ಭಾರತೀಯರಿಗೆ ಬ್ಲಿಂಕಿಟ್‌ನಿಂದ ಗುಡ್‌ ನ್ಯೂಸ್‌.. 10 ನಿಮಿಷಕ್ಕೆ ಮನೆ ಮುಂದೆ ಬಂದು ನಿಲ್ಲುತ್ತೆ ಆ್ಯಂಬುಲೆನ್ಸ್!

author-image
Gopal Kulkarni
Updated On
ಭಾರತೀಯರಿಗೆ ಬ್ಲಿಂಕಿಟ್‌ನಿಂದ ಗುಡ್‌ ನ್ಯೂಸ್‌.. 10 ನಿಮಿಷಕ್ಕೆ  ಮನೆ ಮುಂದೆ ಬಂದು ನಿಲ್ಲುತ್ತೆ ಆ್ಯಂಬುಲೆನ್ಸ್!
Advertisment
  • ಬ್ಲಿಂಕಿಟ್​ನಿಂದ ಹೊಸ ಆ್ಯಂಬುಲೆನ್ಸ್ ಸೇವೆ ಆರಂಭ
  • ತುರ್ತು ಚಿಕಿತ್ಸೆಗಾಗಿ ಹೊಸ ಸೇವೆ ಆರಂಭಿಸಿದ ಬ್ಲಿಂಕಿಟ್
  • ಕೇವಲ 10 ನಿಮಿಷದಲ್ಲಿ ಸೇವೆ ಒದಗಿಸುವ ಗುರಿ

ದಿನಸಿ ಸಾಮಗ್ರಿಗಳು, ಪ್ರಿಂಟೌಟ್ಸ್ ಹೀಗೆ ಹತ್ತು ಹಲವು ಸೇವೆಗಳನ್ನು ನೀಡುತ್ತಿದ್ದ ಬ್ಲಿಂಕಿಟ್​ ಆ್ಯಪ್​ ಈಗ ಹೊಸದೊಂದು ಸೇವೆಯನ್ನು ನೀಡಲು ಸಜ್ಜಾಗಿದೆ. ಗುರುಗಾಂವ್​ನಲ್ಲಿ ಮೊದಲ ಪ್ರಯೋಗ ಮಾಡಲು ಬ್ಲಿಂಕಿಟ್​ ಸಿದ್ಧತೆ ನಡೆಸಿದೆ. ಅದು ಆ್ಯಂಬುಲೆನ್ಸ್ ಸೇವೆ. ಕೇವಲ 10 ನಿಮಿಷದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಲು ಈಗ ಬ್ಲಿಂಕಿಟ್​ ರೆಡಿಯಾಗಿದೆ.

ಬ್ಲಿಂಕಿಟ್​ನ ಸಿಇಒನ ಅಲ್ಬಿಂದರ್​ ಧಿನ್ಸಾ ನಗರದಲ್ಲಿ ಸದ್ಯ ಐದು ಆ್ಯಂಬುಲೆನ್ಸ್​ಗಳು ಗುರುವಾರದಿಂದ ಕಾರ್ಯ ಆರಂಭ ಮಾಡಲಿವೆ ಎಂದು ಹೇಳಿದ್ದಾರೆ. ಆ್ಯಂಬುಲೆನ್ಸ್ ಕೊರೆತೆಗಳನ್ನು ಹಾಗೂ ಆಗುತ್ತಿರುವ ಸಮಸ್ಯೆಗಳನ್ನು ನೀಗಿಸಲು ನಾವು ಮೊದಲ ಹೆಜ್ಜೆಯನ್ನಿಟ್ಟಿದ್ದೇವೆ. ಆದಷ್ಟು ಬೇಗ ಸಾರ್ವಜನಿಕರಿಗೆ ಈ ತುರ್ತುಸೇವೆ ಲಭ್ಯವಾಗುವ ನಿಟ್ಟಿನಲ್ಲಿ ನಾವು ಕೆಲಸ ಆರಂಭಿಸಿದ್ದೇವೆ. ಅದರ ಮೊದಲ ಹಂತವಾಗಿ ಗುರುವಾರದಿಂದ ಐದು ಆ್ಯಂಬುಲೆನ್ಸ್​ಗಳು ಸೇವೆ ನೀಡಲು ರೋಡಿಗಿಳಿದಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಪಿನ್​ಕೋಡ್​ಗೆ ಒಂದು ಗರ್ಲ್​ ಫ್ರೆಂಡ್ ಕಳಿಸಿ’; ಈ ವಿಚಿತ್ರ ಬೇಡಿಕೆಗೆ ಸ್ವಿಗ್ಗಿಯ ರಿಪ್ಲೈ ಏನಿತ್ತು ಗೊತ್ತಾ?

ಈ ಒಂದು ವ್ಯವಸ್ಥೆಯನ್ನು ಯಾವುದೇ ಲಾಭದ ಉದ್ದೇಶದಿಂದ, ಗುರಿಯಿಂದ ಕೈಗೆತ್ತಿಕೊಂಡಿದ್ದಲ್ಲ. ಇದನ್ನು ನಗರದ ಮತ್ತಷ್ಟು ಭಾಗಗಳಲ್ಲಿ ಹಾಗೂ ಉಳಿದ ನಗರಗಳಲ್ಲಿಯೂ ವಿಸ್ತರಿಸುವ ಉದ್ದೇಶ ನಮ್ಮದಿದೆ ಎಂದು ದಿನ್ಸಾ ಹೇಳಿದ್ದಾರೆ.

publive-image

ನಮ್ಮ ಆ್ಯಂಬುಲೆನ್ಸ್​ಗಳು ಪ್ರಮುಖವಾಗಿ ಅಗತ್ಯವಿರುವ ಜೀವ ಉಳಿಸುವ ಉಪಕರಣಗಳನ್ನು ಹೊಂದಿವೆ. ಆಕ್ಸಿಜನ್ ಸಿಲಿಂಡರ್ , ಎಇಡಿ, ಸ್ಟ್ರೇಚರ್, ಮಾನಿಟರ್, ಸಕ್ಷನ್ ಮಷಿನ್ ಮತ್ತು ಅಗತ್ಯವಿರುವ ತುರ್ತು ಔಷಧಿ ಹಾಗೂ ಇಂಜಕ್ಷನ್​ಗಳನ್ನ ಹೊಂದಿರುತ್ತದವೆ. ಪ್ರತಿಯೊಂದು ಆ್ಯಂಬುಲೆನ್ಸ್ ಅನುಭವಿ ಹಾಗೂ ಪರಿಣಿತ ಚಾಲಕರನ್ನು ಹೊಂದಿರುತ್ತದೆ ಎಂದು ದಿನ್ಸಾ ಹೇಳಿದ್ದಾರೆ.

ಇದನ್ನೂ ಓದಿ:ಗುಜರಾತ್ ಟೈಟನ್ಸ್ ನಾಲ್ವರು ಆಟಗಾರರಿಗೆ ಸಂಕಷ್ಟ; ಶುಭಮನ್ ಗಿಲ್‌ಗೆ ಸಮನ್ಸ್ ಜಾರಿ! ಕಾರಣವೇನು?

ಈಗಾಗಲೇ ಹೇಳಿದಂತೆ ನಾವು ಲಾಭದ ಗುರಿಯನ್ನಿಟ್ಟುಕೊಂಡು ಈ ಸೇವೆಯನ್ನು ಆರಂಭಿಸಿಲ್ಲ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈ ಸೇವೆಯನ್ನು ನೀಡಲಾಗುವುದು. ದೀರ್ಘಕಾಲದವರೆಗೆ ಇರುವಂತಹ ಸಮಸ್ಯೆಯನ್ನು ದೂರ ಮಾಡಲೆಂದೇ ಈ ಸೇವೆಯನ್ನು ತಂದಿದ್ದೇವೆ ಇದು ತುಂಬಾ ಪ್ರಮುಖವಾದ ಸೇವೆ ಹಾಗೆ ನಮಗೆ ಹೊಸದಾಗಿರುವ ಸೇವೆ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ದೊಡ್ಡ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವ ಉದ್ದೇಶ ನಮ್ಮದಿದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ ಎಂದು ದಿನ್ಸಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment