newsfirstkannada.com

Boeing India: ಅಮೆರಿಕ ಬಳಿಕ ಬೆಂಗಳೂರಲ್ಲಿ ಬೋಯಿಂಗ್‌ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್; ಇದು ಓದಲೇಬೇಕಾದ ಸ್ಟೋರಿ!

Share :

Published September 22, 2023 at 3:14pm

Update September 22, 2023 at 3:20pm

    ಅಮೆರಿಕ ಬಿಟ್ಟರೇ ಬೆಂಗಳೂರಿನಲ್ಲಿ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್

    ಈಗಾಗಲೇ ಭಾರತದಲ್ಲಿ ಕೆಲ ಬ್ರ್ಯಾಂಚ್​ಗಳನ್ನ ಹೊಂದಿದ ಬೋಯಿಂಗ್

    ಏರ್​ಸ್ಪೇಸ್​​ಗೆ ಸಂಬಂಧಿಸಿದ ವಸ್ತುಗಳನ್ನ ತಯಾರಿಸುವ ಪ್ರತಿಷ್ಠಿತ ಕಂಪನಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಡೀ ವಿಶ್ವದಲ್ಲೇ ಖ್ಯಾತಿ ಪಡೆದಿದ್ದು ನಮ್ಮ ಬೆಂಗಳೂರಿನ ಹಿರಿಮೆಯನ್ನು ಹೆಚ್ಚಿಸಿದೆ. ಇದರ ಪಕ್ಕದಲ್ಲೇ ಅಮೆರಿಕದ ಪ್ರತಿಷ್ಠಿತ ಮಲ್ಟಿನ್ಯಾಷನಲ್ ವಿಮಾನ, ರಾಕೆಟ್, ಉಪಗ್ರಹ, ರಕ್ಷಣಾ ಸಾಮಾಗ್ರಿ​ ತಯಾರಿಸುವ ಬೋಯಿಂಗ್ ಕಂಪನಿ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್​ ಅನ್ನು ಓಪನ್ ಮಾಡಲು ಮುಂದಾಗಿದೆ.

ಅಮೆರಿಕದ ನಂತರ ಬೆಂಗಳೂರಿನಲ್ಲೇ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್​ ಅನ್ನು ಓಪನ್ ಮಾಡಲು ಬೋಯಿಂಗ್ ಕಂಪನಿ ಯೋಜನೆ ಹಾಕಿಕೊಂಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಸುಮಾರು 43 ಎಕರೆಯಲ್ಲಿ ಈ ಪಾರ್ಕ್ ಅನ್ನು ಪ್ರಾರಂಭಿಸಲಾಗುತ್ತಿದ್ದು ಇದಕ್ಕೆ ಸುಮಾರು 1,600 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಈಗಾಗಲೇ ನವದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು ಮುಂಬೈ, ಹಿಂದಾನ್ ಮತ್ತು ರಾಜಾಲಿಯಲ್ಲಿ ಬ್ರ್ಯಾಂಚ್​ಗಳನ್ನು ಹೊಂದಿದೆ. ಜೊತೆಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರ್ಸ್​ & ಟೆಕ್ನಾಲಾಜಿ ಸೆಂಟರ್ (BIETC) ಅನ್ನು ಹೊಂದಿದೆ.

ಕೆಂಪೇಗೌಡ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ಕಾರ 2021 ರಲ್ಲಿ ಅನುಮೋದನೆ ನೀಡಿದೆ. ಈಗಾಗಲೇ ಮೆಟ್ರೋ ಕಾರ್ಯ ಪ್ರಾರಂಭವಾಗಿದ್ದು ಕೆ.ಆರ್ ಪುರ- ಯಲಹಂಕ ಹಾಗೂ ಏರ್​ಪೋರ್ಟ್​ಗೆ ಮೆಟ್ರೋ ಸಂಪರ್ಕ ಕಲ್ಪಿಸಲಿದೆ. ಇದರಿಂದ ದೇವನಹಳ್ಳಿ ಹಾಗೂ ಏರ್​ಪೋರ್ಟ್​ನ ಭಾಗದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಈ ಎಲ್ಲ ಕಾರಣಗಳಿಂದ ಬೋಯಿಂಗ್ ಕಂಪನಿ 43 ಎಕೆರೆಯಲ್ಲಿ ಏರ್​ಸ್ಪೇಸ್​ ಪಾರ್ಕ್​ ಅನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ.

10 ಸಾವಿರ ಕೋಟಿ ರೂಪಾಯಿ ಆದಾಯದ ಗುರಿ

ಬೋಯಿಂಗ್ ಕಂಪನಿ ಅಮೆರಿಕದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿದೆ. ಇದು ಕ್ಷಿಪಣಿ, ರೋಟರ್‌ಕ್ರಾಫ್ಟ್‌ ವಿಮಾನ, ರಾಕೆಟ್, ಉಪಗ್ರಹಗಳನ್ನ​, ಸ್ಯಾಟ್​ಲೈಟ್​, ಟೆಲಿ ಕಮ್ಯುನಿಕೇಶನ್ ಉಪಕರಣಗಳನ್ನು ತಯಾರಿಸಿ ವಿಶ್ವದ್ಯಾಂತ ಮಾರಾಟ ಮಾಡುವ ದೊಡ್ಡ ಕಂಪನಿಯಾಗಿದೆ. ಈಗಾಗಲೇ ಭಾರತದ ರಾಜಧಾನಿ ದೆಹಲಿಯಲ್ಲಿ ಮುಖ್ಯ ಕಚೇರಿಯನ್ನು ಬೋಯಿಂಗ್ ಹೊಂದಿದ್ದು ವಾರ್ಷಿಕವಾಗಿ 8,000 ಕೋಟಿ ರೂಗಳನ್ನು ಗಳಿಸುತ್ತಿದೆ. ಇದನ್ನು 10 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಲು ಗುರಿಯನ್ನು ಹೊಂದಿ ಬೆಂಗಳೂರಿನಲ್ಲಿ ಪಾರ್ಕ್ ತೆರೆಯಲು ಮುಂದಾಗಿದೆ.

ಬೋಯಿಂಗ್ ಪ್ರಾರಂಭ ಮಾಡಿದವರು ಯಾರು..?

ಬೋಯಿಂಗ್ ಕಂಪನಿ ವಿಶ್ವದ ಅತಿ ದೊಡ್ಡ ಏರೋಸ್ಪೇಸ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ. 2020ರ ಪ್ರಕಾರ ವಿಶ್ವದಲ್ಲೇ 3ನೇ ಅತೀ ದೊಡ್ಡ ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೋಯಿಂಗ್ ಸಂಸ್ಥೆಯನ್ನು 1916 ಜುಲೈ 15 ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಿಲಿಯಂ ಬೋಯಿಂಗ್ ಎನ್ನುವರು ಇದನ್ನು ಸ್ಥಾಪನೆ ಮಾಡಿದರು. ಪ್ರಸ್ತುತ ಇದು ವರ್ಜೀನಿಯಾದ ಅರ್ಲಿಂಗ್ಟನ್​ನ ಕ್ರಿಸ್ಟಲ್ ಸಿಟಿಯಲ್ಲಿ ಎಂಬಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು ಡೇವ್ ಕ್ಯಾಲೌ​ಹನ್ CEO ಆಗಿದ್ದರೇ, ಲ್ಯಾರಿ ಕೆಲ್​ನರ್ ಅಧ್ಯಕ್ಷರಾಗಿದ್ದಾರೆ. 2021ರಲ್ಲಿ ಬೋಯಿಂಗ್ 62.3 ಬಿಲಿಯನ್ ಡಾಲರ್​ನಷ್ಟು ಪ್ರಾಡೆಕ್ಟ್​ಗಳನ್ನು ಮಾರಾಟ ಮಾಡುವುದರ ಮೂಲಕ ದಾಖಲೆ ಬರೆದಿತ್ತು.

ಕೆಂಪೇಗೌಡ ವಿಮಾನ ನಿಲ್ದಾಣದ ಒಳ ನೋಟ

ಬೋಯಿಂಗ್​ನ ಕೆಲ ಪ್ರಮುಖ ಅಂಶಗಳು..

  • ಯುಎಸ್​ನ ವರ್ಜೀನಿಯಾದಲ್ಲಿನ ಕ್ರಿಸ್ಟಲ್ ಸಿಟಿಯಲ್ಲಿ ಹೆಡ್​ ಆಫೀಸ್​ ಹೊಂದಿದೆ
  • 1916 ಜುಲೈ 15 ರಂದು ಬೋಯಿಂಗ್ ಅನ್ನು ವಿಲಿಯಂ ಬೋಯಿಂಗ್ ಪ್ರಾರಂಭಿಸಿದ್ರು
  • ಬೋಯಿಂಗ್ ಕಂಪನಿ ಆರಂಭಿಸಿ 107 ವರ್ಷಗಳು ನಡೆಯುತ್ತಿವೆ
  • ಇದು ವಿಶ್ವದ್ಯಾಂತ ತನ್ನ ಬ್ರ್ಯಾಂಚ್​ಗಳನ್ನು ಹೊಂದಿದೆ.
  • 2022ರ ಪ್ರಕಾರ ವಿಶ್ವದ್ಯಾಂತ ಬರೋಬ್ಬರಿ 66.61 ಬಿಲಿಯನ್​ ಡಾಲರ್ ಆದಾಯ
  • ಬೋಯಿಂಗ್ ಕಂಪನಿಯಲ್ಲಿ ವಿಶ್ವದ್ಯಾಂತ ಒಟ್ಟು 1,56,000 ಜನ ಕೆಲಸ ಮಾಡುತ್ತಿದ್ದಾರೆ ​
ಬೋಯಿಂಗ್ ಕಂಪನಿ ಸ್ಥಾಪಕ ವಿಲಿಯಂ ಬೋಯಿಂಗ್

ಬೋಯಿಂಗ್ ಕಂಪನಿ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು ಇದನ್ನು ಭಾರತದಲ್ಲಿ ಬೋಯಿಂಗ್ ಇಂಡಿಯಾ ಎಂದು ಕರೆಯುತ್ತಾರೆ. 2032ರ ವೇಳೆಗೆ ಭಾರತದಲ್ಲಿ ರಕ್ಷಣಾ ವಲಯದಲ್ಲಿ ಸ್ವದೇಶಿಯವಾಗಿ ತಯಾರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ 18 ವಿಮಾನಗಳನ್ನು ತಯಾರಿಸಲು ಪ್ಲಾನ್ ಮಾಡಿದ್ದು 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಇನ್ನು ಬೋಯಿಂಗ್ ಕಂಪನಿ ಆತ್ಮನಿರ್ಭರ್​ ಭಾರತ್​ ಯೋಜನೆಯ ಭಾಗವಾಗಿ ದೇಶಕ್ಕೆ P-81 ಕಡಲ ಕಣ್ಗಾವಲು ಏರ್​ಕ್ರಾಫ್ಟ್​ ಅನ್ನು ತಯಾರಿಸಿ ಕೊಡುವುದಾಗಿ ಹೇಳಿದೆ. ಈಗಾಗಲೇ P-8I ಹೆಸರಿನ 12 ವಿಮಾನಗಳು ಇಂಡೋ-ಪೆಸಿಫಿಕ್​ನಲ್ಲಿ ಭಾರತೀಯ ನೌಕಾಪಡೆಯ ವಿಚಕ್ಷಣ ಮತ್ತು ಕಣ್ಗಾವಲಾಗಿ ಕಾರ್ಯಗಳನ್ನು ನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ.

ವಿಶೇಷ ವರದಿ: ಭೀಮಪ್ಪ, ನ್ಯೂಸ್​ಫಸ್ಟ್,​ ವೆಬ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Boeing India: ಅಮೆರಿಕ ಬಳಿಕ ಬೆಂಗಳೂರಲ್ಲಿ ಬೋಯಿಂಗ್‌ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್; ಇದು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/09/Boeing_India.jpg

Load More