ಬೆಳ್ಳಂಬೆಳಗ್ಗೆ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?

author-image
admin
Updated On
ಬೆಳ್ಳಂಬೆಳಗ್ಗೆ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?
Advertisment
  • ಬೆಳಗಿನ ಜಾವ 4.45ರ ಸುಮಾರಿಗೆ ಗೋವಿಂದ ಅವರ ಅನಾಹುತ
  • ಗೋವಿಂದ ಕಾಲಿಗೆ ಶೂಟ್ ಮಾಡಿರೋದು ಬೇರೆ ಯಾರು ಅಲ್ಲ
  • ಇನ್ನೂ ICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ನಟ ಗೋವಿಂದ

ಮುಂಬೈ: ಬಾಲಿವುಡ್ ನಟ ಗೋವಿಂದ ಅವರ ಕಾಲಿಗೆ ಗುಂಡೇಟು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗಿನ ಜಾವ 4.45ರ ಸುಮಾರಿಗೆ ಗೋವಿಂದ ಅವರ ಮನೆಯಲ್ಲೇ ಈ ಶೂಟೌಟ್ ಘಟನೆ ನಡೆದಿದೆ. ಗೋವಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಿವುಡ್‌ ಹೀರೋ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋವಿಂದ ಅವರ ಕಾಲಿಗೆ ಶೂಟ್ ಮಾಡಿರೋದು ಬೇರೆ ಯಾರು ಅಲ್ಲ. ಗೋವಿಂದ ಅವರು ತಮ್ಮ ಮನೆಯಲ್ಲಿ ತಮ್ಮ ಲೈಸೆನ್ಸಡ್‌ ರಿವಾಲ್ವರ್ ಕ್ಲೀನ್ ಮಾಡುವಾಗ ಈ ಅಚಾತುರ್ಯ ನಡೆದಿದೆ ಎನ್ನಲಾಗಿದೆ. ಗೋವಿಂದ ಅವರ ರಿವಾಲ್ವರ್‌ ಲಾಕ್ ಓಪನ್ ಆಗಿದ್ದು ತಮ್ಮ ಕಾಲಿಗೆ ತಾವೇ ಶೂಟ್ ಮಾಡಿಕೊಂಡಿದ್ದಾರೆ.

publive-image

ನಟ ಗೋವಿಂದ ಅವರು ಇಂದು ಬೆಳಗ್ಗೆ ಮನೆಯಿಂದ ಹೊರಗೆ ಹೋಗಲು ರೆಡಿ ಆಗುತ್ತಿದ್ದರು. ಈ ಸಮಯದಲ್ಲಿ ಗೋವಿಂದ ಅವರ ಕಾಲಿಗೆ ರಿವಾಲ್ವರ್‌ನಿಂದ ಗುಂಡೇಟು ಬಿದ್ದಿದೆ. ಕೂಡಲೇ ಗೋವಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಗೋವಿಂದ ಅವರ ಕಾಲಿನಲ್ಲಿದ್ದ ಬುಲೆಟ್‌ ಅನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: BBK11 ಸ್ಪರ್ಧಿಯ ಜೊತೆ ಹುಲಿ ಉಗುರಿನ ಪೆಂಡೆಂಟ್​​! ಅರೆಸ್ಟ್​ ಆಗ್ತಾರಾ ಗೋಲ್ಡ್​​ ಸುರೇಶ್​? 

ಸದ್ಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಗೋವಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಗೋವಿಂದ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

publive-image

ಆಸ್ಪತ್ರೆಯಿಂದ ಗೋವಿಂದ ಹೇಳಿದ್ದೇನು?
ಕಾಲಿಗೆ ಗುಂಡೇಟು ತಗುಲಿರುವ ನಟ ಗೋವಿಂದ ಅವರು ಆಸ್ಪತ್ರೆಯಿಂದಲೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋವಿಂದ ಅವರ ಆಡಿಯೋ ಸಂದೇಶವನ್ನು ಅವರ ಅಧಿಕೃತ ಮ್ಯಾನೇಜರ್ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: Breaking: ನಟ ಗೋವಿಂದ ಕಾಲಿಗೆ ಗುಂಡೇಟು! ಐಸಿಯುವಿನಲ್ಲಿ ಚಿಕಿತ್ಸೆ 

ಎಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ತಂದೆ-ತಾಯಿ, ಗುರುಗಳ ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೇನೆ. ನನ್ನ ಕಾಲಿಗೆ ತಗುಲಿದ್ದ ಗುಂಡನ್ನು ಹೊರ ತೆಗೆಯಲಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ನನ್ನ ಧನ್ಯವಾದಗಳು ಎಂದು ಗೋವಿಂದ ಹೇಳಿದ್ದಾರೆ.

ಗೋವಿಂದ ಅವರ ಮ್ಯಾನೇಜರ್ ಶಶಿ ಸಿಂಹ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಟ ಗೋವಿಂದ ಅವರು ಕೋಲ್ಕತ್ತಾಗೆ ತೆರಳಲು ರೆಡಿ ಆಗುತ್ತಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಲೈಸೆನ್ಸ್‌ ರಿವಾಲ್ವರ್ ಅನ್ನು ತೆಗೆದುಕೊಂಡಿದ್ದಾರೆ. ಆಗ ರಿವಾಲ್ವರ್ ಕೈಯಿಂದ ಜಾರಿದ್ದು ಅವರ ಗೂಲಿಗೆ ಗುಂಡು ತಗುಲಿದೆ. ಚಿಕಿತ್ಸೆ ನೀಡಿದ ವೈದ್ಯರು ಗೋವಿಂದ ಅವರ ಕಾಲಿನಲ್ಲಿದ್ದ ಬುಲೆಟ್ ಅನ್ನು ತೆಗೆದಿದ್ದಾರೆ. ಗೋವಿಂದ ಅವರು ಇನ್ನೂ ಆಸ್ಪತ್ರೆಯಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ. ಮುಂಬೈ ಪೊಲೀಸರು ಗೋವಿಂದ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಗಂಭೀರ ಪರಿಸ್ಥಿತಿ ಎದುರಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment