/newsfirstlive-kannada/media/post_attachments/wp-content/uploads/2024/12/Boiled-egg-vs-omelette.jpg)
ಮೊಟ್ಟೆಯನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಅಂತಲೇ ಕರೆಯುತ್ತಾರೆ. ಅದು ಮಾತ್ರವಲ್ಲ ಸಂಪೂರ್ಣ ಪ್ರೊಟೀನ್ಮಯ ಆಹಾರ ಅಂತಲೂ ಮೊಟ್ಟೆಯನ್ನು ಕರೆಯುತ್ತಾರೆ. ಆದರೆ ಅನೇಕರಿಗೆ ಒಂದು ಗೊಂದಲವಿದೆ. ಬೇಯಿಸಿದ ಮೊಟ್ಟೆ ಒಳ್ಳೆಯದೋ ಅಥವಾ ಆಮ್ಲೆಟ್ ಮಾಡಿದ ಮೊಟ್ಟೆ ಒಳ್ಳೆಯದೋ ಅಂತ. ಮುಂಜಾನೆಯ ಉಪಹಾರದಲ್ಲಿ ಈ ಎರಡನ್ನು ಇಷ್ಟಪಟ್ಟು ಸೇವಿಸುವವರು ಇದ್ದಾರೆ. ಎರಡು ಖಾದ್ಯಗಳು ಕೂಡ ನಾಲಿಗೆಗೆ ಅಷ್ಟೇ ರುಚಿಸುತ್ತದೆ. ಆದರೆ ಅವು ನ್ಯೂಟ್ರಿಷನ್ ಅಂಶ, ಕ್ಯಾಲರೀಸ್ ಹಾಗೂ ಆರೋಗ್ಯ ಪ್ರಯೋಜನಗಳಲ್ಲಿ ಬೇರೆ ಬೇರೆಯಾಗಿ ಗುರುತಿಸಿಕೊಳ್ಳುತ್ತವೆ.
ಬೇಯಿಸಿದ ಮೊಟ್ಟೆಯಲ್ಲಿರುವ ಪೋಷಕಾಂಶಗಳ ಮೌಲ್ಯ
ಬೇಯಿಸಿದ ಮೊಟ್ಟೆಗಳನ್ನು ಅತ್ಯಂತ ಆರೋಗ್ಯಕರ ಆಹಾರ ಎಂದು ಕರೆಯುತ್ತಾರೆ. ಮೊಟ್ಟೆಯನ್ನು ಆಸ್ವಾದಿಸಿ ತಿನ್ನುವುದಾದ್ರೆ ಅದು ಬೇಯಿಸಿದ ಮೊಟ್ಟೆಯೇ. ಅದನ್ನು ಸಿದ್ಧಗೊಳಿಸುವುದು ಕೂಡ ತುಂಬಾ ಸರಳ, ಯಾವುದೇ ಅಡುಗೆ ಪದಾರ್ಥ ಬಳಸದೇ ಇದು ಸಿದ್ಧಗೊಳ್ಳುವುದರಿಂದ ಆಸ್ವಾದಿಸಿ ತಿನ್ನಲು ಬಹಳ ಇಷ್ಟವಾಗುತ್ತದೆ. ಯುನೈಟೆಡ್ ಸ್ಟೇಟ್ಸ್ನ ಕೃಷಿ ವಿಭಾಗ ಹೇಳುವ ಪ್ರಕಾರ ಒಂದು ಗಟ್ಟಿಯಾದ ಮೊಟ್ಟೆ ಸುಮಾರು 6 ಗ್ರಾಂನಷ್ಟು ಹೈ ಕ್ವಾಲಿಟಿ ಪ್ರೊಟೀನ್ ಹೊಂದಿರುತ್ತದೆ ಎಂದು ಹೇಳಿದೆ. ಸ್ನಾಯುಗಳ ಗಟ್ಟಿಗೊಳಿಸಲು ಹಾಗೂ ಬೆಳವಣಿಗೆಗೊಳಿಸಲು ಇದು ತುಂಬಾ ಅತ್ಯಗತ್ಯ. ಅದು ಅಲ್ಲದೇ ಬೇಯಿಸಿದ ಮೊಟ್ಟೆ ಕೇವಲ ಪ್ರೊಟೀನ್ ಮಾತ್ರವಲ್ಲ ಜೀವಸತ್ವಗಳದಾಂತ ಬಿ12, ಎ ಮತ್ತು ಡಿಯ ಅಂಶಗಳನ್ನು ಹೊಂದಿದೆ ಇನ್ನು ಖನಿಜಾಂಶಗಳಾದಂತ ಐರನ್, ಕ್ಯಾಲ್ಸಿಯಂ ಐರನ್ ಕ್ಯಾಲ್ಸಿಯಂಮ, ಮ್ಯಾಗ್ನೇಶಿಯಂ ಹಾಗೂ ಜಿಂಕ್ನ್ನು ಕೂಡ ಇದು ಹೊಂದಿರುತ್ತದೆ. ಇದು ದೇಹದಲ್ಲಿ ಅನಗತ್ಯವಾದ ಹಸಿವಿನ ಬಯಕೆಯನ್ನು ಹುಟ್ಟಿಸದೇ ತೂಕವನ್ನು ಹೆಚ್ಚಿಸುವುದರಲ್ಲಿ ಬಹಳ ಪರಿಣಾತ್ಮಕವಾಗಿ ಕೆಲಸ ಮಾಡುತ್ತದೆ.
ಆಮ್ಲೇಟ್ನಲ್ಲಿರುವ ಪೋಷಕಾಂಶಗಳ ಮೌಲ್ಯ
ಆಮ್ಲೇಟ್, ಮೊಟ್ಟೆಯನ್ನು ಆಸ್ವಾದಿಸಿ ತಿನ್ನುವ ಮತ್ತೊಂದು ವಿಧಾನವಾಗಿ ನಮ್ಮ ಎದುರು ಬರುತ್ತದೆ. ಇದರಲ್ಲಿ ಅನೇಕ ರೀತಿಯ ತರಕಾರಿಗಳನ್ನು, ಚೀಸ್ ಹಾಗೂ ಕೆಲವೊಮ್ಮೆ ಮಾಂಸವನ್ನು ಸೇರಿಸಿ ಕೊಡುತ್ತಾರೆ. ಇದು ದೇಹಕ್ಕೆ ಬೇಕಾಗಿರುವ ಪೊಷಕಾಂಶಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ತರಕಾರಿಗಳನ್ನು ಸೇರಿಸುವುದರಿಂದ ಹೆಚ್ಚಿನ ಪೋಷಕಾಂಶಗಳ ಖನಿಜಾಂಶಗಳು ಹಾಗೂ ಜೀವಸತ್ವಗಳು ದೇಹಕ್ಕೆ ದೊರೆಯುತ್ತವೆ, ಆದರೆ ನಾವು ಯಾವ ರೀತಿಯ ತರಕಾರಿಗಳನ್ನು ಆಮ್ಲೆಟ್ ಮಾಡುವುದರಲ್ಲಿ ಬಳಸುತ್ತೇವೆ ಅನ್ನೋದರ ಮೇಲೆ ಇದರ ಪೋಷಕಾಂಶಗಳ ಜೀವಸತ್ವಗಳ ಮೌಲ್ಯ ಅಡಗಿರುತ್ತದೆ. ಯಾವುದೇ ತರಕಾರಿ ಹಾಕದೇ ಹಾಫ್ ಬಾಯಲ್ಡ್ ಆಮ್ಲೆಟ್ ಮಾಡಿದರೆ ಅದು ಕೂಡ ಒಂದು ಮೊಟ್ಟೆಯನ್ನು ತಿಂದಾಗ ಸಿಗುವಷ್ಟೇ ಪ್ರೊಟೀನ್ ಪೋಷಕಾಂಶ ಖನಿಜಾಂಶಗಳು ಸಿಗುತ್ತದೆ. ಇದಕ್ಕೆ ಚೀಸ್ ಹಾಗೂ ಎಣ್ಣೆಯನ್ನು ಸೇರಿಸಿ ತಯಾರಿಸುವುದರಿದ ಕ್ಯಾಲರೀಸ್ಗಳನ್ನು ಹೆಚ್ಚಿಸಿ ದೇಹದಲ್ಲಿ ಅನಾರೋಗ್ಯಕರ ಫ್ಯಾಟ್ನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಗಮನ; ಈ ನಿಯಮಗಳನ್ನು ತಪ್ಪದೇ ಪಾಲಿಸಿ
ಇನ್ನು ಕ್ಯಾಲರೀಸ್ ವಿಚಾರದಲ್ಲಿ ಆಮ್ಲೆಟ್ ಹಾಗೂ ಬೇಯಿಸಿದ ಮೊಟ್ಟೆಯನ್ನು ಹೋಲಿಕೆ ಮಾಡಿ ನೋಡಿದಾಗ ಬೇಯಿಸಿದ ಮೊಟ್ಟೆಯಲ್ಲಿ ಸುಮಾರು 78ರಷ್ಟು ಕ್ಯಾಲರೀಸ್ ಇರುತ್ತದೆ. ಇದರಲ್ಲಿ ಫ್ಯಾಟ್ ಅಂಶ ಕಡಿಮೆ. ಆಮ್ಲೇಟ್ನ್ನು ಹಲವು ತರಕಾರಿಗಳಿಂದ ಮಾಡಿದ್ದರೆ ಅತಿಹೆಚ್ಚು ಕ್ಯಾಲರೀಸ್ಗಳನ್ನು ಹೊಂದಿರುತ್ತದೆ. ಒಂದು ಹಿಡಿ ತರಕಾರಿಯಿಂದ ಅಂತಹ ವ್ಯತ್ಯಾಸಗಳಾಗಲ್ಲ. ಆದ್ರೆ ಎಣ್ಣೆ ಮತ್ತು ಚೀಸ್ಗಳನ್ನು ಬಳಸಿ ಮಾಡಿದರೆ ಆಮ್ಲೆಟ್ನಲ್ಲಿ ಕ್ಯಾಲರೀಸ್ಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತದೆ.
ಇನ್ನು ಈ ಎರಡು ಆಹಾರ ಪದಾರ್ಥಗಳನ್ನು ಕೊಲೆಸ್ಟ್ರಾಲ್ ವಿಚಾರದಲ್ಲಿ ಹೋಲಿಕೆ ಮಾಡಿ ನೋಡಿದಾಗ. ಬೇಯಿಸಿದ ಮೊಟ್ಟೆಯೇ ಒಳ್ಳೆಯದು ಎನ್ನುತ್ತವೆ ಹಲವು ಅಧ್ಯಯನಗಳು
ಇದನ್ನೂ ಓದಿ:ಒಂದು ಲೀಟರ್ ಕೆಮಿಕಲ್ನಿಂದ 500 ಲೀಟರ್ ಹಾಲು! ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ಎಚ್ಚರ..!
ಈ ಎರಡರಲ್ಲಿ ಯಾವುದು ಒಳ್ಳೆಯದು ಅಂತ ನೋಡುವುದಾದ್ರೆ, ಅದು ಯಾರು ತಮ್ಮ ಆಹಾರ ಕ್ರಮವನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಬೇಯಿಸಿದ ಮೊಟ್ಟೆಗಳು ಅತಿಹೆಚ್ಚು ಫೋಷಕಾಂಶಗಳನ್ನು ಹೊಂದಿರುವ ಬೇರೆ ಯಾವ ಆಹಾರ ಪದಾರ್ಥಗಳನ್ನು ಸೇರಿಸದೇ ಮಾಡಿರುವ ಆಹಾರ. ಸಿದ್ಧಗೊಳಿಸುವಲ್ಲಿ ಸಮಯದ ಅಭಾವ ಇದ್ದವರು ಹೆಚ್ಚು ಕಡಿಮೆ, ಬೇಯಿಸಿದ ಮೊಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಮ್ಲೆಟ್ ಕೂಡ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವಂತಹ ಖಾದ್ಯ. ಆದ್ರೆ ಇದರಲ್ಲಿ ಹೆಚ್ಚು ತರಕಾರಿ ಹಾಗೂ ಚೀಸ್ಗಳನ್ನು ಬಳಸಲಾಗುತ್ತದೆ.ಇವುಗಳನ್ನು ಬಳಸದೇ ಮಾಡಿದ ಆಮ್ಲೆಟ್ ಕೂಡ ಆರೋಗ್ಯಕ್ಕೆ ಒಳ್ಳೆಯದು.
ಬೇಯಿಸಿದ ಮೊಟ್ಟೆ ಹಾಗೂ ಆಮ್ಲೆಟ್ ಎರಡು ಮೊಟ್ಟೆಯ ಬೇರೆ ಬೇರೆ ರೂಪದಲ್ಲಿ ತಿನ್ನಲು ಸಿಗುವ ಪದಾರ್ಥ. ಒಂದೊಂದು ಒಂದೊಂದು ರೀತಿಯ ಆಹಾರ ಪ್ರಯೋಜನಗಳನ್ನು ಹೊದಿವೆ. ಹೀಗಾಗಿ ಡಯಟ್ ಮಾಡುವವರ ಗುರಿಯ ಮೇಲೆ ಯಾವುದು ಒಳ್ಳೆಯದು ಯಾವುದು ಅಷ್ಟು ಒಳ್ಳೆಯದಲ್ಲ ಎನ್ನುವುದು ನಿರ್ಧಾರವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ