/newsfirstlive-kannada/media/post_attachments/wp-content/uploads/2023/12/bmtc-and-metro.jpg)
ಬೆಂಗಳೂರು: ಹೊಸ ವರ್ಷಕ್ಕೆ ಕೌಂಟ್​ಡೌನ್ ಶುರುವಾಗಿದೆ. ನ್ಯೂ ಇಯರ್​ ವೆಲಕಂ ಮಾಡೋಕೆ ಬೆಂಗಳೂರು ಸಜ್ಜಾಗಿದೆ. ನ್ಯೂ ಇಯರ್​ ಹಾಟ್ ಸ್ಪಾಟ್​ ಅಂತಾನೇ ಕರೆಸಿಕೊಳ್ಳುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲದಲ್ಲಿ ಈಗಾಗಲೇ ಸೆಲಬ್ರೇಷನ್ ಮೋಡ್ ಆನ್ ಆಗಿದೆ. ಕೈಯಲ್ಲಿ ಕಾಕ್​ಟೈಲ್ ಹಿಡ್ಕೊಂಡ್ ಭರ್ಜರಿ ಸ್ಟೆಪ್ಸ್​ ಹಾಕಿಕೊಂಡು ಮಜಾ ಮಾಡ್ತಿದ್ದಾರೆ.
ಪೊಲೀಸ್​ ಇಲಾಖೆಯಿಂದ ಹೈ ಅಲರ್ಟ್​..!
ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಹೀಗೆ ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಪೊಲೀಸ್​​ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಡಾಗ್​ SQUAD ಜೊತೆಗೆ ಪ್ರತೀ 50 ಮೀಟರ್​ಗೂ 3 ರಿಂದ 4 ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಣ್ಗಾವಲು ಇಟ್ಟಿದೆ. ಸೆಲೆಬ್ರೇಷನ್ ನಡೆಯುವ ಸ್ಥಳಗಳಿಗೆಲ್ಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಷ್ಟೇ ಅಲ್ಲ.. ರಾತ್ರಿ ಒಂದು ಗಂಟೆಯೊಳಗೆ ಪಬ್​ ರೆಸ್ಟೋರೆಂಟ್​ಗಳನ್ನ ಕ್ಲೋಸ್ ಮಾಡ್ಬೇಕು ಅಂತ ಪೊಲೀಸ್ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಜೊತೆಗೆ ಮತ್ತಷ್ಟು ರೂಲ್ಸ್​ಗಳನ್ನೂ ಜಾರಿ ಮಾಡಿದೆ.
ನ್ಯೂ ಇಯರ್​​ ರೂಲ್ಸ್​​..!
ಈಗ ಎಂಜಿ ರೋಡ್​, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ ನೀಡಲಾಗಿದೆ. ಆದ್ರೆ ರಾತ್ರಿ 1ರಿಂದ 2 ಗಂಟೆಯೊಳಗೆ ನ್ಯೂ ಇಯರ್​ ಸೆಲಬ್ರೇಷನ್​ ಮುಗಿಸಬೇಕು. ರಾತ್ರಿ 9 ಗಂಟೆ ನಂತರ ನಗರದ ಪ್ರಮುಖ ಫ್ಲೈ ಓವರ್​ ಬಂದ್ ಆಗುತ್ತೆ. ಸಂಜೆ 7 ಗಂಟೆ ಬಳಿಕ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ವಾಹನ ಸಂಚಾರ ಬಂದ್ ಆಗಲಿದೆ. ಲೌಡ್ ಸ್ಪೀಕರ್, ಪಟಾಕಿ ಸಿಡಿಸೋಕೆ ನಿರ್ಬಂಧ ಹೇರಲಾಗಿದೆ. ಡ್ರಿಂಕ್ ಆಂಡ್ ಡ್ರೈವ್, ವೀಲಿಂಗ್ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಸೆಲೆಬ್ರೇಷನ್ಸ್​​ಗೆ ಬರೋ ಜನರ ಮೇಲೆ ನಿಗಾ ಇಡೋದಕ್ಕೆ ದೊಡ್ಡ ದೊಡ್ಡ ಸ್ಕ್ರೀನ್​ಗಳ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಮೆಟ್ರೋ.. ಬಿಎಂಸಿಟಿ ಸಂಚಾರ ಅವಧಿ ವಿಸ್ತರಣೆ
ಇನ್ನು ನ್ಯೂಇಯರ್​ ಸೆಲೆಬ್ರೇಷನ್​ಗೆ ಬರುವವರಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ಮತ್ತು ಬಿಎಂಸಿಟಿ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಿದೆ. ಮೆಟ್ರೋ ರೈಲುಗಳು ಜನವರಿ 1ರ ನಡುಕಿನ ಜಾವ 2 ಗಂಟೆಗೆವರೆಗೆ ಸಂಚಾರ ನಡೆಸಲಿದೆ. ಇನ್ನು ಎಂಜಿ ರೋಡ್​ನಿಂದ ನಗರದ ಒಟ್ಟು 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್​ಗಳು ರಾತ್ರಿ 11 ಗಂಟೆಯಿಂದ ನಸುಕಿನ ಜಾವ 2 ಗಂಟೆಯವರೆಗೆ ಸಂಚರಿಸಲಿವೆ. ಜೊತೆಗೆ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್​ಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us