ನಡುರಸ್ತೆಯಲ್ಲಿ BMW ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ ಯುವಕ.. A Few minutes later ಏನಾಯ್ತು?

author-image
Gopal Kulkarni
Updated On
ನಡುರಸ್ತೆಯಲ್ಲಿ BMW ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ ಯುವಕ.. A Few minutes later ಏನಾಯ್ತು?
Advertisment
  • BMW ಕಾರ್​ನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಯುವಕ
  • ಸ್ಥಳೀಯರಿಂದ ಈ ಕೃತ್ಯದ ವಿಡಿಯೋ ಸೆರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಕಾರ್ ಚಾಲಕ, ಮೂತ್ರ ವಿಸರ್ಜನೆ ಮಾಡಿದ ಯುವಕನನ್ನು ಬಂಧಿಸಿದ ಪೊಲಿಸರು

ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಘೋಷಣೆಗಳು ಕೇವಲ ನಾಯಕರ ಮಾತಿಗೆ ಸೀಮಿತವಾಗುತ್ತಿವೆ. ಸಾರ್ವಜನಿಕರು ಇಂದಿಗೂ ಕೂಡ ಅದನ್ನು ಅಳವಡಿಸಿಕೊಳ್ಳಲು ಸಿದ್ಧರಿಲ್ಲ. ವಿದ್ಯಾವಂತರಿಂದಲೇ ಅಸಹ್ಯದ ಪರಮಾವಧಿಗಳು ಮೀರುತ್ತಿವೆ. ಅದಕ್ಕೆ ದೊಡ್ಡ ಸಾಕ್ಷಿ ಪುಣೆಯಲ್ಲಿ ಬಿಎಂಡಬ್ಲ್ಯೂ ಕಾರ್​ನ್ನು ಪುಣೆಯ ರಸ್ತೆ ಮಧ್ಯ ನಿಲ್ಲಿಸಿ ಸಾರ್ವಜನನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಈ ವ್ಯಕ್ತಿ.

ಐಷಾರಾಮಿ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್​ ಆಗಿದ್ದನ್ನು ಗಮನಿಸಿದ ಪೊಲೀಸರು ಈಗ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಒಂದು ಘಟನೆ ನಡೆದಿದ್ದು ಪುಣೆಯ ಪಕ್ಕದ ಜಿಲ್ಲೆ ಸತಾರಾದಲ್ಲಿ.
ಯಾದವಾಡದ ಸಾಕ್ಷಿನಗರದಲ್ಲಿ ಈ ಘಟನೆ ನಡೆದಿದ್ದು. ಈ ವ್ಯಕ್ತಿ ಮಾಡಿದ ಹೇಸಿಗೆ ಕೆಲಸವನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಂತರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನನ್ನು ಪತ್ತೆ ಮಾಡಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಹಾಗೂ ಮೋಟಾರ್ ಸೈಕಲ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


">March 8, 2025

ಕಾರ್​ನ್ನು ಡ್ರೈವ್ ಮಾಡುತ್ತಿದ್ದ ವ್ಯಕ್ತಿಯನ್ನು ಗೌರವ್ ಅಹುಜಾ ಎಂದು ಗುರುತಿಸಲಾಗಿದೆ. ಅವನೊಂದಿಗೆ ಪ್ರಯಾಣ ಮಾಡುತ್ತಿದ್ದ ಭಾಗ್ಯೇಶ್ ಓಸ್ವಾಲ್​ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಹೇಸಿಗೆ ಕಾರ್ಯ ಮಾಡಿದವನು ಎಂದು ಗುರುತಿಸಲಾಗಿದೆ. ಅತಿವೇಗದ ಚಾಲನೆ, ರಸ್ತೆಯಲ್ಲಿ ಸಾರ್ವಜನಿಕರಿಗೆ ಅಪಾಯವಾಗುವಂತ ಕೃತ್ಯ ಸೇರಿ ಹಲವು ಕೇಸ್​​ಗಳನ್ನು ಪೊಲೀಸರು ದಾಖಲಿಸಿದ್ದಾರೆ.

publive-image

ಇದನ್ನೂ ಓದಿ:ತಡರಾತ್ರಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ಗೆ ಎದೆ ನೋವು.. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಭಾಗ್ಯೇಶ್ ಓಸ್ವಾಲ್​ನನ್ನು ನಿನ್ನೆ ಸಾಯಂಕಾಲ ಪೊಲೀಸರು ಅವನ ಮನೆಗೆ ನುಗ್ಗಿ ಬಂಧಿಸಿ ಠಾಣೆಗೆ ಎಳೆದು ತಂದಿದ್ದಾರೆ. ಕಾರ್ ಓಡಿಸುತ್ತಿದದ ಗೌರವ್ ಅಹುಜಾ ಸದ್ಯ ವಿಡಿಯೋ ವೈರಲ್ ಆಗಿದ್ದನ್ನು ಗಮನಿಸಿ ನನಗೆ ಮುಂದೆ ಏನೋ ಕಾದಿದೆ ಎಂದು ಅರಿವಿಗೆ ಬಂದು ತಲೆತಪ್ಪಿಸಿಕೊಂಡಿದ್ದ. ಕೊನೆಗೆ ಅವನನ್ನು ಕೂಡ ಸತಾರಾದ ಕರಾಡ್ ತಹ್ಸಿಲ್​ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ. ಅದು ಮಾತ್ರವಲ್ಲ ಓಸ್ವಾಲ್​ನನ್ನು ಮದ್ಯಪಾನ ಮಾಡಿ ವಾಹನ ಓಡಿಸುತ್ತಿದ್ದನಾ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ.


">March 8, 2025

ಇದನ್ನೂ ಓದಿ:ದೇಶದಲ್ಲಿ ಅತಿ ಹೆಚ್ಚು ದಾಳಿಂಬೆ ಬೆಳೆಯುವ ನಂ.1 ರಾಜ್ಯ ಯಾವುದು? ಕರ್ನಾಟಕ ಯಾವ ಸ್ಥಾನದಲ್ಲಿದೆ?

ಸದ್ಯ ವೈರಲ್ ಆದ ವಿಡಿಯೋದಲ್ಲಿ ಗೌರವ್ ಓಸ್ವಾಲ್ ಫ್ರಂಟ್​ ಸೀಟ್​ನಲ್ಲಿ ಕುಳಿತುಕೊಂಡಿದ್ದು ಕಂಡು ಬಂದಿದೆ. ಮತ್ತೊಮದು ಕಡೆ ಅಹುಜಾ ಟ್ರಾಫಿಕ್ ಜಂಕ್ಷನ್​ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವೂ ಕಂಡು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ತನ್ನ ಕೃತ್ಯಕ್ಕೆ ಕ್ಷಮೆಯನ್ನು ಕೂಡ ಕೇಳಿದ್ದಾನೆ. ದಯವಿಟ್ಟು ನನಗೆ ಒಂದು ಅವಕಾಶ ಮಾಡಿ ಕೊಡಿ. ನಾನು ಇನ್ನು ಎಂಟು ಗಂಟೆಯೊಳಗೆ ಬಂದು ಶರಣಾಗುತ್ತೀನಿ ಎಂದು ವಿಡಿಯೋ ಕೂಡ ಮಾಡಿದ್ದಾನೆ. ಇನ್ನು ವೈರಲ್ ಆದ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಅತಿಹಚ್ಚು ಡೌನ್​​ಲೋಡ್ ಆಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment