/newsfirstlive-kannada/media/post_attachments/wp-content/uploads/2024/10/Blinkit.jpg)
ಬೆಂಗಳೂರು: ಆನ್ಲೈನ್ನಲ್ಲಿ ದಿನಸಿಗಳನ್ನು ಡೆಲಿವರಿ ಮಾಡುವ ಬ್ಲಿಂಕಿಟ್ ಕಂಪನಿಯು ಗ್ರಾಯಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಹೆಜ್ಜೆ ಇಟ್ಟಿದೆ. ಅದೇನೆಂದರೆ ವಿನಿಮಯವನ್ನು ಸುಲಭಗೊಳಿಸುವ ಸಲುವಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಬ್ಲಿಂಕಿಟ್ ವಿಶೇಷವಾಗಿ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆರ್ಡರ್ ಮಾಡಿದ ಬಳಿಕ ರಿಟರ್ನ್ ಮತ್ತು ಎಕ್ಸ್ಚೇಂಜ್ ಆಯ್ಕೆಯನ್ನು ನೀಡುತ್ತಿದೆ. ಬರೀ 10 ನಿಮಿಷದಲ್ಲಿ ಈ ಸೇವೆಯನ್ನು ಮಾಡುವುದಾಗಿ ಕಂಪನಿ ತಿಳಿಸಿದೆ. ಇದು ಗ್ರಾಹಕರಿಗೆ ಮತ್ತಷ್ಟು ಪ್ರಯೋಜನಕ್ಕೆ ಬರಲಿದೆ.
ದೆಹಲಿಯಲ್ಲಿ ಈ ಸೇವೆಯನ್ನು ಮೊದಲು ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಹೊರತಂದಿದೆ. ಶೀಘ್ರದಲ್ಲೇ ಹೆಚ್ಚಿನ ನಗರಗಳಲ್ಲಿ ಸೇವೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಬ್ಲಿಂಕಿಟ್ ಸಿಇಒ ಏನಂದ್ರು?
ಆರ್ಡರ್ ಮಾಡಿದ ಬಟ್ಟೆ, ಪಾದರಕ್ಷೆಯಲ್ಲಿ ವ್ಯತ್ಯಾಸವಾದರೆ ಬರೀ 10 ನಿಮಿಷದಲ್ಲಿ ರಿಟರ್ನ್ ಮತ್ತು ಎಕ್ಸ್ಚೇಂಜ್ ಮಾಡುವ ಆಯ್ಕೆಯಿದೆ. ನಾವು ದೆಹಲಿಯಲ್ಲಿ ಪರೀಕ್ಷಿಸಿದ್ದೇವೆ. ಈಗ ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆಗೂ ವೃದ್ಧಿಸಿದ್ದೇವೆ ಎಂದರು ಬ್ಲಿಂಕಿಟ್ ಸಿಇಒ ಅಲ್ಬಿಂಧರ್ ಧಿಂಡ್ಸಾ.
ಇನ್ನು, ಬ್ಲಿಂಕಿಟ್ ನೂತನ ವೈಶಿಷ್ಟ್ಯವನ್ನು ಗ್ರಾಹಕರ ಆತಂಕವನ್ನು ಹೋಗಲಾಡಿಸಲು ಪರಿಚಯಿಸಿದೆ. ಆನ್ಲೈನ್ ಮೂಲಕ ಬಟ್ಟೆ ಮತ್ತು ಶೂ ಆರ್ಡರ್ ಮಾಡುವ ಗ್ರಾಹಕರಿಗಾಗಿ ತೆರೆದಿಟ್ಟ ಕಾಳಜಿಯಾಗಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ