ನಮ್ಮ ಮೆಟ್ರೋದಿಂದ ಗುಡ್​ನ್ಯೂಸ್​.. 50 ವರ್ಷದ ಒಳಗಿನವರಿಗೆ 100ಕ್ಕೂ ಹೆಚ್ಚು ಉದ್ಯೋಗಗಳು

author-image
Bheemappa
Updated On
ನಮ್ಮ ಮೆಟ್ರೋದಿಂದ ಗುಡ್​ನ್ಯೂಸ್​.. ಉದ್ಯೋಗಗಳಿಗೆ ಆಹ್ವಾನ ಮಾಡಿದ BMRCL
Advertisment
  • ಒಟ್ಟು ಎಷ್ಟು ಉದ್ಯೋಗಗಳಿಗೆ ನಮ್ಮ ಮೆಟ್ರೋ ಆಹ್ವಾನ ಮಾಡಿದೆ?
  • ಈ ಉದ್ಯೋಗಗಳಿಗೆ ಯಾರು ಯಾರು ಅರ್ಜಿ ಸಲ್ಲಿಕೆ ಮಾಡಬಹುದು
  • ಸಿಲಿಕಾನ್​ ಸಿಟಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಪರ್ಕ ಸಾರಿಗೆ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್​ಸಿಎಲ್​) ಅತಿ ವೇಗವಾಗಿ ಬೆಳೆಯುತ್ತಿರುವ ಸಂಪರ್ಕ ಸಾರಿಗೆ ಆಗಿದೆ. ಅತ್ಯಂತ ಉನ್ನತ ತಂತ್ರಜ್ಞಾನದಿಂದ ಸಿಲಿಕಾನ್​ ಸಿಟಿಯ ನಮ್ಮ ಮೆಟ್ರೋ ಖ್ಯಾತಿ ಪಡೆದಿದೆ. ಸದ್ಯ ಇದರಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು ಸಂಸ್ಥೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಬಿಎಂಆರ್​ಸಿಎಲ್ ಅಂದರೆ ಗಾರ್ಡನ್​ ಸಿಟಿಯ ನಮ್ಮ ಮೆಟ್ರೋದಲ್ಲಿ ಹೊಸ ಉದ್ಯೋಗಗಳಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಬೆಂಗಳೂರಿನಲ್ಲೇ ಉದ್ಯೋಗ ಬೇಕು ಎನ್ನುವವರಿಗೆ ಇದು ಅತ್ಯಂತ ಉತ್ತಮವಾದ ಅವಕಾಶ ಆಗಿದೆ. ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಉದ್ಯೋಗದ ಹೆಸರು, ಎಷ್ಟು ಹುದ್ದೆಗಳು
ನಿರ್ವಾಹಕರು (Maintainer)
ಒಟ್ಟು ಉದ್ಯೋಗಗಳು- 150

ಕೆಲಸ ಮಾಡುವ ಸ್ಥಳ- ಬೆಂಗಳೂರು

ಇದನ್ನೂ ಓದಿ:ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್​ನ್ಯೂಸ್.. 1,007 ಹುದ್ದೆಗಳು ಖಾಲಿ

publive-image

ವಿದ್ಯಾರ್ಹತೆ ಏನು ಕೇಳಲಾಗಿದೆ?

10ನೇ ತರಗತಿ ಜೊತೆಗೆ ಐಟಿಐ ಪಾಸ್ ಆಗಿರಬೇಕು

(ಟೆಕ್ನಿಕಲ್ ಟ್ರೇಡ್‌ಗಳು- ಎಲೆಕ್ಟ್ರಿಶಿಯನ್, ಎನ್‌ಸ್ಟ್ರುಮೆಂಟೇಷನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೈಯರ್‌ಮೆನ್, ಫಿಟ್ಟರ್, ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್, ಮೆಕ್ಯಾನಿಕ್-ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್‌, ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ಮೇಂಟೆನನ್ಸ್‌, ಮೆಕ್ಯಾನಿಕಲ್ ಕಂಮ್ಯುನಿಕೇಷನ್, ಮೆಕ್ಯಾನಿಕ್ ಮೆಕಾಟ್ರಾನಿಕ್ಸ್‌ ಅಥವಾ ಎನ್‌ಸಿವಿಟಿ, ಎನ್‌ಸಿಟಿವಿಟಿ, ಎನ್‌ಎಸಿ)

ಮಾಸಿಕ ವೇತನ ಶ್ರೇಣಿ ಹೇಗಿದೆ?
25,000 ದಿಂದ 59,060 ರೂಪಾಯಿಗಳು

ವಯಸ್ಸಿನ ಮಿತಿ ಎಷ್ಟು?
50 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ
100 ಅಂಕಗಳಿಗೆ ಪರೀಕ್ಷೆ
ಮೆಡಿಕಲ್​ ಫಿಟ್ನೆಸ್​ ಪರೀಕ್ಷೆ

ಹುದ್ದೆಗೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 23 ಏಪ್ರಿಲ್
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 22 ಮೇ
ಅರ್ಜಿಯ ಪ್ರಿಂಟ್ ಔಟ್​ ತೆಗೆದುಕೊಳ್ಳುವ ದಿನಾಂಕ- 27 ಮೇ

ಅರ್ಜಿ ಸಲ್ಲಿಕೆಗೆ ವೆಬ್​ಸೈಟ್​-https://recruitp.bmrc.co.in/

ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ, ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿನ ಪ್ರಿಂಟ್​ಔಟ್​ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಇತ್ತೀಚಿನ ನಿಮ್ಮ ಪಾಸ್‌ಫೋಟೋ ಅಂಟಿಸಿ ಮತ್ತು ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಎಲ್ಲಾ ದಾಖಲೆಗಳ ಲಗತ್ತಿಸಿ ಅದನ್ನು ಸೆಲ್ಫ್​ ಅಟೆಸ್ಟೆಡ್​ ಮಾಡಿ ಕೆಳಗೆ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ

The General Manager (HR),
Bangalore Metro Rail Corporation Limited,
III Floor, BMTC Complex, K.H Road, Shanthinagar, Bengaluru-560 027

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment