/newsfirstlive-kannada/media/post_attachments/wp-content/uploads/2024/08/BMTC-1.jpg)
ಬೆಂಗಳೂರು ಬಿಎಂಟಿಸಿ ಬಸ್​ನಲ್ಲಿ ಓಡಾಡುವವರಿಗೆ ಡಿಜಿಟಲ್​​ ಮಾದರಿಯ ಬಸ್​ಪಾಸ್​ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಆ ಮೂಲಕ ಡಿಜಿಟಲ್​ ಸೇವೆಗೆ ಉತ್ತೇಜನ ನೀಡುವುದರ ಜೊತೆಗೆ ಪ್ರಯಾಣವನ್ನು ಸುಗಮವನ್ನಾಗಿಸಲು ಸಹಾಯ ಮಾಡುತ್ತಿದೆ. ಸೆ.15ರಂದು ಮೊಬೈಲ್​ ಆ್ಯಪ್​ ಮೂಲಕ ಈ ಸೇವೆಯನ್ನು ವಿತರಿಸಲು ಮುಂದಾಗಿದೆ.
ಬಿಎಂಟಿಸಿ ಬಸ್​ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್​ಪಾಸ್​ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್​ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್​ ಮಾದರಿಯ ಟುಮೋಕ್ (Tummoc)​ ಹೆಸರಿನ ಆ್ಯಪ್​ನಲ್ಲಿ ಬಸ್​ ಪಾಸ್​ ಸಿಗಲಿದೆ. ಅದರ ಮೂಲಕ ಬಸ್​ ಪ್ರಯಾಣ ಮಾಡಬಹುದಾಗಿದೆ.
ಬಿಎಂಟಿಸಿಯಲ್ಲಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅವರೆಲ್ಲರ ಪ್ರಯಾಣವನ್ನು ಸುಗಮಗೊಳಿಸಲು. ಸುಲಭವಾಗಿ ಬಸ್​​ ಪಾಸ್​ ಸಿಗುವಂತೆ ಮಾಡಲು, ನಗದು ಮತ್ತು ಕಾಗದ ರಹಿತವಹಿವಾಟಿಗಾಗಿ ಡಿಜಿಟಲ್​ ಪಾಸ್​ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ.
/newsfirstlive-kannada/media/post_attachments/wp-content/uploads/2024/08/BMTC.jpg)
ಡಿಜಿಟಲ್​ ಪಾಸ್​​ ಪಡೆಯೋದು ಹೇಗೆ?
ಬಿಎಂಟಿಸಿಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಟುಮೋಕ್​ ಆ್ಯಪ್​​ ಡೌನ್​ಲೋಡ್​​ ಮಾಡಬೇಕಿದೆ. ಬಳಿಕ ನೋಂದಣಿ ಮಾಡಬೇಕಿದೆ. ಬಸ್​ ಪಾಸ್​ ಮಾದರಿಯನ್ನು ಆಯ್ಕೆ ಮಾಡಿ ವಿವರವನ್ನು ಭರ್ತಿ ಮಾಡಬೇಕು. ನಂತಗರ ಭಾವಚಿತ್ರವನ್ನು ಕ್ಲಿಕ್ಕಿಸಬೇಕು. ಇದಾದ ಬಳಿಕ ಪಾಸ್​​ ಮೊತ್ತವನ್ನು ಪಾವತಿಸಿದರೆ ​ಡಿಜಿಟಲ್​​ ಪಾಸ್​ ಬಳಕೆಗೆ ಸಿಗಲಿದೆ.
ಇನ್ನು ಬಿಎಂಟಿಸಿಯಲ್ಲಿ ಪ್ರಯಾಣಿಸುವವರು ಡಿಜಿಟಲ್​​ ಪಾಸ್​ ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದಾಗಿದೆ. ಒಟ್ಟಿನಲ್ಲಿ ಪ್ರಸ್ತುತತೆಗೆ ಡಿಜಿಟಲ್​ ಪಾಸ್​ ಹೇಳಿ ಮಾಡಿಸಿದಂತಿದೆ. ಇದರಿಂದ ಪಾಸ್​ಗಾಗಿ ಕಾಯುವ ಸಮಯ ಉಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us