/newsfirstlive-kannada/media/post_attachments/wp-content/uploads/2024/11/BMTC_BUS.jpg)
ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇರುವಾಗ ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿರುವ ಘಟನೆ ಯಶವಂತಪುರ ಬಳಿ ನಡೆದಿದೆ.
ಇದನ್ನೂ ಓದಿ: ರುದ್ರಣ್ಣ ಯಡವಣ್ಣ ಕೇಸ್; ಸಚಿವೆ ಆಪ್ತ ಸೇರಿ ಮೂವರ ವಿರುದ್ಧ FIR.. ಆರೋಪಿಗಳು ಎಸ್ಕೇಪ್
ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ (39) ಮೃತಪಟ್ಟ ಡ್ರೈವರ್. ನೆಲಮಂಗಲ ಕಡೆಯಿಂದ ಯಶವಂತಪುರ ಕಡೆಗೆ ಬಿಎಂಟಿಸಿ ಬಸ್ ಅನ್ನು ಚಾಲನೆ ಮಾಡಿಕೊಂಡು ಬರುವಾಗ ಡ್ರೈವರ್ಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಬಸ್ ನಿಲ್ಲಿಸಿದ್ದನು. ಎದೆನೋವು ತೀವ್ರವಾಗಿ ಕಾಣಿಸಿಕೊಂಡು ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿದ್ದಾನೆ. ಈ ವೇಳೆ ಬಸ್ನಲ್ಲಿ 50ಕ್ಕೂ ಪ್ರಯಾಣಿಕರಿದ್ದು ಯಾವುದೇ ತೊಂದರೆಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ