newsfirstkannada.com

ಬಸ್​​ನಲ್ಲಿ ಓಡಾಡೋ ಮಕ್ಕಳ ಬಗ್ಗೆ ಬಿಎಂಟಿಸಿ ಮಹತ್ವದ ಆದೇಶ: ಪೋಷಕರು ಓದಲೇಬೇಕಾದ ಸ್ಟೋರಿ..!

Share :

Published January 26, 2024 at 6:04am

    ಬಸ್​ನಲ್ಲಿ ಅಪ್ರಾಪ್ತರ ಮೇಲೆ ನಿಗಾ ಇಡುವಂತೆ ಬಿಎಂಟಿಸಿ ಸೂಚನೆ

    ಮಕ್ಕಳ ಹಾವ ಭಾವದಲ್ಲಿ ಗೊಂದಲ ಕಂಡರೆ ಕೂಡಲೇ 1098ಗೆ ಕರೆ

    ಬಿಎಂಟಿಸಿ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ

ಬೆಂಗಳೂರು: 12 ವರ್ಷದ ಪರಿಣವ್ ಮಿಸ್ಸಿಂಗ್ ಸುದ್ದಿ ಸದ್ದು ಮಾಡುತ್ತಿದ್ದಂಗೆ, ಅತ್ತ ಬಿಎಂಟಿಸಿ ಫುಲ್​ ಅಲರ್ಟ್​ ಆಗಿದೆ. ಕ್ಷುಲಕ ಕಾರಣಕ್ಕೆ ಮನೆ ತೊರೆದು ಬಸ್​ನಲ್ಲಿ ಓಡಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ. ಅಷ್ಟಕ್ಕೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತಮ್ಮ ಡ್ರೈವರ್ ಹಾಗೂ ಕಂಡಕ್ಟರ್​ಗಳಿಗೆ ಕೊಟ್ಟ ಸೂಚನೆಯಲ್ಲಿ ಏನಿದೆ ಗೊತ್ತಾ?

ವಿಜಯನಗರದ ಸುಖೇಶ್ ಮತ್ತು ನಿವೇದಿತಾ ದಂಪತಿಯ 12 ವರ್ಷದ ಮಗ ಪರಿಣವ್, ಸಣ್ಣ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ. ಪರಿಣವ್ ಟ್ಯೂಷನ್ ಕ್ಲಾಸ್​ನಿಂದ ಬಸ್ ಮೂಲಕ ಮೆಜೆಸ್ಟಿಕ್​ಗೆ ತೆರಳಿದ್ದ. ಬಳಿಕ ನಿನ್ನೆ ಹೈದ್ರಾಬಾದ್​​ನಲ್ಲಿ ಪತ್ತೆಯಾಗಿದ್ದ. ಹೀಗೆ, ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋಗೋರ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಿದೆ. ಒಂಟಿಯಾಗಿ ಬಸ್​​ನಲ್ಲಿ ಸಂಚರಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಡ್ರೈವರ್​ & ಕಂಡಕ್ಟರ್​ಗಳಿಗೆ ಸೂಚನೆ ಕೊಟ್ಟಿದೆ.

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಸುವ ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ, ಬಸ್​​ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಟ್ಟಿದೆ. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವಂತೆ ತಿಳಿಸಿದೆ. ಅಲ್ಲದೇ, ಅಂತಹ ಮಕ್ಕಳನ್ನ ಹತ್ತಿರದ ಠಾಣೆಗೆ ಕರೆದೊಯ್ಯುವಂತೆ ಕೂಡ ಸೂಚನೆ ಕೊಡಲಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಮಕ್ಕಳು ಮನೆ ಬಿಟ್ಟು ಹೋಗ್ತಿರೋದು ನಿಜಕ್ಕೂ ಆಘಾತಕಾರಿ ವಿಚಾರ. ಆದರೆ ಈ ವಿಚಾರದಲ್ಲಿ ಬಿಎಂಟಿಸಿ ಸಂಸ್ಥೆ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​​ನಲ್ಲಿ ಓಡಾಡೋ ಮಕ್ಕಳ ಬಗ್ಗೆ ಬಿಎಂಟಿಸಿ ಮಹತ್ವದ ಆದೇಶ: ಪೋಷಕರು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2023/07/bmtc-bus-1.jpg

Load More