ಮುಂದಿನ ನಿಲ್ದಾಣ.. ಮರೆಯದ ಅಪರ್ಣಾ ಧ್ವನಿಗೆ ಮೆಟ್ರೋ ಪ್ರಯಾಣಿಕರಿಂದ ವಿಶೇಷ ಮನವಿ; ಏನದು?

author-image
Veena Gangani
Updated On
ಮುಂದಿನ ನಿಲ್ದಾಣ.. ಅಪರ್ಣಾ ಬಳಿಕ ಮೆಟ್ರೋದ ಹೊಸ ಮಾರ್ಗಗಳಿಗೆ ಧ್ವನಿ ಯಾರದ್ದು?
Advertisment
  • ಮುಂದಿನ ನಿಲ್ದಾಣ ಎಂದು ನಮ್ಮ ಮೆಟ್ರೋದಲ್ಲಿ ಧ್ವನಿ ನೀಡಿದ್ದ ನಟಿ
  • ಅಪರ್ಣಾ ಅವರ ಧ್ವನಿ ನಮ್ಮ ಮೆಟ್ರೋದಲ್ಲಿ ಎಂದೆಂದಿಗೂ ಜೀವಂತ
  • ೆೆಎಂದೂ ಮರೆಯದ ಅಪರ್ಣಾ ಅವರ ಧ್ವನಿಗೆ ಪ್ರಯಾಣಿಕರ ಮನವಿ

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ನಿಧನರಾಗಿದ್ದಾರೆ. ಸ್ವಚ್ಛ ಕನ್ನಡದ ಮರೆಯಲಾಗದ ಧ್ವನಿ ಮೌನವಾಗಿರುವುದು ಕಲಾಭಿಮಾನಿಗಳಿಗೆ ಸಹಿಸಲಾರದ ನೋವು ತಂದಿದೆ. ಅಪರ್ಣಾ ಅವರ ಅಂತಿಮ ದರ್ಶನವನ್ನು  ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

publive-image

ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್‌ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?

ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಮಾತುಗಳಿಂದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ನೆಲೆಯೂರಿದ್ದ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿ ಬಣ್ಣದ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸರ್ಕಾರದ ಯಾವುದೇ ಕಾರ್ಯಕ್ರಮವಾಗಲಿ ಅಪರ್ಣಾ ಅವರ ಉಪಸ್ಥಿತಿ ಇರಬೇಕಿತ್ತು. ತಮ್ಮ ಸ್ವಚ್ಛ ಕನ್ನಡದಲ್ಲಿ ಅತಿಥಿಗಳನ್ನು ಆಗಮಿಸುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ನೆರೆದಿದ್ದವರನ್ನು ಖುಷಿಪಡಿಸುತ್ತಿತ್ತು. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋಗೂ ಕೂಡ ಧ್ವನಿಯಾಗಿದ್ದರು ಎಂಬುದು ವಿಶೇಷ.

publive-image


">July 12, 2024


ಕ್ಯಾನ್ಸರ್​ ಎಂಬ ಮಹಾಮಾರಿಯಿಂದ ಬಾರದ ಲೋಕಕ್ಕೆ ಪಯಣಿಸಿದ ನಟಿ ಅಪರ್ಣಾ ಅವರ ನಿಧನಕ್ಕೆ ಬಿಎಂಆರ್​ಸಿಎಲ್ ಸಂತಾಪ ಸೂಚಿಸಿದೆ. ಹೌದು, ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ನಟಿಯ ನಿಧನಕ್ಕೆ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಲಾಗಿದೆ. ಇದರ ಜೊತೆಗೆ ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ. ಅವರಿಗೆ ದೇವರ ವರದಾನದ ಧ್ವನಿ ಇತ್ತು. ನಮ್ಮ ಮೆಟ್ರೋ ಹಾಗೂ ತಮ್ಮ ಮಾಸದ ದನಿಗೂ ಇರುವ ನಂಟು ಎಂದಿಗೂ ಕಳಚದು. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಬರೆಯಲಾಗಿದೆ.

publive-image

BMRCL ಸಂಸ್ಥೆಗೆ ಪ್ರಯಾಣಿಕರಿಂದ ಮನವಿ

ಇದರ ಜೊತೆಗೆ ಮೆಟ್ರೋ ಪ್ರಯಾಣಿಕರು BMRCL ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ. ನಟಿ ಅಪರ್ಣಾ ಅವರ ಧ್ವನಿ ಎಂದೂ ಮರೆಯಾಗಬಾರದು. ಅಪರ್ಣಾ ಧ್ವನಿ ಪ್ರಯಾಣದ ಅಂದವನ್ನ ಹೆಚ್ಚಿಸಿದೆ. ಹೊಸದಾಗಿ ಸೇರ್ಪಡೆಯಾಗುವ ಮೆಟ್ರೋ ಲೈನ್​ಗಳಲ್ಲಿ ಅಪರ್ಣಾ ಧ್ವನಿ ಬೇಕು. AI ಬಳಸಿ ಅಪರ್ಣಾ ಧ್ವನಿ ಇರುವ ಹಾಗೆ ಮಾಡಿ. ಮೆಟ್ರೋದಲ್ಲಿ ಅಪರ್ಣಾ ಅವರ ಧ್ವನಿ ಕೇಳಿದಾಗ ಅವರಿನ್ನೂ ಬದುಕಿದ್ದಾರೆ ಅನ್ಸುತ್ತೆ. ವಾಯ್ಸ್ ಕೇಳಿದಾಗ ಇವರೇನಾ ವಿಧಿವಶರಾಗಿದ್ದು ಅನ್ನೋ ನೋವು ಕಾಡುತ್ತೆ. ಅಪರ್ಣಾ ಧ್ವನಿ ಮೆಟ್ರೋದಲ್ಲಿ ಮುಂದೆನೂ ಜೀವಂತವಾಗಿರಬೇಕು. ಹೊಸ ಲೈನ್ ಗಳಲ್ಲಿ AI ಬಳಸಿ ಅಪರ್ಣಾ ವಾಯ್ಸ್ ಇರುವಂತೆ ಮಾಡಲಿ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment