newsfirstkannada.com

ನಮ್ಮ ಮೆಟ್ರೋದಿಂದ ಭರ್ಜರಿ ಗುಡ್​​ನ್ಯೂಸ್​.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Share :

Published August 31, 2024 at 5:35pm

    ಬೆಂಗಳೂರಲ್ಲಿ ಉದ್ಯೋಗ ಹುಡುಕುತ್ತಿರುವರಿಗೆ ಇದು ಅವಕಾಶ

    ಮೆಟ್ರೋದಲ್ಲಿ ಜಾಬ್ ಬೇಕೆಂದವರು ಒಮ್ಮೆ ಟ್ರೈ ಮಾಡಿ ನೋಡಿ

    ಈ ಹುದ್ದೆಗಳಿಗೆ ಅಪ್ಲೇ ಮಾಡುವುದೇಗೆ, ಒಟ್ಟು ಪೋಸ್ಟ್​ಗಳು.?

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್​ಸಿಎಲ್​)ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ.

ಸದ್ಯ ಮೆಟ್ರೋ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸಾರಿಗೆ ಸಂಸ್ಥೆಯಾಗಿದೆ. ಹೀಗಾಗಿ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವವರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ಈ ಹುದ್ದೆಗಳಿಗೆ ಆನ್​​ಲೈನ್ ಹಾಗೂ ಆಫ್​​ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಉತ್ತಮವಾದ ಸಂಬಳ ಕೂಡ ಇರುತ್ತದೆ. ಆಸಕ್ತರು ಒಮ್ಮೆ ಟ್ರೈ ಮಾಡಿ ನೋಡಿ.

ಬಿಎಂಆರ್​ಸಿಎಲ್​ನಲ್ಲಿ ಖಾಲಿ ಇರುವ ಹುದ್ದೆಗಳು

  • ಒಟ್ಟು ಪೋಸ್ಟ್​ಗಳು- 58
  • ಹುದ್ದೆಯ ಸ್ಥಳ- ಬೆಂಗಳೂರು
  • ಹುದ್ದೆಯ ಹೆಸರು- ಸಹಾಯಕ ಭದ್ರತಾ ಅಧಿಕಾರಿ ಹುದ್ದೆ
  • ತಿಂಗಳ ಸಂಬಳ- 30,000 ದಿಂದ 32,950 ರೂ.ಗಳು

ವಯೋಮಿತಿ ಸಡಿಲಿಕೆ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಯಮಗಳ ಪ್ರಕಾರ ಇರುತ್ತದೆ

ವಿದ್ಯಾರ್ಹತೆ: BMRCL ನಿಯಮಗಳ ಪ್ರಕಾರ ಕೇಳಿದಂತೆ ಇರುತ್ತದೆ.

ವಯೋಮಿತಿ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿ ಗರಿಷ್ಠ ವಯಸ್ಸು 2024 ಆಗಸ್ಟ್​ 13ರಂತೆ 62 ವರ್ಷಗಳು.

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ..?
ದೈಹಿಕ ಪರೀಕ್ಷೆ, ಹುದ್ದೆಗೆ ಬೇಕಾದ ಅರ್ಹತೆ, ಅನುಭವ ಮತ್ತು ಸಂದರ್ಶನ

ಅಪ್ಲೇ ಮಾಡುವುದು ಹೇಗೆ..?
english.bmrc.co.in ವೆಬ್​​ಸೈಟ್​ಗೆ ಭೇಟಿ ನೀಡಬೇಕು. ಬಳಿಕ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬಹುದು. ನಂತರ ಆನ್​ಲೈನ್​ನಲ್ಲಿ ಹಾಕಿದ ಪ್ರತಿ ಹಾಗೂ ಸಂಬಂಧಿತ ದಾಖಲೆಗಳಿಗೆ ಸೆಲ್ಫ್ ಅಟೆಸ್ಟೆಡ್ ಮಾಡಿ ಕಾಪಿಗಳನ್ನು ಕಚೇರಿಗೆ ಕಳುಹಿಸಬೇಕು.

ನೀವು ಕಳುಹಿಸಬೇಕಾದ ವಿಳಾಸ
ಜನರಲ್ ಮ್ಯಾನೇಜರ್ (ಹೆಚ್​ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027

ಪ್ರಮುಖವಾದ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 09

ಆನ್​​ಲೈನ್​ನಲ್ಲಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ- https://projectrecruit.bmrc.co.in/frmApplFillTab.aspx?ND=82

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋದಿಂದ ಭರ್ಜರಿ ಗುಡ್​​ನ್ಯೂಸ್​.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

https://newsfirstlive.com/wp-content/uploads/2023/07/Metro.jpg

Load More