ಬೆಂಗಳೂರಿಗರಿಗೆ ಬಿಗ್​ ಶಾಕ್​ ಕೊಟ್ಟ ಸರ್ಕಾರ; ಬಿಎಂಟಿಸಿ ಟಿಕೆಟ್​ ರೇಟ್​ನಲ್ಲಿ ದಿಢೀರ್​​ ಏರಿಕೆ

author-image
Ganesh Nachikethu
Updated On
ಬೆಂಗಳೂರಿಗರಿಗೆ ಬಿಗ್​ ಶಾಕ್​ ಕೊಟ್ಟ ಸರ್ಕಾರ; ಬಿಎಂಟಿಸಿ ಟಿಕೆಟ್​ ರೇಟ್​ನಲ್ಲಿ ದಿಢೀರ್​​ ಏರಿಕೆ
Advertisment
  • ಕೆಎಸ್​ಆರ್​ಟಿಸಿ ಬಸ್​​ ದರ ಶೇ.15ರಷ್ಟು ಏರಿಕೆಗೆ ಭಾರೀ ಆಕ್ರೋಶ
  • ಈ ಬೆನ್ನಲ್ಲೇ ಬಿಎಂಟಿಸಿ ಬಸ್​ ರೇಟ್​ ಏರಿಕೆ ಮಾಡಿದ ರಾಜ್ಯ ಸರ್ಕಾರ
  • ರಾಜ್ಯ ಸರ್ಕಾರದ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ

ಬೆಂಗಳೂರು: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಬಸ್​​ ದರ ಶೇ.15ರಷ್ಟು ಏರಿಕೆ ಮಾಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಗಾಯದ ಮೇಲೆ ಬರೆ ಎಳೆಯುವ ನಿರ್ಧಾರ ಕೈಗೊಂಡಿತ್ತು. ಇನ್ನು ಈ ಬಗ್ಗೆ ಖುದ್ದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಮಜಾಯಿಷಿ ನೀಡಿದರು.

ಈಗ ಕೆಎಸ್​ಆರ್​ಟಿಸಿ ಮಾತ್ರವಲ್ಲ ಬಿಎಂಟಿಸಿ ಪ್ರಯಾಣಿಕರಿಗೂ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಬಿಎಂಟಿಸಿ ಟಿಕೆಟ್​ ದರದಲ್ಲೂ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಈ ಆದೇಶ ಅನ್ವಯ ಆಗಲಿದೆ ಎಂದು ತಿಳಿದು ಬಂದಿದೆ.

publive-image

ನಾಳೆಯಿಂದ ಎಲ್ಲಿಗೆ ಎಷ್ಟೆಷ್ಟು ಬಸ್​​​ ಚಾರ್ಜ್?

ಇನ್ನು, ನಾಳೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ. ಸದ್ಯ ಮೆಜೆಸ್ಟಿಕ್​ನಿಂದ ಜಯನಗರಕ್ಕೆ 20 ರೂಪಾಯಿ ಇದೆ. ದರ ಏರಿಕೆ ಬಳಿಕ 23 ರೂಪಾಯಿ ಆಗಿದೆ. ಮೆಜೆಸ್ಟಿಕ್​ನಿಂದ ಸರ್ಜಾಪುರಕ್ಕೂ 25 ರೂಪಾಯಿ ಇದ್ದು, ದರ ಏರಿಕೆ ಬಳಿಕ 28 ರೂ. ಆಗಿದೆ. ಮೆಜೆಸ್ಟಿಕ್​ ಟು ಅತ್ತಿಬೆಲೆಗೆ ಸದ್ಯದ ಪ್ರಯಾಣ ದರ 25 ರೂಪಾಯಿ ಇದ್ದು, ಈಗ 28 ರೂಪಾಯಿ ಆಗಿದೆ.

publive-image

ಇನ್ನು, ಮೆಜೆಸ್ಟಿಕ್​ನಿಂದ ಹಾರೋಹಳ್ಳಿಗೆ 28.75 ರೂ., ಮೆಜೆಸ್ಟಿಕ್​ನಿಂದ ಬನಶಂಕರಿಗೆ 23 ರೂ., ಮೆಜೆಸ್ಟಿಕ್​ನಿಂದ ಏರ್​​ಪೋರ್ಟ್​ಗೆ 270 ರೂಪಾಯಿ ಆಗಿದೆ. ಎಲ್ಲಾ ಏರಿಯಾಗಳಿಗೆ ಹೋಗುವ ಬಸ್​ ದರ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment