newsfirstkannada.com

×

50 ಮಂದಿ ಸಂಚರಿಸುತ್ತಿದ್ದ ದೋಣಿ ಪಲ್ಟಿ; ಇಬ್ಬರು ಸಾವು, 7 ಮಂದಿ ನಾಪತ್ತೆ 

Share :

Published April 20, 2024 at 7:22am

    ಸ್ಥಳೀಯ ಮೀನುಗಾರರು 35 ಮಂದಿಯನ್ನು ರಕ್ಷಿಸಿದ್ದಾರೆ

    ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 7 ಜನರನ್ನು ಕಾಪಾಡಿದ್ದಾರೆ

    ನಾಪತ್ತೆಯಾಗಿರುವ ಏಳು ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ

50 ಮಂದಿ ಸಂಚರಿಸುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿಯಲ್ಲಿ ಸಂಭವಿಸಿದೆ. ಪಥರ್ಸೇನಿ ಕುಡಾದಿಂದ ಬರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಸ್ಥಳೀಯ ಮೀನುಗಾರರು 35 ಮಂದಿಯನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಏಳು ಪ್ರಯಾಣಿಕರನ್ನು ಕಾಪಾಡಿದ್ದಾರೆ.

ಇದನ್ನೂ ಓದಿ: ಕಾರು-ಟ್ರಕ್​ ನಡುವೆ ಭೀಕರ ಅಪಘಾತ.. 10 ಮಂದಿ ದಾರುಣ ಸಾವು

ನಾಪತ್ತೆಯಾಗಿರುವ ಏಳು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಐವರು ಮುಳುಗುತಜ್ಞರಿಂದ ಏಳು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

50 ಮಂದಿ ಸಂಚರಿಸುತ್ತಿದ್ದ ದೋಣಿ ಪಲ್ಟಿ; ಇಬ್ಬರು ಸಾವು, 7 ಮಂದಿ ನಾಪತ್ತೆ 

https://newsfirstlive.com/wp-content/uploads/2024/04/Boat-Odisha.jpg

Load More