BCCI ಅಕೌಂಟ್​ನಲ್ಲಿದೆ ಸಾವಿರಾರು ಕೋಟಿ.. ಈ ಹಣದಿಂದಲೇ ಸಂಸ್ಥೆಗೆ ಹೋಗುತ್ತೆ ₹1000 ಕೋಟಿ ಬಡ್ಡಿ!

author-image
Veena Gangani
Updated On
BCCI ಅಕೌಂಟ್​ನಲ್ಲಿದೆ ಸಾವಿರಾರು ಕೋಟಿ.. ಈ ಹಣದಿಂದಲೇ ಸಂಸ್ಥೆಗೆ ಹೋಗುತ್ತೆ ₹1000 ಕೋಟಿ ಬಡ್ಡಿ!
Advertisment
  • ಬಿಸಿಸಿಐ ಆದಾಯದಲ್ಲಿ ಐಪಿಎಲ್‌ನದ್ದು ಸಿಂಹಪಾಲು
  • ಶ್ರೀಮಂತ ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯ ಎಷ್ಟು?
  • ಎಲ್ಲ ಕ್ರಿಕೆಟ್ ಬೋರ್ಡ್​ಗಳ ಪೈಕಿ BCCI ಶ್ರೀಮಂತ ಮಂಡಳಿ

ಬಿಸಿಸಿಐ ವಿಶ್ವ ಕ್ರಿಕೆಟ್​ನ ಮೋಸ್ಟ್ ರಿಚೆಸ್ಟ್ ಬೋರ್ಡ್​. ಇಂತಹ ಶ್ರೀಮಂತ ಕ್ರಿಕೆಟ್ ಮಂಡಳಿಯ ವಾರ್ಷಿಕ ಒಟ್ಟು ಮೌಲ್ಯ ಎಷ್ಟು ಅಂತ ಕೇಳಿದ್ರೆ ನೀವು ನಿಬ್ಬೆರಗಾಗುವುದ್ರಲ್ಲಿ ಡೌಟೇ ಇಲ್ಲ. BCCI ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. ಇಡೀ ವಿಶ್ವದಲ್ಲಿ ಎಲ್ಲ ಕ್ರಿಕೆಟ್ ಬೋರ್ಡ್​ಗಳ ಪೈಕಿ ಅತಿ ಶ್ರೀಮಂತ ಮಂಡಳಿ ಈ ಬಿಸಿಸಿಐ. ಕ್ರಿಕೆಟ್ ದುನಿಯಾಕ್ಕೆ ಬಿಗ್ ಬಾಸ್ ಐಸಿಸಿ ಆಗಿದ್ರೂ, ಐಸಿಸಿಯನ್ನೇ ಗಡ ಗಡ ನಡುಗಿಸೋ ತಾಕತ್ತು ಹೊಂದಿರೋ ಕ್ರಿಕೆಟ್ ಮಂಡಳಿ ಬಿಸಿಸಿಐ. ಇಂಥ ಶ್ರೀಮಂತ ಕ್ರಿಕೆಟ್ ಮಂಡಳಿಯ 2023-24 ವಾರ್ಷಿಕ ಆದಾಯ 9,741.7 ಕೋಟಿ.

ಇದನ್ನೂ ಓದಿ: ಕನ್ನಡದ ಸ್ಟಾರ್ ನಿರೂಪಕಿ ಮದುವೆ.. ಅನುಶ್ರೀ ಆಗ್ತಾ ಇರೋದು ಲವ್​..? ಅರೇಂಜ್ ಮ್ಯಾರೇಜ್​..?

publive-image

ಹೌದು, ಬಿಸಿಸಿಐಗೆ ಅನೇಕ ಮೂಲಗಳಿಂದ ಆದಾಯ ಅರಿದು ಬರುತ್ತೆ. ಈ ಪೈಕಿ ಐಪಿಎಲ್‌, ಬಿಸಿಸಿಐನ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಬಿಸಿಸಿಐನ ವಾರ್ಷಿಕ ವಹಿವಾಟಿನ ಶೇ 59.10 ಪಾಲು ಐಪಿಎಲ್​​ನಿಂದಲೇ ಬರುತ್ತೆ. ಪಂದ್ಯ ಪ್ರಸಾರದ ಹಕ್ಕುಗಳು, ಪ್ರಾಯೋಜಕತ್ವ ಸೇರಿ ಹಲವು ಮೂಲಗಳಿಂದ 5,761 ಕೋಟಿ ರೂಪಾಯಿ ಬಿಸಿಸಿಐ ಬೊಕ್ಕಸ ಸೇರಿದೆ. ಐಪಿಎಲ್​​ನಿಂದ ಬರೋಬ್ಬರಿ 5,761 ಗಳಿಸಿರುವ ಬಿಸಿಸಿಐನ 2ನೇ ಆದಾಯದ ಮೂಲ ಐಸಿಸಿ. ಟಿ20, ಏಕದಿನ ವಿಶ್ವಕಪ್. ಚಾಂಪಿಯನ್ಸ್​​ ಟ್ರೋಫಿಯಂಥ ಗ್ಲೋಬಲ್ ಈವೆಂಟ್ಸ್ ಶೇರ್​​ಗಳು, ದ್ವಿಪಕ್ಷೀಯ ಸರಣಿಗಳ ಮೂಲಕ ಪ್ರತಿ ವರ್ಷ ನೂರಾರು ಕೋಟಿ ಬಿಸಿಸಿಐಗೆ ಹರಿದು ಬರುತ್ತೆ. ಈ ಪೈಕಿ ಅತಿ ಹೆಚ್ಚಿನ ಶೇರ್​ ಬಿಸಿಸಿಐಗೆ ಖಜಾನೆ ಸೇರುತ್ತೆ. ಅದರಂತೆ 2024ರಲ್ಲಿ 1,042 ಕೋಟಿ ಬಿಸಿಸಿಐಗೆ ಐಸಿಸಿ ನೀಡಿದೆ.

ಬಿಸಿಸಿಐನ ಆದಾಯ ಮೂಲಗಳು

ಬಿಸಿಸಿಐ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿಯಿಂದಲೇ 987 ಕೋಟಿ ಆದಾಯ ಬರುತ್ತೆ. ನಾನ್​ ಮೀಡಿಯಾ ರೈಟ್ಸ್ ಮೂಲಕ ಸುಮಾರು 813 ಕೋಟಿ ಬಾಚಿಕೊಂಡ ಬಿಸಿಸಿಐ.. ಮಹಿಳಾ ಪ್ರೀಮಿಯರ್ ಲೀಗ್​ನಿಂದ ಸುಮಾರು 378 ಕೋಟಿ ರೂಪಾಯಿ ಗಳಿಸಿದೆ. ಇಷ್ಟೇ ಅಲ್ಲದೆ, ಪುರುಷರ ಅಂತಾರಾಷ್ಟ್ರೀಯ ಪ್ರವಾಸಗಳಿಂದ 361 ಕೋಟಿ ಆದಾಯ ಗಳಿಸಿಕೊಂಡಿದೆ. ಇವಲ್ಲದೆ ಇತರೆ ಆದಾಯ ಮೂಲಗಳಿಂದ 400 ಕೋಟಿ ಬಿಸಿಸಿಐ ಖಜಾನೆ ಸೇರಿದೆ.

ಐಸಿಸಿಗಿಂತ ಬಿಸಿಸಿಐ ಶ್ರೀಮಂತ..! 5 ಪಟ್ಟು ಹೆಚ್ಚು ಹಣ..!

ವಾರ್ಷಿಕ ಸಾವಿರಾರು ಕೋಟಿ ಗಳಿಸುವ ಬಿಸಿಸಿಐ, ವಿಶ್ವದ ರಿಚೆಸ್ಟ್ ಕ್ರಿಕೆಟ್ ಬೋರ್ಡ್ ಎನಿಸಿಕೊಳ್ಳಲು ಕಾರಣ ಹೊಂದಿರುವ ಸಂಪತ್ತು. ಯಾಕಂದ್ರೆ, ಸ್ವತಃ ವಿಶ್ವ ಕ್ರಿಕೆಟ್​ ಬಾಸ್ ಎನಿಸಿಕೊಳ್ಳುವ ಐಸಿಸಿಗಿಂತಲೂ 5 ಪಟ್ಟು ಹೆಚ್ಚು ಸಂಪತ್ತು ಬಿಸಿಸಿಐ ಹೊಂದಿದೆ. ಇಂಟ್ರೆಸ್ಟಿಂಗ್​ ಅಂದ್ರೆ, ಐಸಿಸಿ 2025ರ ನಿವ್ವಳ ಮೌಲ್ಯ 3950 ಕೋಟಿ ಹೊಂದಿದ್ರೆ. ಬಿಸಿಸಿಐ 18,760 ಸಂಪತ್ತು ಹೊಂದಿದೆ. ಇದಿಷ್ಟೇ ಅಲ್ಲ..! ಐಸಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಬೋರ್ಡ್​ಗಳ ಸಂಪತ್ತಿಗೆ ಹೋಲಿಕೆ ಮಾಡಿದ್ರೂ, ಬಿಸಿಸಿಐನ ಸಂಪತ್ತಿನಲ್ಲಿ ಅರ್ಧವೂ ಇಲ್ಲ.

2025ರಲ್ಲಿ ರಿಚೆಸ್ಟ್ ಕ್ರಿಕೆಟ್ ಬೋರ್ಡ್ಸ್​ ಗಳಿಕೆ

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ, ನಿವ್ವಳ ಮೌಲ್ಯ 18,760 ಕೋಟಿ. ಇದಕ್ಕೆ ಕಾರಣ ಐಪಿಎಲ್ ರೈಟ್ಸ್​, ಸ್ಪಾನ್ಸರ್ಸ್​ಶಿಪ್ಸ್​​, ಐಸಿಸಿ ಆದಾಯ ಹಂಚಿಕೆ, ದ್ವಿಪಕ್ಷೀಯ ಸರಣಿಗಳು ಪ್ರಮುಖವಾಗಿವೆ. 2ನೇ ಸ್ಥಾನದಲ್ಲಿರುವ ಕ್ರಿಕೆಟ್‌ ಆಸ್ಟ್ರೇಲಿಯಾ ಮೌಲ್ಯ 658 ಕೋಟಿ ರೂ. ಅಂದರೆ ಬಿಸಿಸಿಐ ಮೌಲ್ಯ ಆಸೀಸ್‌ಗಿಂತ 28 ಪಟ್ಟು ಕಡಿಮೆ. ಆಸ್ಟ್ರೇಲಿಯಾ ಗಳಿಕೆಯ ಪ್ರಮುಖ ಮೂಲಗಳು ಮೀಡಿಯಾ ರೈಟ್ಸ್, ಬಿಗ್ ಬ್ಯಾಷ್ ಲೀಗ್, ಸ್ಪಾನ್ಸರ್​ಶಿಫ್ & ICC ಪಾಲುದಾರಿಕೆಯಾಗಿದೆ. ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌, ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 459 ಕೋಟಿ ಸಂಪತ್ತು ಹೊಂದಿದೆ. ದಿ ಹಂಡ್ರೆಡ್ ಲೀಗ್​​, ಟೆಸ್ಟ್ ಸರಣಿಯ ಮಿಡಿಯಾ ರೈಟ್ಸ್​ ಹಾಗೂ ಸ್ಪಾನ್ಸರ್​ಶಿಫ್, ICC ಪಾಲಿದಾರಿಕೆ ಹಣ ಹರಿದು ಬರಲಿದೆ. ಈ ಮೂರು ಕ್ರಿಕೆಟ್​ ಬೋರ್ಡ್​ಗಳು ಹೊರತು ಪಡಿಸಿದ್ರೆ, ನೆರೆಯ ಪಾಕ್​​ ಕ್ರಿಕೆಟ್ ಬೋರ್ಡ್ ಬಳಿ 458 ಕೋಟಿ, ಬಾಂಗ್ಲಾ ಕ್ರಿಕೆಟ್ ಬೋರ್ಡ್‌ 425 ಕೋಟಿ ರೂಪಾಯಿ ಸಂಪತ್ತು ಹೊಂದಿದೆ. ಇನ್ನು 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಗೆದ್ದ ಸೌತ್ ಆಫ್ರಿಕಾ 392 ಕೋಟಿ ಸಂಪತ್ತು ಇದ್ದು, 6ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment