ಏರ್​ ಶೋಗಾಗಿ ಬಿಎಂಟಿಸಿಯಿಂದ ವಿಶೇಷ ಸೌಲಭ್ಯ; ಪಾಸ್​ ಇದ್ದವರಿಗೆ ಉಚಿತ ಪ್ರಯಾಣ

author-image
Gopal Kulkarni
Updated On
ಇನ್ಮುಂದೆ BMTC ಬಸ್ಸಲ್ಲಿ ಡಿಜಿಟಲ್​​ ಪಾಸಲ್ಲಿ ಓಡಾಡಿ! ಅದಕ್ಕಾಗಿ ಈ ಆ್ಯಪ್​ ಡೌನ್​​ಲೋಡ್ ಮಾಡಿ 
Advertisment
  • ಏರ್​ಶೋಗಾಗಿ ವಿಶೇಷ ಸೌಲಭ್ಯ ಕಲ್ಪಿಸಿದ ನಗರದ ಬಿಎಂಟಿಸಿ
  • ಏರ್​ಶೋ ಪಾಸ್​ ಇದ್ದವರು ಉಚಿತವಾಗಿ ಪ್ರಯಾಣಿಸಬಹುದು
  • ನಗರದ ಹಲವು ಭಾಗಗಳಿಂದ ಉಚಿತ ಬಸ್​ ಪ್ರಯಾನ ವ್ಯವಸ್ಥೆ

ಏರ್​ಶೋಗಾಗಿ ಬಿಎಂಟಿಸಿ ಸ್ಪೇಷಲ್ ಸರ್ವಿಸ್​ ನೀಡುತ್ತಿದೆ. ನಗರದ ಪ್ರಮುಖ ಬಸ್​ಸ್ಟ್ಯಾಂಡ್​ಗಳಿಂದ ಏರ್​ಶೋಗೆ ಡೈರೆಕ್ಟ್ ಬಸ್​ ಸೇವೆ ನೀಡಲಾಗುತ್ತಿದೆ. ಏರ್​ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ನಾಲ್ಕು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್​ಶೋ ಟಿಕೆಟ್​ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು.

ಉದ್ಘಾಟನೆಯ ದಿನ ಅಂದ್ರೆ ಫೆಬ್ರವರಿ 10 ರಂದು ಬಸ್ ಸೌಲಭ್ಯ ಇರುವುದಿಲ್ಲ. ಫೆಬ್ರವರಿ 11ರಿಂದ 14ರವರೆಗೂ ಫ್ರೀ ಬಸ್ ಸೇವೆ ಇದೆ. ಹೆಬ್ಬಾಳ ಕೋರಮಂಗಲ, ಮೆಜೆಸ್ಟಿಕ್, ಶಿವಾಜಿನಗರ, ಬನಶಂಖರಿ, ವಿಜಯನಗರ, ಕೆಂಗೇರಿ, ಒರಿಯಾನ್ ಮಾಲ್​, ಎಲೆಕ್ಟ್ರಾನಿಕ್ ಸಿಟಿ, ಐಟಪಿಎಲ್​ನಿಂದ ಏರ್​ಶೋಗೆ ಬಸ್​ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಸವತಿಯ ಕಾಟ ತಪ್ಪಿಸಲು ಕಿಲಾಡಿ ಹೆಂಡತಿ ಮಾಡಿದ್ದೇನು ? ಪತಿಯ ಸ್ಥಿತಿ ನೋಡಿದ್ರೇ ಅಯ್ಯೋ ಅಂತೀರಾ!

ಜಿಕೆವಿಕೆಯಿಂದಲೂ ವಿಶೇಷ ಬಸ್ ಸೌಲಭ್ಯವಿದೆ. ಬಿಎಂಟಿಸಿಯಿಂದಲೇ ಉಚಿತ ಬಸ್​ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು. ಇದನ್ನು ಸದುಪಯೋಗಪಡಿಸಿಕೊಳ್ಳಲು ಬಿಎಂಟಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment