/newsfirstlive-kannada/media/post_attachments/wp-content/uploads/2025/02/aero-india-show-8.jpg)
ಏರ್ ಶೋಗಾಗಿ ಬಿಎಂಟಿಸಿ ಸ್ಪೇಷಲ್ ಸರ್ವಿಸ್ ನೀಡುತ್ತಿದೆ. ನಗರದ ಪ್ರಮುಖ ಬಸ್ಸ್ಟ್ಯಾಂಡ್ಗಳಿಂದ ಏರ್ಶೋಗೆ ಡೈರೆಕ್ಟ್ ಬಸ್ ಸೇವೆ ನೀಡಲಾಗುತ್ತಿದೆ. ಏರ್ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಐದು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್ಶೋ ಟಿಕೆಟ್ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು.
ಉದ್ಘಾಟನೆಯ ದಿನ ಅಂದ್ರೆ ಫೆಬ್ರವರಿ 10 ರಂದು ಬಸ್ ಸೌಲಭ್ಯ ಇರುವುದಿಲ್ಲ. ಫೆಬ್ರವರಿ 11ರಿಂದ 14ರವರೆಗೂ ಫ್ರೀ ಬಸ್ ಸೇವೆ ಇದೆ. ಹೆಬ್ಬಾಳ ಕೋರಮಂಗಲ, ಮೆಜೆಸ್ಟಿಕ್, ಶಿವಾಜಿನಗರ, ಬನಶಂಖರಿ, ವಿಜಯನಗರ, ಕೆಂಗೇರಿ, ಒರಿಯಾನ್ ಮಾಲ್, ಎಲೆಕ್ಟ್ರಾನಿಕ್ ಸಿಟಿ, ಐಟಪಿಎಲ್ನಿಂದ ಏರ್ಶೋಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Aero India! ಭದ್ರತೆಗೆ AI ಆಧಾರಿತ ಕ್ರಮ, ಬೆಂಗಳೂರಲ್ಲಿ ಯಾವುದೆಲ್ಲ ನಿಷೇಧ..?
ಜಿಕೆವಿಕೆಯಿಂದಲೂ ವಿಶೇಷ ಬಸ್ ಸೌಲಭ್ಯವಿದೆ. ಬಿಎಂಟಿಸಿಯಿಂದಲೇ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು. ಇದನ್ನು ಸದುಪಯೋಗಪಡಿಸಿಕೊಳ್ಳಲು ಬಿಎಂಟಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಭಾರತೀಯ ರಕ್ಷಣಾ ವಲಯದ ಅಭಿವೃದ್ಧಿ ಆತ್ಮ ನಿರ್ಭರ್ ಭಾರತದ ಮಾದರಿಗಳು ಏರ್ಶೋನಲ್ಲಿ ಗಮನ ಸೆಳೆಯಲಿವೆ. ತಂತ್ರಜ್ಞಾನದ ಪ್ರದರ್ಶನಕ್ಕೆ ಅತಿದೊಡ್ಡ ವೇದಿಕೆ ಬೆಂಗಳೂರು ಸಜ್ಜಾಗಿದ್ದು, ವಿವಿಧ ಯುದ್ಧ ವಿಮಾನಗಳು, ರಫೆಲ್, ಚಾಪರ್ಗಳು ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಲಿವೆ. ಒಟ್ಟು 5 ದಿನಗಳ ಕಾಲ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಅಬ್ಬರವೇ ಕೇಳಿಸಲಿದೆ.
ಇದನ್ನೂ ಓದಿ: ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆ ನಿಷೇಧ.. ಇದಕ್ಕೂ ಏರ್ ಶೋಗೂ ಏನು ಸಂಬಂಧ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ