newsfirstkannada.com

×

ಬ್ಲ್ಯೂ ಬೆರಿಽ, ನೆಲ್ಲಿಕಾಯಿ; ಚರ್ಮದ ಆರೋಗ್ಯಕ್ಕೆ ಇವೆರಡರಲ್ಲಿ ಯಾವುದು ಬೆಸ್ಟ್?

Share :

Published October 21, 2024 at 10:32am

Update October 21, 2024 at 2:09pm

    ತ್ವಚೆಯ ಸಮಸ್ಯೆಗಳಿಗೆ ಈ ಎರಡು ಹಣ್ಣುಗಳಲ್ಲಿ ಯಾವುದು ಉತ್ತಮ

    ನೆಲ್ಲಿಕಾಯಿ, ಬ್ಲ್ಯೂ ಬೆರಿಽಗಳಲ್ಲಿರುವ ಪೋಷಕಾಂಶಗಳು ಯಾವುವು ಗೊತ್ತಾ?

    ಇವುಗಳಿಂದ ಫೇಸ್​ಮಾಸ್ಕ್ ಮಾಡಿಕೊಳ್ಳುವುದರಿಂದ ಏನು ಲಾಭಗಳಿವೆ?

ತ್ವಚೆಯ ಆರೋಗ್ಯದ ವಿಚಾರದಲ್ಲಿ ನಾವು ಎಂದಿಗೂ ಕೂಡ ಹಿಂದೆ ಬೀಳುವುದಿಲ್ಲ. ಸಣ್ಣದೊಂದು ಮೊಡವೆಯಾದರೂ ಬೆನ್ನ ಹಿಂದೊಂದು ಹುಣ್ಣಾದ ಲೆಕ್ಕಕ್ಕೆ ನಾವು ಚಿಂತೆಗೆ ಬೀಳುತ್ತೇವೆ. ತ್ವಚೆಯ ಆರೋಗ್ಯಕ್ಕೆ ಹಲವು ರೀತಿಯ ಹಣ್ಣುಗಳನ್ನು ತಿನ್ನಲು ಸಲಹೆಗಳನ್ನು ನೀಡಲಾಗುತ್ತದೆ. ಹಲವು ಕ್ರೀಮ್ ಬಳಕೆಯನ್ನು ಕೂಡ ಮಾಡಲಾಗುತ್ತದೆ. ಆದ್ರೆ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನಮಗೆ ನೀಡಲಾಗುವ ಸಲಹೆಯೆಂದರೆ ಬ್ಲ್ಯೂ ಬೆರಿಽ ಹಾಗೂ ಬೆಟ್ಟದ ನೆಲ್ಲಿಕಾಯಿ ತಿನ್ನಲು ಹೇಳುತ್ತಾರೆ.

ಬ್ಲ್ಯೂ ಬೆರಿಽ ಸೇವಿಸುವುದರಿಂದ ಅನೇಕ ಆರೋಗ್ಯದ ಲಾfಭಗಳಿವೆ. ಅದರಲ್ಲೂ ತ್ವಚೆಯ ಆರೋಗ್ಯಕ್ಕೆ ಈ ಹಣ್ಣು ಉತ್ಕೃಷ್ಟವಾದದ್ದು ಎಂದೇ ಹೇಳಲಾಗುತ್ತದೆ. ಅತಿಪುಟ್ಟದಾದ ದುಂಡನೆಯ ಈ ಹಣ್ಣು ಅತಿಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅದರಲ್ಲಿರುವ ಪೋಷಕಾಂಶಗಳು ಜೀವಸತ್ವಗಳು ಏನೇನು ಅಂತ ನೋಡುವುದಾದ್ರೆ.

ಬ್ಲ್ಯೂ ಬೆರಿಽಗಳಲ್ಲಿ ಆಂಥಿಸಯಾನಿನ್​ಗಳು ಸಮೃದ್ಧವಾಗಿವೆ ಅಂದ್ರೆ ರಾಸಾಯನಿಕವಾಗಿ ಇವು ಗ್ಲುಕೊಸೈಡ್ ಎಂಬ ವರ್ಗಕ್ಕೆ ಸೇರುತ್ತವೆ. ಇದೇ ಕಾರಣದಿಂದ ಈ ಹಣ್ಣಿಗೆ ನೀಲಿ ಬಣ್ಣ ಬಂದಿರುತ್ತದೆ. ಈ ಆಂಟಿಆಕ್ಸಿಡೆಂಟ್​ಗಳು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದಿಂದ ವಯಸ್ಸು ಕಾಣದಂತೆ ಮಾಡುತ್ತದೆ.

ಇದರ ಜೊತೆಗೆ ಬ್ಲ್ಯೂ ಬೆರಿಽಯಲ್ಲಿ ವಿಟಮಿನ್ ಸಿ ಹಾಗೂ ಕೆ ಕೂಡ ಸಮೃದ್ಧವಾಗಿವೆ. ವಿಟಮಿನ್ ಕೆ ಇಂದಾಗಿ ಚರ್ಮಕ್ಕೆ ಪುನಶ್ಚೈತನ್ಯ ಶಕ್ತಿ ಬರುತ್ತದೆ. ಇನ್ನು ಫೈಬರ್ ಅಂಶವೂ ಕೂಡ ಈ ಹಣ್ಣಿನಲ್ಲಿ ಹೇರಳವಾಗಿರುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಇದು ಬಹುದೊಡ್ಡ ಪಾತ್ರ ನಿಭಾಯಿಸುತ್ತದೆ.

ಇದನ್ನೂ ಓದಿ:ಹೃದಯ ಸಮಸ್ಯೆ ಇರೋರಿಗೆ ಸೋಮವಾರ ಡೇಂಜರ್; ಯಾಕೆ ಈ ದಿನ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ?

ಇನ್ನು ನೆಲ್ಲಿಕಾಯಿ ಕೂಡ ಚರ್ಮದ ಆರೋಗ್ಯಕ್ಕೆ ಅತ್ಯಂತ ಉತ್ತಮ ಔಷಧಿ ಎಂದು ಆಯುರ್ವೇದ ಕಾಲದಿಂದಲೂ ಕೂಡ ಹೇಳಿಕೊಂಡು ಬರಲಾಗಿದೆ. ಅದು ನಿಜ ಕೂಡ ಹೌದು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡಾಗ ಅದು ಚರ್ಮದ ಆರೋಗ್ಯ ಕಾಪಾಡುವಲ್ಲಿ ವಹಿಸುವ ಪಾತ್ರದ ಬಗ್ಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ವಿಟಮಿನ್ ಸಿ ನೆಲ್ಲಿಕಾಯಿಯಲ್ಲಿ ನಮಗೆ ಹೇರಳವಾಗಿ ಸಿಗುತ್ತದೆ. ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ತುಂಬಾನೆ ಮುಖ್ಯವಾದದ್ದು ಅದು ಈ ನೆಲ್ಲಿಕಾಯಿಯಲ್ಲಿ ಹೇರಳವಾಗಿರುವುದರಿಂದ ಇದನ್ನು ನಿತ್ಯ ತಿನ್ನುವುದರಿಂದಾಗಿ ತ್ವಚೆಯ ಕಾಂತಿ ಪಳಪಳ ಹೊಳೆಯುತ್ತದೆ. ಅದು ಅಲ್ಲದೆ ನೆಲ್ಲಿಕಾಯಿಯಲ್ಲಿ ಪಾಲಿಫಿನಾಲ್​ಗಳನ್ನು ಹೊಂದಿರುವುದರಿಂದ ಇದು ಉರಿಯೂತ ಹಾಗೂ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೆ ಕುರು ಆಗಿದ್ಯಾ? ಈ ಸಮಸ್ಯೆ ಕಾಣಿಸಿಕೊಳ್ಳಲು ಕಾರಣುವೇನು ಗೊತ್ತಾ?

ಇನ್ನು ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ಐರನ್ ಮತ್ತು ಪೋಸ್ಪೊರಸ್ ಎಂಬ ಖನಿಜಗಳು ಕೂಡ ಸಮೃದ್ಧಿಯಾಗಿ ದೊರೆಯುತ್ತವೆ ಇದರಿಂದ ಚರ್ಮದ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ.

ಈ ಎರಡು ಸಸ್ಯಹಾರದಲ್ಲಿ ಚರ್ಮವನ್ನು ಆರೋಗ್ಯವಾಗಿಡುವ ಅಂಶಗಳಿದ್ದು ಎರಡು ಕೂಡ ಒಂದೇ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಚರ್ಮದ ಸಮಸ್ಯೆಗಳಿದ್ದಲ್ಲಿ ಇವೆರಡನ್ನು ಬಳಸಬಹುದು. ಇವುಗಳನ್ನು ಪೇಸ್ಟ್ ರೀತಿ ರೆಡಿ ಮಾಡಿ ಮುಖಕ್ಕೆ ಫೇಸ್​ಮಾಸ್ಕ್​ ರೀತಿ ಹಚ್ಚಿಕೊಂಡು 30 ನಿಮಿಷ ಬಿಟ್ಟು ತೊಳೆಯುವುದರಿಂದ ನಿಮ್ಮ ಚರ್ಮದ ಸಮಸ್ಯೆಗಳು ದೂರಾಗುವುದರ ಜೊತೆಗೆ ತ್ವಚೆಯ ಕಾಂತಿಯೂ ಕೂಡ ಹೊಳೆಯುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಲ್ಯೂ ಬೆರಿಽ, ನೆಲ್ಲಿಕಾಯಿ; ಚರ್ಮದ ಆರೋಗ್ಯಕ್ಕೆ ಇವೆರಡರಲ್ಲಿ ಯಾವುದು ಬೆಸ್ಟ್?

https://newsfirstlive.com/wp-content/uploads/2024/10/BLUE-BERRY-AND-AMLA.jpg

Load More