Advertisment

BMTC ಡ್ರೈವರ್‌ ಮೇಲೆ ಮಹಿಳೆಯ ರೌದ್ರಾವತಾರ.. ಗುದ್ದಿ, ಒದ್ದು ಹಲ್ಲೆ ಮಾಡಿದ ದೃಶ್ಯ ಸೆರೆ; ಕಾರಣವೇನು?

author-image
Gopal Kulkarni
Updated On
BMTC ಡ್ರೈವರ್‌ ಮೇಲೆ ಮಹಿಳೆಯ ರೌದ್ರಾವತಾರ.. ಗುದ್ದಿ, ಒದ್ದು ಹಲ್ಲೆ ಮಾಡಿದ ದೃಶ್ಯ ಸೆರೆ; ಕಾರಣವೇನು?
Advertisment
  • ಬೈಕ್​ಗೆ ಬಿಎಂಟಿಸಿ ಬಸ್ ಟಚ್​ ಮಾಡಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ
  • ಬಸ್​ ಒಳಗೆ ಹೋಗಿ ಚಾಲಕನನ್ನು ಎಳೆದ ಮನಬಂದಂತೆ ಹಲ್ಲೆ
  • ಮಹಿಳೆಯ ಮಾಡಿದ ಹಲ್ಲೆಯ ಹೊಡೆತಕ್ಕೆ ಕುಸಿದು ಬಿದ್ದ ಚಾಲಕ

ಜಾಲಹಳ್ಳಿ ಕ್ರಾಸ್​ನಿಂದ ಕೆಆರ್ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್​, ಸುಮ್ಮನಹಳ್ಳಿ ಬಿಡ್ಜ್ ಬಳಿ ಒಂದು ಬೈಕ್​​ಗೆ ಟಚ್​ ಆಗಿದೆ. ಬೈಕ್​ ಓಡಿಸುತ್ತಿದ್ದ ಮಹಿಳೆ ಇದರಿಂದ ಕೋಪಗೊಂಡು, ಬಸ್​ ನಿಲ್ಲಿಸಿ ಚಾಲಕನನ್ನು ಎಳೆದು ಮನಬಂದಂತೆ ಥಳಿಸಿದ್ದಾಳೆ.

Advertisment

publive-image

ಮಹಿಳೆ ನಡೆಸಿದ ಹಲ್ಲೆಯ ಹೊಡೆತಕ್ಕೆ ಡಿಪೋ 22ರ ಬಿಎಂಟಿಸಿ ಬಸ್ ಚಾಲಕ ಅಮರೇಶ್​ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಮಹಿಳೆಯ ಜೊತೆಗೆ ಮತ್ತೊಬ್ಬ ವ್ಯಕ್ತಿಯೂ ಕೂಡ ಹಲ್ಲೆ ಮಾಡಿದ್ದರಿಂದ ಬಸ್​ನಲ್ಲಿಯೇ ಚಾಲಕ ಕುಸಿದು ಬಿದ್ದಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹೃದಯಾಘಾತ.. ಮಂಡ್ಯ ಕಬಡ್ಡಿ ಪಂದ್ಯಾವಳಿ ಬಳಿಕ ರಾಜ್ಯಮಟ್ಟದ ಆಟಗಾರ ದುರಂತ ಅಂತ್ಯ

ಹಲ್ಲೆ ಮಾಡಿದ ಮಹಿಳೆಯನ್ನು ಸವಿತಾ ಎಂದು ಗುರುತಿಸಲಾಗಿದೆ. ಸದ್ಯ ಕಾಮಾಲಕ್ಷಿಪಾಳ್ಯ ಪೊಲೀಸ್​​ ಠಾಣೆಯಲ್ಲಿ ಮಹಿಳೆ ಇದ್ದಾಳೆ. ಈ ಅಪಘಾತದ ವಿಚಾರದಲ್ಲಿ ಇಬ್ಬರೂ ಕೂಡ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆ ಚಾಲಕನ ವಿರುದ್ಧ ದೂರ ಕೊಟ್ಟಿದ್ದಾರೆ. ಮಹಿಳೆ ವಿರುದ್ಧ ಚಾಲಕನೂ ಕೂಡ ದೂರು ನೀಡಿದ್ದಾನೆ. ಸದ್ಯ ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಇದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment