/newsfirstlive-kannada/media/post_attachments/wp-content/uploads/2024/10/Blinkit-1.jpg)
ಶಿವರಾತ್ರಿ ಹಬ್ಬ ಹತ್ತಿರ ಬರುತ್ತಿದೆ. ಅನೇಕ ಕಂಪನಿಗಳು ಹಬ್ಬದ ಸಲುವಾಗಿ ಗ್ರಾಹಕರಿಗಾಗಿ ಕೊಡುಗೆಗಳನ್ನು ನೀಡುತ್ತಿದೆ. ಅದರಂತೆಯೇ ಆನ್ಲೈನ್ ದಿನಸಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬ್ಲಿಂಕಿಟ್ ಕಂಪನಿ ಇದೀಗ ಹೊಸ ಕೊಡುಗೆ ನೀಡಿದೆ. ಗ್ರಾಹಕರಿಗೆ ಇಎಮ್ಐ ಸೌಲಭ್ಯ ನೀಡಿದ್ದು, ಅದರ ಮೂಲಕ ದಿನಸಿಗಳನ್ನು ಖರೀದಿಸಬಹುದಾಗಿದೆ.
ಬ್ಲಿಂಕಿಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬಿಂದರ್ ದಿಂಡ್ಸಾ ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ಲಿಂಕಿಟ್ ಗ್ರಾಹಕರಿಗೆ ಉತ್ತಮ ಯೋಜನೆಯನ್ನು ತಂದಿದೆ. ದಿನಸಿಗಳ ಖರೀದಿಯನ್ನು ಇದು ಸುಧಾರಿಸುತ್ತದೆ. ಅದಕ್ಕಾಗಿ ಮಾಸಿಕ ಕಂತು ರೂಪದಲ್ಲಿ ಸೌಲಭ್ಯ ನೀಡುತ್ತಿದೆ. 2,999ಕ್ಕಿಂತ ಹೆಚ್ಚಿನ ಎಲ್ಲಾ ಆರ್ಡರ್ಗಳಿಗೆ ಇದು ಅನ್ವಯಿಸುತ್ತದೆ. ಆದರೆ ಈ ವೈಶಿಷ್ಟ್ಯದ ಮೂಲಕ ಚಿನ್ನ ಮತ್ತು ಬೆಳ್ಳಿ ನಾಣ್ಯವನ್ನು ಖರೀದಿಸಲು ಅನ್ವಯಿಸುದಿಲ್ಲ. ವಾರ್ಷಿಕವಾಗಿ 15 ಪ್ರತಿಶತ ಬಡ್ಡಿಯೊಂದಿಗೆ ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಎಂದಿದ್ದಾರೆ.
ನೋ-ಕಾಸ್ಟ್ ಇಎಂಐ ಹೇಗೆ?
ಬಳಕೆದಾರರು ಆನ್ಲೈನ್ನಲ್ಲಿ ದಿನಸಿಯನ್ನು ಖರೀದಿಸಿ ಪಾವತಿ ಆಯ್ಕೆಯ ಮಾಡುವ ಮುನ್ನ ಇಎಮ್ಐ ಆಯ್ಕೆ ಮಾಡಬಹುದಾಗಿದೆ. ಇದನ್ನು ಸುಲಭ ಕಂತುಗಳಾಗಿ ಪಾವತಿ ಮಾಡಬಹುದಾಗಿದೆ. ಮಧ್ಯವರ್ತಿಗಳ ಅಗತ್ಯವಿಲ್ಲದೆ ಬ್ಲಿಂಕಿಟ್ ತನ್ನ ಗ್ರಾಹಕರಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಿದೆ.
2013ರಲ್ಲಿ ಬ್ಲಿಂಕಿಟ್ ಕಂಪನಿ ಸ್ಥಾಪನೆಯಾಯಿತು. ಸದ್ಯ ಗ್ರಾಹಕರ ಮನಗೆದ್ದಿರುವ ಈ ಕಂಪನಿ 10 ನಿಮಿಷದಲ್ಲಿ ಐಫೋನ್ 16 ಸರಣಿಯನ್ನು ಮನೆ ಬಾಗಿಲಿಗೆ ತಂದು ಕೊಡುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್; ಸ್ಟಾರ್ ಪ್ಲೇಯರ್ ಎಂಟ್ರಿ ಬಗ್ಗೆ ಬಿಗ್ ಅಪ್ಡೇಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ