/newsfirstlive-kannada/media/post_attachments/wp-content/uploads/2025/01/MANJAMMA-2.jpg)
ತುಮಕೂರು: ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಅವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಮಂಜಮ್ಮ ಅವರು ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯ ಗ್ರಾಮದವರು. ಇವರಿಗೆ ರತ್ನಮ್ಮ ಅನ್ನೋ ಸಹೋದರಿ ಇದ್ದಾರೆ. ಈ ಇವರಿಬ್ಬರು ದಂಡಿನ ಮಾರಮ್ಮ ದೇವಸ್ಥಾನದ ಮುಂದೆ ಹಾಡು ಹೇಳಿ ರಂಜಿಸುತ್ತಿದ್ದರು. ಇನ್ನು ಮಂಜಮ್ಮ ಅವರಿಗೆ ಕಿಡ್ನಿ ಸಮಸ್ಯೆ ಇತ್ತು.
ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ತಾಯಿ ಮಕ್ಕಳು.. ಆಮೇಲೆ ಆಗಿದ್ದೇನು?
ಇವರ ಪ್ರತಿಭೆಯನ್ನು ನೋಡಿದ ಸರಿಗಮಪ ವೇದಿಕೆ ಅವಕಾಶ ಕೊಡಿಕೊಟ್ಟಿತ್ತು. ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಹಾಡುವ ಮೂಲಕ ಮತ್ತಷ್ಟು ಜನಪ್ರಿಯಗೊಂಡಿದ್ದರು. ಮಂಜಮ್ಮ ನಿಧನ ಹಿನ್ನೆಲೆಯಲ್ಲಿ ಅಕ್ಕ ರತ್ನಮ್ಮ ಕಂಗಾಲಾಗಿದ್ದಾರೆ.
ರತ್ನಮ್ಮ ಮತ್ತು ಮಂಜಮ್ಮ. ಇಬ್ಬರು ಅಕ್ಕ-ತಂಗಿ. ಹುಟ್ಟಿನಿಂದ ಇಬ್ಬರಿಗೂ ಕಣ್ಣಿಲ್ಲ. ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಂಗೀತ ಕಲಿತಿಲ್ಲ. ಹೊಟ್ಟೆಪಾಡಿಗಾಗಿ ಹಾಡಲು ಆರಂಭಿಸಿದವರಾಗಿದ್ದರು. ಅದೇ ಅವರ ವೃತ್ತಿಯೂ ಆಗಿತ್ತು. ಇದೀಗ ಮಂಜಮ್ಮ ನಿಧನ ಹಿನ್ನೆಲೆಯಲ್ಲಿ ರತ್ನಮ್ಮರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ‘ಲವ್ ಯೂ, ಗಿವ್ ಯೂ..’ ಭವ್ಯ ಗೌಡಗೆ Love ಪ್ರಪೋಸ್ ಮಾಡಿದ ಬಗ್ಗೆ ವಿಕ್ಕಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ