/newsfirstlive-kannada/media/post_attachments/wp-content/uploads/2024/10/boat-accident1.jpg)
ನೋಡ ನೋಡುತ್ತಿದ್ದಂತೆ ನೂರಾರು ಪ್ರಯಾಣಿಕರಿದ್ದ ಹಡಗು ಟೈಟಾನಿಕ್ ರೀತಿಯಲ್ಲಿ ಮುಳುಗಿ ಹೋಗಿರುವ ಭಯಾನಕ ಘಟನೆ ನಡೆದಿದೆ. ಹಡಗು ಮುಳುಗುತ್ತಿರುವ ವಿಡಿಯೋ ಮತ್ತೊಂದು ಬೋಟ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಡಗು ಮುಳುಗುತ್ತಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: VIDEO: ಟೈಟಾನಿಕ್ ರೀತಿಯಲ್ಲೇ ಮತ್ತೊಂದು ಹಡಗು ದುರಂತ; 78 ಮಂದಿ ದಾರುಣ ಸಾವು
ಈ ಹಡಗಿನಲ್ಲಿ ಸುಮಾರು 278 ಪ್ರಯಾಣಿಕರಿದ್ದು, 78 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 278ರಲ್ಲಿ ಇದುವರೆಗೂ 40 ಮಂದಿಯನ್ನು ರಕ್ಷಿಸಲಾಗಿದೆ. 23 ಮಂದಿ ಶವವಾಗಿ ಪತ್ತೆಯಾಗಿದ್ದು, 64 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಉಳಿದವರ ರಕ್ಷಣೆಗೆ ಹರಸಾಹಸ ಪಡಲಾಗಿದೆ.
ಹಡಗು ಮುಳುಗಿದ್ದು ಗೋವಾದಲ್ಲಿ ಅಲ್ಲ!
278 ಪ್ರಯಾಣಿಕರು ಮುಳುಗುತ್ತಿರುವ ಈ ಘಟನೆ ನಡೆದಿರೋದು ಗೋವಾದಲ್ಲಿ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಟ್ಯಾಗ್ ಮಾಡಿ ಗೋವಾ ಎಂದು ದಾರಿ ತಪ್ಪಿಸಲಾಗಿದೆ. ಫ್ಯಾಕ್ಟ್ ಚೆಕ್‌ನಲ್ಲಿ ಹಡಗು ದುರಂತದ ವಿಡಿಯೋ ಎಲ್ಲಿಯದ್ದು ಅನ್ನೋ ಸತ್ಯ ಬಯಲಾಗಿದೆ.
Accident of overloaded Steamer boat today in Goa. 40 people rescued, 64 missing and 23 bodies recovered.
Greed of the boat owner led to this accident.????? pic.twitter.com/fDouQ6saju— RANA SANGHA - RoughSeaSailor. (@Sangha2Bs) October 5, 2024
ಹಡಗು ಮುಳುಗಡೆಯಾಗಿರೋದು ಗೋವಾದಲ್ಲಿ ಅಲ್ಲ. ಈ ದುರಂತ ನಡೆದಿರೋದು ಕಾಂಗೊದಲ್ಲಿ. ಈ ವಿಡಿಯೋ ವೈರಲ್ ಆದ ಬಳಿಕ ಗೋವಾ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ದುರಂತದ ವಿಡಿಯೋ ಗೋವಾದ ಕಡಲ ತೀರದಲ್ಲಿ ಅಂತ ತಪ್ಪು ಮಾಹಿತಿ ನೀಡಲಾಗಿದೆ. ಈ ಅನಧಿಕೃತ ಸುದ್ದಿಯನ್ನು ಯಾರು ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ:BBK11 ಇಂದು ಕಿಚ್ಚನ ಮೊದಲ ಮಾತುಕತೆ; ಈ ಸ್ಪರ್ಧಿಗಳಿಗೆ ಪುಕಪುಕ..! ವಿಡಿಯೋ
ದುರಂತಕ್ಕೆ ಕಾರಣವೇನು?
ಅಸಲಿಗೆ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಈ ಹಡಗಿನ ದುರಂತ ಸಂಭವಿಸಿದೆ. ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಿವು ಸರೋವರದ ಗೋಮಾದಲ್ಲಿ ಹಡಗು ಮುಳುಗಡೆಯಾಗಿದೆ. ಇದುವರೆಗೂ 78 ಪ್ರಯಾಣಿಕರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ