ದಸರಾ ಹೊತ್ತಲ್ಲೇ ಪ್ರಯಾಣಿಕರಿಗೆ ಬಿಗ್​ ಶಾಕ್​ ಕೊಟ್ಟ ನಮ್ಮ ಮೆಟ್ರೋ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಮೆಟ್ರೋ ಎಷ್ಟು ಸೇಫ್​​..? ದುರಂತ ತಪ್ಪಿಸಲು BMRCL ಮೆಗಾ ಪ್ಲಾನ್; ನೀವು ಓದಲೇಬೇಕಾದ ಸ್ಟೋರಿ!​
Advertisment
  • ದಸರಾ ಹಬ್ಬದ ಹೊತ್ತಲ್ಲೇ ಬೆಂಗಳೂರು ಮಂದಿಗೆ ಬಿಗ್​ ಶಾಕ್​​!
  • ಬೆಂಗಳೂರು ಪ್ರಯಾಣಿಕರಿಗೆ ಬಿಗ್​ ಶಾಕ್​ ಕೊಟ್ಟ ನಮ್ಮ ಮೆಟ್ರೋ
  • 2ನೇ ಬಾರಿ ಟಿಕೆಟ್ ದರ ಏರಿಸಲು‌ ಮುಂದಾದ ಬಿಎಂಆರ್ಸಿಎಲ್

ಬೆಂಗಳೂರು: ದಸರಾ ಹಬ್ಬರ ನಿಮಿತ್ತ ಮೈಸೂರು ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಸಿಲಿಕಾನ್​​ ಸಿಟಿ ಮಂದಿ ಪ್ಲಾನ್​ ಮಾಡಿಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ರೈಲ್ವೆ ಸ್ಟೇಷನ್​​, ಬಸ್​ ಸ್ಟ್ಯಾಂಡ್​ಗೆ ಹೋಗಲು ಬಹುತೇಕರು ಮೆಟ್ರೋ ಬಳಸುತ್ತಾರೆ. ಹಾಗಾಗಿ ಬಿಎಂಆರ್​ಸಿಎಲ್ ಹೆಚ್ಚುವರಿ ಮೆಟ್ರೋ ವ್ಯವಸ್ಥೆ ಮಾಡಲು ಮುಂದಾಗಿದೆ. ಇದರ ಮಧ್ಯೆ ಮೆಟ್ರೋ ಪ್ರಯಾಣಿಕರಿಗೆ ಬಿಗ್​ ಶಾಕಿಂಗ್​ ನ್ಯೂಸ್​ ಒಂದಿದೆ.

ಸಿಲಿಕಾನ್​ ಸಿಟಿ ಮಂದಿಗೆ ಶಾಕ್ ಎದುರಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾದ ಬಿಎಂಆರ್ಸಿಎಲ್ ಎರಡನೇ ಬಾರಿ ಟಿಕೆಟ್ ದರ ಏರಿಸಲು‌ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಖುದ್ದು ಬಿಎಂಆರ್​ಸಿಎಲ್ ಶೀಘ್ರದಲ್ಲೇ ಮೆಟ್ರೋ ದರ ಏರಿಕೆಯಾಗಲಿದೆ ಎಂದು ಹೇಳಿದೆ.

ಈ ಬಗ್ಗೆ ಬಿಎಂಆರ್​ಸಿಎಲ್ ಅಧಿಕೃತ ಜಾಹಿರಾತು ನೀಡಿದ್ದು, ಸದ್ಯದ ಮೆಟ್ರೋದ ಟಿಕೆಟ್ ದರಕ್ಕಿಂತ 15 ರಿಂದ 20 ಪರ್ಸೆಂಟ್​ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹೊಸ ದರ ಮುಂದಿನ ತಿಂಗಳಲ್ಲಿ ಜಾರಿಯಾಗುವ ಸಾಧ್ಯತೆಯಿದೆ. ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮೆಟ್ರೋ ಕಮಿಟಿ ಮುಂದಾಗಿದೆ.

ಪ್ರಸ್ತುತ ಮೆಟ್ರೋ ಟಿಕೆಟ್​​ ರೇಟ್​ ಎಷ್ಟು?

ಸದ್ಯ ನಮ್ಮ ಮೆಟ್ರೋದಲ್ಲಿ ಕನಿಷ್ಠ ಟಿಕೆಟ್ ದರ 10 ರೂ. ಮತ್ತು ಗರಿಷ್ಠ ದರ 60 ರೂ. ಇದೆ. ಸ್ಮಾರ್ಟ್‌ಕಾರ್ಡ್ ಬಳಕೆದಾರರಿಗೆ ಮೆಟ್ರೋ ದರದಿಂದ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ:ಹೆಚ್‌.ಡಿ ಕುಮಾರಸ್ವಾಮಿಗೆ ಬಿಗ್ ಶಾಕ್.. FIR ಬಳಿಕ ದಳಪತಿಗೆ ಬಂಧನದ ಭೀತಿ; ಮುಂದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment