/newsfirstlive-kannada/media/post_attachments/wp-content/uploads/2024/10/JOB_KPSC.jpg)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಉಚಿತ ಚಾಲನಾ ತರಬೇತಿ ನೀಡುವುದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಎಸ್ಸಿಎಸ್ಪಿ (ಪರಿಶಿಷ್ಟ ಜಾತಿ ಉಪ ಯೋಜನೆ) ಹಾಗೂ ಟಿಎಸ್ಪಿ (ಗಿರಿಜನ ಉಪ ಯೋಜನೆ) ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನಗಳ ಉಚಿತ ಚಾಲನಾ ತರಬೇತಿಯನ್ನು ಹಮ್ಮಿಕೊಂಡಿದೆ.
ಈ ಲಘು ಮತ್ತು ಭಾರೀ ವಾಹನಗಳ ಉಚಿತ ಚಾಲನಾ ತರಬೇತಿಯ ವೇಳೆ ವಸತಿ ಸಹಿತ ಹಾಗೂ ವಸತಿ ರಹಿತ ಇರುತ್ತದೆ. ತರಬೇತಿ ಅವಶ್ಯಕತೆ ಇರುವವರು ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಬಿಎಂಟಿಸಿ ಸಂಸ್ಥೆಯು ಕೆಲ ಅರ್ಹತೆ ಸೂಚಿಸಿದೆ. ಈ ಅರ್ಹತೆ ಹೊಂದಿರುವವರಿಗೆ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ರಜತ್ ಪಾಟೀದಾರ್ ಯಾರು.. ಅಂದು RCB ಸೇರಲು ಅದೃಷ್ಟ ಹೇಗೆ ಒಲಿದಿತ್ತು ಗೊತ್ತಾ..?
ಅರ್ಹತೆಗಳು
- ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿ ಮೊದಲ ಅವಕಾಶ ನೀಡಲಾಗುತ್ತದೆ.
- ವಸತಿ ಸಹಿತ ತರಬೇತಿ ವಸತಿ ಸೌಕರ್ಯ, ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ.
- ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವರು 18 ವರ್ಷದಿಂದ 45 ವಯಸ್ಸಿನ ಒಳಗೆ ಇರಬೇಕು.
- ಭಾರೀ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವರು 20 ರಿಂದ 45 ವರ್ಷದ ಒಳಗಿರಬೇಕು. ಇದರ ಜೊತೆಗೆ ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಆಗಿರಬೇಕು.
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- 5 ಪಾಸ್‌ಪೋಟೋಗಳು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಉಚಿತ ಚಾಲನಾ ತರಬೇತಿಗೆ ಅಭ್ಯರ್ಥಿಗಳು ಹಾಜರಾಗುವಾಗ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಹಾಜರು ಪಡಿಸಬೇಕು. ಬೆಂಗಳೂರಿನ ವಡ್ಡರಹಳ್ಳಿ ತರಬೇತಿ ಕೇಂದ್ರಕ್ಕೆ ಹಾಜರಾಗುವ ವೇಳೆ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಹಾಕುವಾಗ ನೀಡಿದಂತೆ ದಾಖಲೆಗಳ ಮೂಲ ಪ್ರತಿಗಳು ಅರ್ಜಿಯ ಪ್ರತಿ ಜೊತೆಗೆ ಇರಬೇಕು. ನೀವು ನೀಡಿರುವ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ತೆಗೆದುಕೊಂಡು ಹೋಗಿರಬೇಕು.
ಅರ್ಜಿ ಸಲ್ಲಿಕೆ ಮಾಡಲು- https://sevasindhuservices.karnataka.gov.in
ಸಂಪರ್ಕಕ್ಕಾಗಿ: 08022279954, 8792662816/8792662814
ಹೆಚ್ಚಿನ ಮಾಹಿತಿಗಾಗಿ- http://www.mybmtc.gov.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ