newsfirstkannada.com

ಕೋರ್ಟ್​ನಲ್ಲಿ ವಿದ್ಯಾರ್ಥಿಗಳ ಭವಿಷ್ಯ; ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡ್ತಿದ್ಯಾ ಸರ್ಕಾರ..?

Share :

Published March 22, 2024 at 6:17am

  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಏನು ನಿರ್ಧರಿಸ್ತಿಲ್ಲ ಏಕೆ?

  ಸರ್ಕಾರ- ಖಾಸಗಿ ಶಾಲೆಗಳ ಜಟಾಪಟಿಯಲ್ಲಿ ಬಡವಾದ ವಿದ್ಯಾರ್ಥಿಗಳು

  ಅನಧಿಕೃತ ಬೋಧನೆ ನಿಯಂತ್ರಿಸಲು ಬೋರ್ಡ್‌ ಪರೀಕ್ಷೆ ನಿರ್ಧಾರ

ಇದು ಎಕ್ಸಾಂ ಸೀಸನ್‌. ಆದ್ರೆ 5, 8, 9 ಮತ್ತು 11ನೇ ತರಗತಿ ಮಕ್ಕಳು ಬೋರ್ಡ್‌ ಎಕ್ಸಾಮ್‌ ಗೊಂದಲದ ಕಾರಣಕ್ಕೆ ಅತಂತ್ರ ಸ್ಥಿತಿಗೆ ಬಿದ್ದಿದ್ದಾರೆ. ಮಕ್ಕಳಿಗೆ ಪರೀಕ್ಷೆಯೇ ನಡೆಯದೇ ಭವಿಷ್ಯದ ಬಗ್ಗೆ ಪೋಷಕರಿಗೂ ಚಿಂತೆ ಕಾಡ್ತಿದೆ. ಸರ್ಕಾರ ಮತ್ತು ಕಾನೂನು ಜಟಾಪಟಿಯಿಂದ ಮಕ್ಕಳು ಭವಿಷ್ಯವೇ ಮಂಕಾಗಿದೆ. ರಜೆಯಿದ್ದರೂ ಆಟ ಆಡಲು ಮನಸ್ಸಾಗ್ತಿಲ್ಲ.

ಅಜ್ಜ-ಅಜ್ಜಿ ಮನೆಗೆ ಹೋಗಲು ಸಾಧ್ಯವಾಗ್ತಿಲ್ಲ. ಅಪ್ಪ ಅಮ್ಮನ ಜತೆ ಕಾಲ ಕಳೆಯಲು ಪರೀಕ್ಷೆಯ ಭಯ ಎಂಬ ಬೇತಾಳನಂತೆ ಬೆನ್ನೇರಿ ಕುಳಿತಿದೆ. ಹೀಗೆ ಭವಿಷ್ಯ ಅರಸಿ ಹೋಗುವ ಕಾಲಘಟ್ಟದಲ್ಲಿ ಭಯ ಹೊಕ್ಕಿಸಿದ್ದು ಎಡಬಿಂಡಂಗಿ ಸರ್ಕಾರ. ಪರೀಕ್ಷೆಯ ಅನಿಶ್ಚಿತತೆ ಹೇರಿ ಮಕ್ಕಳಿಗೇಕೆ ಶಿಕ್ಷೆ ನೀಡಲಾಗ್ತಿದೆ. ಮಕ್ಕಳು-ಪಾಲಕರ ನೆಮ್ಮದಿಯ ನಿದ್ರೆಗೂ ಸರ್ಕಾರದ ಹುಚ್ಚಾಟ, ಮೊಂಡುತನ ಭಂಗ ಮಾಡಿದೆ.

ಮಕ್ಕಳ ಚಿಂತೆ ಮರೆತು ಎಲೆಕ್ಷನ್​​​ನಲ್ಲಿ ಬ್ಯುಸಿಯಾದ ಸರ್ಕಾರ

ದಿನಕ್ಕೊಮ್ಮೆ ಬದಲಾಗುವ ಮೌಲ್ಯಾಂಕನ ಪರೀಕ್ಷೆ ದಿನಾಂಕ. ಖಾತ್ರಿಯಾಗದ ಮೌಲ್ಯಾಂಕನ ಪರೀಕ್ಷೆ. ಪಾಲಕರು ವಿದ್ಯಾರ್ಥಿಗಳ ಪರದಾಟ. ಹೌದು, ರಾಜ್ಯ ಪಠ್ಯ ಕ್ರಮದ 5, 8, 9 ಮತ್ತು 11ನೇ ತರಗತಿ ಮಕ್ಕಳು ಗೊಂದಲಕ್ಕೆ ಬಿದ್ದಿದ್ದಾರೆ. ಮೌಲ್ಯಾಂಕನ ಪರೀಕ್ಷೆ ಕುರಿತು ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಮುಂದೇನು ಅಂತ ತೋಚದೆ ಮಕ್ಕಳ ಜೊತೆ ಪಾಲಕರು ಸಹ ಚಿಂತೆಗೆ ಬಿದ್ದಿದ್ದಾರೆ.

ರಾಜ್ಯದ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಮಾರ್ಚ್​​ 11ರಿಂದ ಎರಡು ಪರೀಕ್ಷೆಗಳನ್ನ ಮಾಡಿ ಮುಗಿಸಿದೆ. ಆದ್ರೆ, ಎರಡು ಪರೀಕ್ಷೆ ನಡೆದ ಬಳಿಕ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆ ನೀಡಿದೆ. ಇನ್ನು ಇದೇ ಪ್ರಕರಣ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ವಾದ-ಪ್ರತಿವಾದ ಆಲಿಸಿದೆ. ಸದ್ಯ ವಿಚಾರಣೆ ಮುಗಿಸಿರುವ ಹೈಕೋರ್ಟ್​​ ತನ್ನ ತೀರ್ಪು ಕಾಯ್ದಿರಿಸಿದ್ದು, ಶೀಘ್ರವೇ ಪ್ರಕಟಿಸಬೇಕಿದೆ. ಬೋರ್ಡ್ ಪರೀಕ್ಷೆ ನಡೆಯುತ್ತಾ? ಇಲ್ವಾ? ರದ್ದಾದ್ರೆ ಮುಂದೇನು? ಶಾಲಾ ಪರೀಕ್ಷೆಗೆ ಹಾಜರಾಗಬೇಕಾ? ಆ ಪರೀಕ್ಷೆ ನಡೆಯೋದು ಯಾವಾಗ? ಮುಂದಿನ ಅಡ್ಮಿಷನ್​​​ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಸರ್ಕಾರವೇ ಎಕ್ಸಾಂ ಬರೆಯಬೇಕು. ಈ ಗೊಂದಲದ ನಡುವೆ ಈ ಪರೀಕ್ಷೆಗಳ ಮೇಲೆ ಹೊಸ ಕಾರ್ಮೋಡಗಳು ಕವಿದಿವೆ.

ಮಾರ್ಚ್​ 25 ಅಂದ್ರೆ ಸೋಮವಾರದಿಂದ ಎಸ್​​ಎಸ್​​ಎಲ್​​ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ಲೋಕಸಭಾ ಚುನಾವಣೆ ಸಹ ಶುರುವಾಗಿದೆ. ಪೊಲೀಸ್​ ಇಲಾಖೆ, ಶಿಕ್ಷಣ ಇಲಾಖೆ ಎಲ್ಲವನ್ನೂ ಆಯೋಗ ಬಳಕೆ ಮಾಡಿಕೊಳ್ಳಲಿದೆ. ಜೊತೆಗೆ ಶಾಲಾ ಸಿಬ್ಬಂದಿಯನ್ನ ಚುನಾವಣಾ ಕಾರ್ಯಗಳಿಗೆ ಆಯೋಗ ನಿಯೋಜನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೋರ್ಟ್​​​, ಶಾಲಾ ಹಂತದಲ್ಲೇ ಪರೀಕ್ಷೆ ನಡೆಸಿ ಎಂದು ಹೇಳಿದ್ರೆ ಅನುಕೂಲವಾಗಲಿದೆ. ಇಲ್ಲದಿದ್ರೆ, ಪರಿಸ್ಥಿತಿ ಬಿಗಡಾಯಿಸಲಿದೆ. ಒಟ್ಟಾರೆ, ಬೋರ್ಡ್ ಪರೀಕ್ಷೆಯ ಭವಿಷ್ಯದ ಕುರಿತು ಶಾಲೆಗಳಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಈ ಎಲ್ಲದರ ನಡುವೆ ಮಕ್ಕಳ ಮಾನಸಿಕ ಆರೋಗ್ಯದ ಆತಂಕ ಹೆಚ್ಚಿಸಿದೆ. ಪರಿಸ್ಥಿತಿಯ ತೀವ್ರತೆ ಅರಿತು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರದ ಶೀಘ್ರಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋರ್ಟ್​ನಲ್ಲಿ ವಿದ್ಯಾರ್ಥಿಗಳ ಭವಿಷ್ಯ; ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡ್ತಿದ್ಯಾ ಸರ್ಕಾರ..?

https://newsfirstlive.com/wp-content/uploads/2023/06/SSLC_RESULT.jpg

Load More