ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ನಾಳೆ ರಜೆ ಇಲ್ಲ ಎಂದು BMRCL ಸ್ಪಷ್ಟನೆ; ಗೊಂದಲ ಯಾಕೆ?

author-image
admin
Updated On
ಮೆಟ್ರೋ ಎಷ್ಟು ಸೇಫ್​​..? ದುರಂತ ತಪ್ಪಿಸಲು BMRCL ಮೆಗಾ ಪ್ಲಾನ್; ನೀವು ಓದಲೇಬೇಕಾದ ಸ್ಟೋರಿ!​
Advertisment
  • ನಾಳೆ ನಮ್ಮ ಮೆಟ್ರೋಗೆ ರಜೆ ಅನ್ನೋ ವದಂತಿ ಹಬ್ಬಿಸಿದ ಕಿಡಿಗೇಡಿಗಳು
  • ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೂ ಸರ್ಕಾರ ರಜೆ ಘೋಷಣೆ
  • ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದ ನಮ್ಮ ಮೆಟ್ರೋ ಅಧಿಕಾರಿಗಳು

ಮಾಜಿ ಸಿಎಂ ಎಸ್‌.ಎಂ ಕೃಷ್ಣ ಅವರು ನಿಧನರಾಗಿದ್ದು ರಾಜ್ಯ ಸರ್ಕಾರ 3 ಶೋಕಾಚರಣೆ ಘೋಷಣೆ ಮಾಡಿದೆ. ಹಿರಿಯ ರಾಜಕೀಯ ಮುತ್ಸದ್ಧಿಯ ಅಗಲಿಕೆಯ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ. ಆದರೆ ಕೆಲವು ಕಿಡಿಗೇಡಿಗಳು ನಾಳೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೂ ರಜೆ ಘೋಷಣೆ ಆಗಿದೆ ಅನ್ನೋ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

ನಾಳೆ ಶಾಲೆ-ಕಾಲೇಜುಗಳಿಗೆ ಮಾತ್ರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಆದರೆ ನಮ್ಮ ಮೆಟ್ರೋ ಸಂಚಾರಕ್ಕೂ ರಜೆ ಅನ್ನೋ ವದಂತಿ ಹಬ್ಬಿಸಲಾಗಿದೆ. ಈ ಬಗ್ಗೆ BMRCL ಅಧಿಕಾರಿಗಳು ನ್ಯೂಸ್ ಫಸ್ಟ್‌ ಚಾನೆಲ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ರಜೆ ಅನ್ನೋ ವದಂತಿ ಬಗ್ಗೆ BMRCL ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಎಸ್‌.ಎಂ ಕೃಷ್ಣಗೆ ರಾಜ್ಯ ಸರ್ಕಾರದಿಂದ ವಿಶೇಷ ಗೌರವ; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ 

ನಾಳೆ ಎಂದಿನಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಂಚಾರ ಇರಲಿದೆ. ಮೆಟ್ರೋ ಸಂಚಾರ ಇಲ್ಲವೆಂಬ ವದಂತಿ ಸುಳ್ಳು. ಮೆಟ್ರೋ ಸೇವೆ ಬೆಂಗಳೂರು ನಿವಾಸಿಗಳ ಅಗತ್ಯ ಸೇವೆಯಾಗಿದೆ. ಅದನ್ನ ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ BMRCL ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ನಾಳೆ ಎಂದಿನಂತೆ ಮೆಟ್ರೋ ಸಂಚಾರ ಪ್ರಯಾಣಿಕರಿಗೆ ಲಭ್ಯವಿದೆ ಎಂದು ಸ್ಪಷ್ಟಪಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment