‘ದಯವಿಟ್ಟು ಗಮನಿಸಿ..’ ನಮ್ಮ ಮೆಟ್ರೋ ಸೇವೆಯಲ್ಲಿ ಅಡಚಣೆ.. BMRCL ಮಹತ್ವದ ಪ್ರಕಟಣೆ..!

author-image
Ganesh
Updated On
ನಮ್ಮ ಮೆಟ್ರೋದಲ್ಲಿ ಮಹಿಳೆಯರನ್ನು ಚುಡಾಯಿಸಿದ್ರೆ ಬರೋಬ್ಬರಿ ₹10 ಸಾವಿರ ದಂಡ; ಇದು ಓದಲೇಬೇಕಾದ ಸ್ಟೋರಿ
Advertisment
  • ಮೂರು ಗಂಟೆಗಳ ಕಾಲ ಮೆಟ್ರೋ ಸೇವೆ ಸ್ಥಗಿತ
  • ಬೆಳಗ್ಗೆ 7 ಗಂಟೆಯಿಂದ 10 ಗಂಟೆವೆರೆಗೆ ಮೆಟ್ರೋ ಓಡಲ್ಲ
  • ಎಲ್ಲೆಲ್ಲಿ ಪ್ರಯಾಣಿಸೋರಿಗೆ ತೊಂದರೆ ಆಗಲಿದೆ..?

ಮೆಟ್ರೋ ಪ್ರಯಾಣಿಕರಿಗೆ ನಮ್ಮ ಮೆಟ್ರೋ (Namma Metro) ಮಹತ್ವದ ಪ್ರಕಟಣೆ ಹೊರಡಿಸಿದೆ. ಮಾರ್ಚ್​ 9 ರಂದು ಅಂದರೆ ನಾಳೆ ಮಾಗಡಿ ರಸ್ತೆ ಹಾಗೂ ಎಂಜಿ ರಸ್ತೆ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಮೂರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

ಬೆಳಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಈ ಮಾರ್ಗದ ನಡುವೆ ಮೆಟ್ರೋ ಓಡಾಡಲ್ಲ. ಚಲ್ಲಘಟ್ಟ ಮತ್ತು ವೈಟ್​ ಫೀಲ್ಡ್​ ನಡುವಿನ ನೆರಳೆ ಮಾರ್ಗದಲ್ಲಿ ಹಳಿ ನಿರ್ವಹಣೆ ಕಾಮಗಾರಿ ಇದೆ. ಹೀಗಾಗಿ ನಮ್ಮ ಮೆಟ್ರೋ ಸೇವೆ ಇರಲ್ಲ ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಎಲ್ಲೆಲ್ಲಿಗೆ ಹೋಗೋರಿಗೆ ತೊಂದರೆ..?

ಕಬ್ಬನ್ ಪಾರ್ಕ್​, ಡಾ. ಬಿಆರ್ ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್​ ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ), ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ಮೂಲಕ ಹೋಗುವ ಪ್ರಯಾಣಿಕರಿಗೆ ಮೂರು ಗಂಟೆ ಅಡಚಣೆ ಆಗಲಿದೆ. ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಹೋಗಲು ಈ ಅವಧಿಯಲ್ಲಿ ಕ್ಯೂಆರ್​ ಟಿಕೆಟ್, ಟೋಕನ್ ಖರೀದಿಸದಂತೆ ತಿಳಿಸಲಾಗಿದೆ.

ಇದನ್ನೂ ಓದಿ: ಖ್ಯಾತ ಕನ್ನಡ​ ನಿರ್ದೇಶಕನಿಗೆ ಮಸಿ ಬಳಿದು, ಹಲ್ಲೆ.. ವಾಟಾಳ್, ಸಾರಾ ಗೋವಿಂದು ಬೆಂಬಲಿಗರ ವಿರುದ್ಧ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment