/newsfirstlive-kannada/media/post_attachments/wp-content/uploads/2025/07/bmtc-killer.jpg)
ತನ್ನಪ್ಪ ಅಮ್ಮನ ಸಾಕುತ್ತಿದ್ದ ಮನೆಯ ಆಧಾರ ಸ್ತಂಭ ತನ್ನದಲ್ಲದ ತಪ್ಪಿಂದ ತನ್ನವರ ತೊರೆದು ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಅಮಾಯಕ ಜೀವದ ಪಾಲಿಗೆ ಜವರಾಯಾನಂತೆ ಬಿಎಂಟಿಸಿ ಎರಗಿ ಬಂದಿದೆ. ನಿರ್ವಾಹಕನ ನಿರ್ಲಕ್ಷ್ಯಕ್ಕೆ ಚಾಲಕನ ಬದಲು ಕಂಡಕ್ಟರ್ ಬಸ್ ಓಡಿಸಲು ಹೋಗಿ ಅಪಘಾತ ಮಾಡಿ ಯಡವಟ್ಟು ಮಾಡಿ ಅಮಾಯಕ ಜೀವ ಬಲಿ ಪಡೆದು ಕೊಂಡಿದ್ದಾನೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಇಬ್ಬಗೆ ನೀತಿ.. ಅಮೆರಿಕ, ನ್ಯಾಟೋ ಬೆದರಿಕೆಗೆ ಭಾರತ ಕೌಂಟರ್..!​
/newsfirstlive-kannada/media/post_attachments/wp-content/uploads/2025/07/bmtc.jpg)
ಆ ಯುವತಿ ಬೆಳಗ್ಗೆ ಕೆಲಸಕ್ಕೆ ಹೋಗೋಕೆ ಅಂತ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ನಿಲ್ದಾಣದ ಪಕ್ಕದಲ್ಲೇ ಇದ್ದ ರಸ್ತೆ ಬದಿಯ ಹೊಟೇಲ್ ಒಂದರಲ್ಲಿ ತಿಂಡಿ ಪಾರ್ಸೆಲ್ ತೆಗೆದುಕೊಳ್ಳಲು ಹೋದಾಗ ಯಮನ ರೂಪದಲ್ಲಿ ಬಂದ ಬಿಎಂಟಿಸಿ, ಬಾಳಿ ಬದುಕಬೇಕಿದ್ದ ಯುವತಿಯನ್ನ ಬಲಿ ಪಡೆದಿದೆ. ಮನೆಗೆ ಆಧಾರವಾಗಿದ್ದ ಸಾಸಿರ ಕನಸು ಹೊತ್ತ ಕುವರಿಯನ್ನು ಸಾವಿನ ಮನೆಗೆ ಕರೆದು ಕೊಂಡು ಹೋಗಿದೆ.
/newsfirstlive-kannada/media/post_attachments/wp-content/uploads/2025/07/bmtc1.jpg)
ಹೌದು, ಈ ಘಟನೆ ನಡೆದಿರೋದು ಪೀಣ್ಯ ಎರಡನೇ ಹಂತದಲ್ಲಿ. ಬೆಳಗ್ಗೆ 8.35 ರ ಸುಮಾರಿಗೆ 25 ವರ್ಷದ ಯುವತಿ ಸುಮಾ ಕೆಲಸಕ್ಕೆ ಹೋಗುವ ಸಂಬಂಧ ಬಸ್ ನಿಲ್ದಾಣಕ್ಕೆ ಬಂದು ತಿಂಡಿ ಪಾರ್ಸೆಲ್ ತೆಗೆದುಕೊಳ್ಳುವಾಗ ದುರಂತ ಸಂಭವಿಸಿದೆ. ಮೆಜೆಸ್ಟಿಕ್ ಟು ಪೀಣ್ಯ ಮಾರ್ಗದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪೀಣ್ಯ ಸೆಕೆಂಡ್ ಸ್ಟೇಜ್ ಬಳಿ ಬಂದು ನಿಂತಾಗ ಚಾಲಕ ದಿಲೀಪ್ ಬಸ್ ನಿಂದ ಕೆಳಗೆ ಇಳಿದು ಹೋಗಿದ್ದಾನೆ. ಈ ವೇಳೆ ಬಸ್ ನಲ್ಲಿದ್ದ ಕಂಡಕ್ಟರ್ ರಮೇಶ್, ಚಾಲಕ ಇಲ್ಲ ಅಂತ ತಾನೇ ಬಸ್ ನ್ನ ತೆಗೆಯಲು ಮುಂದಾಗಿದ್ದಾನೆ.
/newsfirstlive-kannada/media/post_attachments/wp-content/uploads/2025/07/bmtc-killer1.jpg)
ಈ ವೇಳೆ ಬಸ್ ನಿಯಂತ್ರಣ ತಪ್ಪಿದ್ದು, ಎದುರುಗಡೆ ಇದ್ದ ಫುಟ್ಪಾತ್ ಹತ್ತಿ ಹೊಟೇಲ್ ಒಂದಕ್ಕೆ ಗುದ್ದಿದೆ. ಇದೇ ವೇಳೆ ಯುವತಿ ಕೂಡ ತಿಂಡಿ ಪಾರ್ಸೆಲ್ ತೆಗೆದುಕೊಳ್ಳಲು ಬಂದಿದ್ದು, ಬಸ್ ಗುದ್ದಿದ ಪರಿಣಾಮ ತೀವ್ರಗಾಯಗೊಂಡಿದ್ದಾಳೆ. ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಇನ್ನೂ, ದುರಂತ ನಡೆದ ಸ್ಥಳದಲ್ಲಿದ ಹೊಟೇಲ್ ಬಸ್ ಗುದ್ದಿದ ರಭಸಕ್ಕೆ ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ. ಘಟನೆ ವೇಳೆ ಭಾರೀ ದುರಂತವು ಕೂಡ ತಪ್ಪಿದೆ. ಬಸ್ ಗುದ್ದಿದಾಗ ಹೊಟೇಲ್ ನಲ್ಲಿದ್ದ ಸಿಲಿಂಡರ್​ಗೂ ಬೆಂಕಿ ತಗುಲಿದೆ. ಸ್ಥಳದಲ್ಲಿದ್ದವರು ಸಮಯ ಪ್ರಜ್ಞೆಯಿಂದ ಶೀಘ್ರ ಬೆಂಕಿ ನಂದಿಸಿದ್ದು, ಭಾರಿ ದುರಂತ ತಪ್ಪಿದೆ.
/newsfirstlive-kannada/media/post_attachments/wp-content/uploads/2025/07/bmtc-killer2.jpg)
ಇನ್ನೂ ಮಂಡ್ಯದ ತರೀಕೇರೆ ಮೂಲದ ಸುಮಾ ಮೃತ ದುರ್ದೈವಿ. ಮೃತಳು ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಹೆಬ್ಬಾಳದ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಕೆ ಎಂದಿನಂತೆ ಕೆಲಸಕ್ಕೆ ಹೋಗಲು ಬಂದಾಗ ದುರಂತ ಸಂಭವಿಸಿದೆ. ಇನ್ನೂ ಘಟನೆ ಬಳಿಕ ಆಸ್ಪತ್ರೆ ಬಳಿ ಮೃತಳ ಕುಟುಂಬಸ್ಥರು, ಬಿಎಂಟಿಸಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಾವಿಗೆ ಹೊಣೆಯಾರು? ಇದು ಅಪಘಾತ ಅಲ್ಲ, ಪ್ರಾಯೋಜಿತ ಕೊಲೆ ಅಂತ ಕಿಡಿ ಕಾರಿದ್ರು. ಈ ಬಗ್ಗೆ ಮಾತಾಡಿದ ಮೃತ ಯುವತಿ ಅಕ್ಕ, ನಮಗೆ 8.30ಕ್ಕೆ ಫೋನ್​ ಬಂತು. ನನ್ನ ತಂಗಿ ತಿಂಡಿ ಪಾರ್ಸೆಲ್ ತೆಗೆದುಕೊಳ್ಳೋದಕ್ಕೆ ಹೋಗಿದ್ದಳು. ತಂಗಿ ತುಂಬಾ ಒಳ್ಳೆಯ ಹುಡುಗಿ, ಅಪ್ಪ, ಅಮ್ಮ, ತಮ್ಮ ಎಲ್ಲರನ್ನೂ ಇವಳೇ ನೋಡಿಕೊಳ್ಳುತ್ತಾ ಇದ್ದಳು. ಊರಲ್ಲಿ ಎಲ್ಲರೂ ಆಕೆಯನ್ನು ಇಷ್ಟ ಪಡ್ತಾ ಇದ್ದರು. ಈಗಂತೂ ಬಿಎಂಟಿಸಿಯಿಂದ ಸುಮಾರು ಅಪಘಾತಗಳು ಆಗ್ತಾನೆ ಇವೆ. ಸಿಟಿ ಒಳಗಡೆ ಯಾರೂ ಓಡಾಡೋಕೆ ಆಗ್ತಾ ಇಲ್ಲ. ತರಾತುರಿ ಅಂತ ಓಡಿಸುತ್ತಾ ಹೋಗುತ್ತಾರೆ ಅಂತ ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us