1 ಗಂಟೆ ಅಪಾರ್ಟ್ಮೆಂಟ್​ನಲ್ಲಿದ್ದ.. ಸೈಫ್​​ಗೆ ಚೂರಿ ಚುಚ್ಚಿದವನ ಜಾಡು ಹಿಡಿದ ಪೊಲೀಸರಿಗೆ ಏನೆಲ್ಲ ಗೊತ್ತಾಯ್ತು..?

author-image
Ganesh
Updated On
1 ಗಂಟೆ ಅಪಾರ್ಟ್ಮೆಂಟ್​ನಲ್ಲಿದ್ದ.. ಸೈಫ್​​ಗೆ ಚೂರಿ ಚುಚ್ಚಿದವನ ಜಾಡು ಹಿಡಿದ ಪೊಲೀಸರಿಗೆ ಏನೆಲ್ಲ ಗೊತ್ತಾಯ್ತು..?
Advertisment
  • ಎನ್​ಕೌಂಟರ್​​ ಸ್ಪೆಷಲಿಸ್ಟ್​​​ ದಯಾ ನಾಯಕ್​ ನೇತೃತ್ವದಲ್ಲಿ ತನಿಖೆ
  • ದಾಳಿಕೋರನ ಹುಡುಕಾಟಕ್ಕೆ 20 ಸದಸ್ಯರ ತಂಡ ರಚನೆ
  • ದಾಳಿ ವೇಳೆ ಮನೆಯಲ್ಲೇ ಇರಲಿಲ್ಲ ಕರೀನಾ, ಮಕ್ಕಳು

ಬಾಲಿವುಡ್ ನಟ ಸೈಫ್​ ಅಲಿ ಖಾನ್​ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.. ಆರೋಪಿಯ ಚಟುವಟಿಗೆ.. ಚಲನವಲನ ಬಗ್ಗೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ದಾಳಿಕೋರನ ಹುಡುಕಾಟಕ್ಕೆ 20 ಸದಸ್ಯರ ತಂಡ ರಚನೆ

ಸೈಫ್ ಅಲಿಗೆ 6 ಬಾರಿ ಚಾಕುವಿನಿಂದ ತಿವಿಯಲಾಗಿದೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಘಾಸಿಯಾಗಿದೆ. ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್​ ಅಲಿ ಖಾನ್​​ಗೆ, ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೈಫ್ ಅಲಿಖಾನ್‌ ಮೇಲೆ ದಾಳಿ ನಡೆಸಿದ ಆರೋಪಿಗಳ ಪತ್ತೆಗೆ ಮುಂಬೈ ಪೊಲೀಸರು 20 ತಂಡಗಳನ್ನು ರಚಿಸಿದ್ದಾರೆ. 20 ಸದಸ್ಯರ ತಂಡ ನೇತೃತ್ವವನ್ನ ಭೂಗತ ಲೋಕವನ್ನೇ ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳ ಪಾಲಿಗೆ ಸಿಂಹಸ್ವಪ್ನವಾಗಿ.. ಕರ್ನಾಟಕ ಮೂಲದ ಎನ್‌ಕೌಂಟರ್‌ ಸ್ಪೆಷಲಿಸ್ಟ್ ದಯಾ ನಾಯಕ್​ರಿಗೆ ಒಪ್ಪಿಸಲಾಗಿದೆ. ತನಿಖೆ ಚುರುಕುಗೊಳಿಸಿರೋ ಟೀಂಗೆ ಅಚ್ಚರಿಯ ಸಂಗತಿಗಳು ಸಿಗ್ತಿವೆ.

ಇದನ್ನೂ ಓದಿ:ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ ಆಗಂತುಕ ಮೊದಲು ಮಾಡಿದ್ದೇನು? ಇಂಚಿಂಚು ಮಾಹಿತಿ ಬಹಿರಂಗ!

publive-image

1 ಗಂಟೆಗಳ ಕಾಲ ಅಪಾರ್ಟ್​ಮೆಂಟ್​ ಒಳಗೆ ಇದ್ದ ಕಳ್ಳ

ಇಡೀ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಊಹಾಪೋಹಗಳೇ ಹರಿದಾಡುತ್ತಿವೆ. ಸೈಫ್​ ಮನೆಯಲ್ಲಿ ಕೆಲಸ ಮಾಡುತ್ತಿರುವಾಕೆ ಪೊಲೀಸರ ಬಳಿ ಹೇಳಿದಂತೆ ಆ ಕಳ್ಳ ಒಂದು ಕೋಟಿ ರೂಪಾಯಿಗೆ ಡಿಮಾಂಡ್​ ಮಾಡಿದ್ದನಂತೆ. ಅಷ್ಟಕ್ಕೂ ಘಟನೆಯ ಬಳಿಕ ಈ ಆರೋಪಿ, ಸುಮಾರು ಒಂದು ಗಂಟೆ ಮನೆಯೊಳಗೆ ಅವಿತು ಕುಳಿತಿರುವ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಂದ್ರಾದರೋ ಸೈಫ್​ ಅಲಿ ಖಾನ್​ ಅಪಾರ್ಟ್​ಮೆಂಟ್​ ಒಳಗೆ ಓಡಾಡಿದ ಸಿಸಿಟಿವಿ ದೃಶ್ಯಗಳು ಸಾರಿ ಹೇಳ್ತಿದೆ.

ದಾಳಿ ವೇಳೆ ಮನೆಯಲ್ಲೇ ಇರಲಿಲ್ಲ ಕರೀನಾ, ಮಕ್ಕಳು

ಘಟನೆ ನಡೆದಾ ರಾತ್ರಿ ಕರೀನಾ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ.. ಕರೀನಾ ತಮ್ಮ ತಂಗಿ ಕರೀಷ್ಮಾ ಕಪೂರ್ ಹಾಗೂ ರಿಯಾ, ಸೋನಂ ಜೊತೆ ಪಾರ್ಟಿಯೊಂದಕ್ಕೆ ತೆರಳಿದ್ದರಂತೆ. ಮಧ್ಯರಾತ್ರಿ ಪಾರ್ಟಿಯಲ್ಲಿ ಎಂಜಾಯ್​ ಮಾಡ್ತಿದ್ದ ಬಗ್ಗೆ ಸ್ಟೇಟಸ್​ ಕೂಡ ಹಾಕಿದ್ದರು. ಈ ಘಟನೆ ಬಗ್ಗೆ ಮಂಗಳೂರಿನಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸೈಫ್ ಓಟ್ ಆಫ್ ಡೆಂಜರ್.. ರಿಕವರಿ ಆಗ್ತಿದ್ದಾರೆ.. ಸೆಕ್ಯುರಿಟಿ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸೈಫ್ ಅಲಿಖಾನ್​ ಮೇಲೆ ದಾಳಿ ಪ್ರಕರಣ.. ಕೊನೆಗೂ ಆರೋಪಿ ಸುಳಿವು ಪತ್ತೆ; ಅಸಲಿ ಕಾರಣ ಬಹಿರಂಗ!

ಸೈಫ್​ ಮನೆ ಇರೋದು 12ನೇ ಹಂತಸ್ತಿನಲ್ಲಿ.. ಕಳ್ಳ ಯಾಕೆ ಅಷ್ಟು ಮೇಲೆ ಹೋಗಿ ದರೋಡೆಗೆ ಯತ್ನಿಸಿದ.? ಸೈಫ್​ ಅಲಿ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದೇ ಕಳ್ಳ ಬಂದಿದ್ನಾ..? ಅನ್ನೋ ಬಗ್ಗೆ ಪೊಲೀಸ್​ ತನಿಖೆಯಿಂದ ಎಲ್ಲವೂ ಬಹಿರಂಗವಾಗಬೇಕಿದೆಯಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment