newsfirstkannada.com

ರೈತನ ಬಟ್ಟೆ ನೋಡಿ ಮೆಟ್ರೋ ಪ್ರವೇಶ ನಿರಾಕರಣೆ; ಇದೆಂಥಾ ಸ್ಥಿತಿ ಬಂತು..?

Share :

Published February 26, 2024 at 10:12pm

    ರೈತನ ಬಟ್ಟೆ ನೋಡಿ ಮೆಟ್ರೋ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ!

    ಅನ್ನದಾತನಿಗೆ ಮೆಟ್ರೋ ಹತ್ತಲು ಬಿಡಲಿಲ್ಲ ನಮ್ಮ ಮೆಟ್ರೋ ಸಿಬ್ಬಂದಿ

    ಮಾನವೀಯತೆ ಮರೆತ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡ BMRCL

ಬೆಂಗಳೂರು: ಕಷ್ಟನೋ ಸುಖನೋ.. ಯಾರೊಬ್ಬರನ್ನ ಕೇಳದೇ ನೇಗಿಲನ್ನು ಹೊತ್ತು ಭೂತಾಯಿಯ ಸೇವೆ ಮಾಡುವ ಜೀವಿ ಅಂದ್ರೆ ಅದು ರೈತ. ಬಡವನಾಗಲಿ, ಶ್ರೀಮಂತನಾಗಲಿ ಅನ್ನ ಕೊಡುವ ದೊರೆಗೆ ಎಲ್ಲ ಒಂದೇ. ಆದ್ರೆ, ಇಂಥಾ ಭೂತಾಯಿಯ ಮಗನಿಗೆ ಬೆಂಗಳೂರಿನ ಮೆಟ್ರೋ ಸಿಬ್ಬಂದಿ ಅವಮಾನ ಮಾಡಿದ್ದಾರೆ. ಬಟ್ಟೆ ಗಲೀಜಾಗಿದೆ ಅನ್ನೋ ಕಾರಣಕ್ಕೆ ಅನ್ನದಾತನನ್ನ ರೈಲು ಹತ್ತಿಸದೇ ಇರೋದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ರೈತನ ಬಟ್ಟೆ ನೋಡಿ ಮೆಟ್ರೋ ಪ್ರವೇಶ ನಿರಾಕರಣೆ! ಇದೆಂಥಾ ಸ್ಥಿತಿ ಬಂತು?

ಹೌದು, ರೈತ ಅಂದ್ರೆ ಸಕಲ ಜೀವರಾಶಿಗಳಿಗೂ ಅನ್ನ ಕೊಡುವ ದಾನಿ. ಅದೆಷ್ಟೇ ಕಷ್ಟವಾದ್ರೂ ಮಳೆಯಿರಲಿ ಬಿಸಿಲಿರಲಿ ಉಳುಮೆ ಮಾಡಿ ಜನರ ಹೊಟ್ಟೆ ತುಂಬಿಸುವ ದೊರೆ. ಆದ್ರೆ, ಇಂಥಾ ದೊರೆಗೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಅವಮಾನವಾಗಿರೋ ಘಟನೆ ನಡೆದಿದೆ. ಬಟ್ಟೆಯಿಂದಲೇ ರೈತನನ್ನ ಅಳೆದಿರುವ ಮೆಟ್ರೋ ಸಿಬ್ಬಂದಿ ರೈತನನ್ನ ರೈಲು ಹತ್ತಲು ಬಿಡದೇ ಉದ್ಧಟತನ ತೋರಿದ್ದಾರೆ.

ಚೆನ್ನಾಗಿ ಬಟ್ಟೆ ಧರಿಸಿದ್ರೆ ಮಾತ್ರ ಮೆಟ್ರೋದೊಳಗೆ ಎಂಟ್ರಿನಾ?

ಈ ವ್ಯಕ್ತಿ ನೋಡಿದ್ರೆ ಗೊತ್ತಾಗುತ್ತೆ ಹಳ್ಳಿಯಿಂದ ಬಂದಿರುವ ರೈತ ಅಂತ. ರೈತನ ಬಟ್ಟೆ ಗಲೀಜಾಗಿದೆ. ಗದ್ದೆಯಲ್ಲಿ ಉಳುಮೆ ಮಾಡುವ ಅಮಾಯಕ ಅನ್ನದಾತ ಬಟ್ಟೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಾನೆ ಹೇಳಿ. ರೈತನಿಗೆ ಅನ್ನ ಹಾಕೋದಷ್ಟೆ ಗೊತ್ತು. ಹೀಗೆ ಈ ರೈತ ರಾಜಾಜಿನಗರದಿಂದ ಮೆಜೆಸ್ಟಿಕ್​ಗೆ ಪ್ರಯಾಣ ಮಾಡ್ಬೇಕಿತ್ತು. ಹೀಗಾಗಿ ಸಹ ಪ್ರಯಾಣಿಕ ಕಾರ್ತಿಕ್ ಅನ್ನೋರು ರೈತನಿಗೆ ಸಹಾಯ ಮಾಡ್ತಿದ್ರು. ಆದ್ರೆ ರಾಜಾಜಿನಗರದ ಭದ್ರತಾ ಸಿಬ್ಬಂದಿ ರೈತನನ್ನ ಒಳಗೆ ಬಿಡಲ್ಲ ಅಂತ ಕ್ಯಾತೆ ತೆಗೆದು ಬಿಟ್ಟಿದ್ರು. ಅಯ್ಯೋ ಸ್ವಾಮಿ ಅವರು ರೈತರು ನೀವು ಅವರನ್ನೇ ಒಳಗೆ ಬಿಡಲ್ಲ ಅಂದ್ರೆ ಹೇಗೆ ಅಂತ ಒಂದಿಬ್ಬರು ಪ್ರಯಾಣಿಕರು ಸೆಕ್ಯೂರಿಟಿಗೆ ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಆದ್ರೂ ಸೆಕ್ಯೂರಿಟಿಗಳು ತಮ್ಮ ಮೊಂಡುತನ ಬಿಟ್ಟಿಲ್ಲ. ಅವರ ಬಟ್ಟೆ ಗಲೀಜಾಗಿದೆ ಅದಕ್ಕೆ ಒಳಗೆ ಬಿಡಲ್ಲ ಅಂತ ಪಟ್ಟು ಹಿಡಿದಿದ್ರು. ಅಲ್ಲ ಸ್ವಾಮಿ ಮೆಟ್ರೋ ವಿಐಪಿಗಳಿಗಷ್ಟೆನಾ.. ಅಥವಾ ಮೆಟ್ರೋ ಪ್ರಯಾಣ ಮಾಡೋದಕ್ಕೆ ಡ್ರೆಸ್ ಕೋಡ್ ಏನಾದ್ರೂ ಇದ್ಯಾ?.. ಮೆಟ್ರೋ ಸಾರ್ವಜನಿಕ ಸಾರಿಗೆ ಅನ್ನೋದನ್ನ ಮರೆತು ಇಲ್ಲಿನ ಭದ್ರತಾ ಸಿಬ್ಬಂದಿ ಅನ್ನದಾತನಿಗೆ ಅವಮಾನ ಮಾಡಿದ್ದಾರೆ.

ಹಾಗೇ ನೋಡಿದರೇ ಈ ಸೆಕ್ಯೂರಿಟಿಗಳೇ ಇವರಿಗೆ ಸರಿಯಾಗಿ ಎಲ್ಲಿಗೆ ಹೋಗಬೇಕು ಅಂತ ಮಾಹಿತಿ ನೀಡಬೇಕಿತು. ಆದ್ರೆ ಇವರೇ ರೈತನ ಜೊತೆ ಕಿರಿಕ್ ಮಾಡ್ಕೊಂಡು ಅವರಿಗೆ ತೊಂದರೆ ಮಾಡಿದ್ದಾರೆ. ಸಹ ಪ್ರಯಾಣಿಕರು ಪ್ರಶ್ನೆ ಮಾಡೋದಕ್ಕೆ ಮುಂದಾಗಿದ್ದಾರೆ. ಬಟ್ಟೆ ಗಲೀಜು ಅಂತ ಒಳಗೆ ಬಿಡಲ್ಲ ಅಂದ್ರೆ ಏನ್ ಅರ್ಥ? ಅವರು ರೈತರು ಇರೋದೆ ಹಾಗೆ ಅಂತ ತಿಳಿಸಿ ಹೇಳೋದಕ್ಕೆ ಮುಂದಾಗಿದ್ದಾರೆ. ಆದ್ರೂ ಮೆಟ್ರೋ ಸೆಕ್ಯೂರಿಟಿ ಇವರ ಮಾತು ಕೇಳಿಲ್ಲ. ಏನಿಲ್ಲ ಅಂದ್ರು ಸುಮಾರು 15 ನಿಮಿಷ ಈ ವಾಗ್ವಾದ ನಡೆದಿದೆ. ಸೆಕ್ಯೂರಿಟಿಗಳು ಬೇಡ ಅಂದ್ರೂ ಕಾರ್ತಿಕ್ ಬಿಟ್ಟಿಲ್ಲ. ರೈತನನ್ನ ಮೆಟ್ರೋದೊಳಗೆ ಕರೆದುಕೊಂಡು ಬಂದು ಮೆಜೆಸ್ಟಿಕ್ ಬಿಟ್ಟಿದ್ದಾರೆ. ಬಳಿಕ ಈ ವಿಡಿಯೋ ಕಾರ್ತಿಕ್ ಫ್ರೆಂಡ್​​ ದೀಪಕ್ ಅನ್ನೋರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಮೆಟ್ರೋ ಸಿಬ್ಬಂದಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮೆಟ್ರೋ ಸಾರ್ವಜನಿಕ ಸಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲರಿಗೂ ಹಕ್ಕಿದೆ ಅಂತ ಜನ ಕಿಡಿ ಕಾರಿದ್ದಾರೆ.

ಮಾನವೀಯತೆ ಮರೆತ ಸಿಬ್ಬಂದಿ ವಿರುದ್ಧ ಬಿಎಂಆರ್‌ಸಿಎಲ್ ಕ್ರಮ!

ಮೆಟ್ರೋ ಸಿಬ್ಬಂದಿಯ ಉದ್ಧಟತನದ ವಿಡಿಯೋ ವೈರಲ್ ಆಯ್ತು. ಬಿಎಂಆರ್​ಸಿಎಲ್ ಅಲರ್ಟ್ ಆಯ್ತು. ರೈತನಿಗೆ ಅವಮಾನ ಮಾಡಿದ ಸೆಕ್ಯುರಿಟಿ ಮೇಲ್ವಿಚಾರಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ BMRCL ಪಿಆರ್​ಓ ಯಶವಂತ್ ಚೌಹಾಣ್ ನಮ್ಮ ಮೆಟ್ರೋದಲ್ಲಿ ಬಡವರು, ಶ್ರೀಮಂತರೆನ್ನದೇ ಎಲ್ಲರೂ ಓಡಾಟವನ್ನು ನಡೆಸಬಹುದು. ಆ ರೀತಿ ಒಬ್ಬ ವ್ಯಕ್ತಿಯನ್ನು ತಡೆಯುವ ಅಧಿಕಾರ ಯಾರಿಗೂ ಇರಲ್ಲ, ಆ ರೀತಿ ಒಬ್ಬ ವ್ಯಕ್ತಿಯನ್ನು ತಡೆದಿರೋದು ತಪ್ಪು, ಈ ಬಗ್ಗೆ ಸೆಕ್ಯೂರಿಟಿಗಳಿಗೆ ತರಬೇತಿ ನೀಡುವ ಕೆಲಸ ಮಾಡ್ತೇವೆ ಎಂದಿದ್ದಾರೆ. ಅನ್ನದಾತನನ್ನ ಮೆಟ್ರೋ ಒಳಗೆ ಬಿಡದೇ ಇರೋದು ನಿಜಕ್ಕೂ ಖಂಡನೀಯ.. ಇನ್ನಾದ್ರೂ ನಮ್ಮ ಮೆಟ್ರೋ ಎಚ್ಚೆತ್ತುಗೊಂಡು ಇಂಥಾ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಈ ಬಗ್ಗೆ ಸಿಬ್ಬಂದಿಗಳಿಗೂ ಸೂಕ್ತ ತರಬೇತಿ ನೀಡುವ ಮೂಲಕ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತನ ಬಟ್ಟೆ ನೋಡಿ ಮೆಟ್ರೋ ಪ್ರವೇಶ ನಿರಾಕರಣೆ; ಇದೆಂಥಾ ಸ್ಥಿತಿ ಬಂತು..?

https://newsfirstlive.com/wp-content/uploads/2024/02/namma-metro-6.jpg

Load More