/newsfirstlive-kannada/media/post_attachments/wp-content/uploads/2025/07/bmtc.jpg)
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸಿಲಿಕಾನ್​ ಸಿಟಿಯಲ್ಲಿ BMTC ಬಸ್​ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಪೀಣ್ಯ 2ನೇ ಹಂತದಲ್ಲಿ ನಡೆದಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಇಬ್ಬಗೆ ನೀತಿ.. ಅಮೆರಿಕ, ನ್ಯಾಟೋ ಬೆದರಿಕೆಗೆ ಭಾರತ ಕೌಂಟರ್..!​
ಘಟಕ 22ಕ್ಕೆ ಸೇರಿದ KA.51,4170 ನಂಬರ್ ಬಸ್​​ನಿಂದ ಈ ಘಟನೆ ನಡೆದಿದೆ. ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯೆಯಲ್ಲಿ ಚಾಲಕನ ಬೇಜಬ್ದಾರಿಯಿಂದ ಅಪಘಾತ ಸಂಭವಿಸಿದೆ.
ಚಾಲಕ ಬಸ್ ಚಾಲನೆ ಮಾಡಲು ಹೋಗಿ ರಸ್ತೆ ಪಕ್ಕದಲ್ಲೇ ಇದ್ದ ಪೆಟ್ಟಿ ಅಂಗಡಿಗೆ ಗುದ್ದಿದ್ದಾನೆ. ಬಸ್ ಗುದ್ದಿದ ರಭಸಕ್ಕೆ ರಸ್ತೆ ಪಕ್ಕದಲ್ಲಿ ಬಳಿ ನಿಂತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಸುಂಕದಕಟ್ಟೆಯ ಶ್ರೀಲಕ್ಷ್ಮಿ ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ