

ಹೆಣದ ವಾಸನೆ ಬಂದರೂ ಗುರ್ತಿಸಲಾಗದೇ ಒದ್ದಾಡಿದ್ದರು
ಹೈದರಾಬಾದ್​​ನ ನಾಗೋಲ್​​ಗೆ ಸೇರಿದ ಜೈಪುರ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಉಂಡಾ ರಮಣ (65) ಶಾಂತಕುಮಾರಿ (60) ಅನ್ನೋ ವೃದ್ಧ ದಂಪತಿಗಳು ಮಗನಿಗಾಗಿ ಕಾಯುತ್ತಿದ್ದರು. ಆದರೆ ಕುಡಿತದ ಚಟವಿದ್ದ ಮಗ ಮನೆಗೆ ಬಂದು ಮೂರು ದಿನಗಳೇ ಉರುಳಿದ್ದವು. ಪ್ರಮೋದ್ (30)​​ ಮನೆಗೆ ಬಂದು ಊಟ ಕೊಟ್ಟರೆ ತಿನ್ನುತ್ತಿದ್ದರು. ಎಲ್ಲಾ ಸೌಕರ್ಯವನ್ನೂ ಪ್ರಮೋದ್ ಮಾಡಬೇಕಿತ್ತು. ಆದರೆ ಮದ್ಯವ್ಯಸನಿ ಪ್ರಮೋದ್​ ಅತಿಯಾದ ಕುಡಿತದ ಕಾರಣಕ್ಕೆ ಮನೆಗೆ ಬಂದ ದಿನವೇ ಸತ್ತು ಹೆಣವಾಗಿದ್ದ.

Advertisment


">October 29, 2024

ಮನೆಗೆ ಬಂದ ಪೊಲೀಸರ ಕಣ್ಣಾಲಿಗಳಲ್ಲಿ ನೀರು ಜಿನುಗಿತ್ತು
ಅಕ್ಕ ಪಕ್ಕದ ಮನೆಯವರಿಗೆ ಏನಾಗ್ತಿದೆ ಅನ್ನೋದು ಗೊತ್ತಾಗಲಿಲ್ಲ. ಮೂರು ದಿನಗಳಿಂದ ಯಾರೂ ಸಹ ಪ್ರಮೋದ್ ಮನೆಯಿಂದ ಆಚೆ ಬರಲಿಲ್ಲ. ಏಕಾಏಕಿ ಹೆಣದ ವಾಸನೆ ಬರೋದಕ್ಕೆ ಶುರುವಾಯ್ತು. ಕೂಡಲೇ ಪೊಲೀಸರಿಗೆ ಸ್ಥಳೀಯರು ವಿಚಾರ ಮುಟ್ಟಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೋಲಿಸರನ್ನು ಕಣ್ಣೀರಿಡುವಂತೆ ಮಾಡಿದ್ದು ವೃದ್ಧ ಪೋಷಕರ ಶೋಚನೀಯ ಸ್ಥಿತಿ. ಅನ್ನ, ನೀರಿಗಾಗಿ ವಿಲವಿಲ ಒದ್ದಾಡುತ್ತಿದ್ದ ವೃದ್ಧ ದಂಪತಿಗೆ ಪೊಲೀಸರು ಊಟ ನೀಡಿದರು. ಬಳಿಕ ಮಗ ಸತ್ತ ವಿಚಾರ ತಿಳಿಸಿದಾಗ ಆ ವೃದ್ಧ ತಂದೆ ತಾಯಿ ಎದೆ ಬಡಿದುಕೊಂಡು ಅಳುವ ದೃಶ್ಯ ಕಂಡು ಇಡೀ ಕಾಲೋನಿಯೇ ಬಿಕ್ಕಳಿಸಿ ಅತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment