newsfirstkannada.com

‘ಅಧೀರ’ ರಾಜಕೀಯಕ್ಕೆ ಮಾಸ್ ಎಂಟ್ರಿ? ಸಂಜಯ್‌ ದತ್‌ ಚುನಾವಣೆಗೆ ಸ್ಪರ್ಧಿಸ್ತಾರಾ? ಯಾವ ಪಾರ್ಟಿ?

Share :

Published April 8, 2024 at 5:25pm

Update April 8, 2024 at 5:26pm

  ಕೆಜಿಎಫ್​ ಅಧೀರ ಯಾವ ಪಕ್ಷಕ್ಕೆ ಸೇರಬಹುದು ಅನ್ನೋ ಕುತೂಹಲ

  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಖಳನಾಯಕ ಸಂಜಯ್ ದತ್

  ಒಳ್ಳೆಯ ನಿರ್ಧಾರ ಮಾಡಿದ್ದೀರಿ ಎಂದು ಕಾಮೆಂಟ್​ ಮಾಡಿದ ನೆಟ್ಟಿಗರು

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಸ್ಟಾರ್​ ನಟ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಚರ್ಚೆಗಳು ಶುರು ಆಗಿದ್ದವು. ಆದರೆ ಈ ಎಲ್ಲ ಊಹಾಪೋಹಗಳಿಗೆ ಬಾಲಿವುಡ್ ಸ್ಟಾರ್​ ನಟ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ರಜನಿ ಮಾತಿಗೆ ಕ್ಯಾರೇ ಎನ್ನದ ಜೋಡಿ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ಧನುಷ್-ಐಶ್ವರ್ಯಾ!

ಹೌದು, ಬಾಲಿವುಡ್​ ನಟ ಸಂಜಯ್ ದತ್ ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಹೀಗಾಗಿ ಕೆಜಿಎಫ್​ ಅಧೀರ ಯಾವ ಪಕ್ಷಕ್ಕೆ ಸೇರಬಹುದು ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದರು. ಆದರೆ ಇದೀಗ ಇದೇ ವಿಚಾರಕ್ಕೆ ಸಂಜಯ್ ದತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಸೇರುತ್ತೇನೆ ಎಂಬ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲು ನಾನು ಬಯಸುತ್ತೇನೆ. ನಾನು ಯಾವುದೇ ಪಕ್ಷ ಸೇರುವುದಿಲ್ಲ ಅಥವಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ. ಸದ್ಯಕ್ಕೆ ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ನಂಬಬೇಡಿ ಎಂದು ನಟ ಸಂಜಯ್ ದತ್ ಬರೆದುಕೊಂಡಿದ್ದಾರೆ.

ಸದ್ಯ ನಟ ಸಂಜಯ್ ದತ್ ಅವರ ಟ್ವೀಟ್​ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಒಳ್ಳೆಯ ನಿರ್ಧಾರ ಮಾಡಿದ್ದೀರಿ, ರಾಜಕೀಯ ನಿಮಗೆ ಬೇಡ, ನಮಗೆ ಹೆಚ್ಚೆಚ್ಚು ಸಿನಿಮಾಗಳನ್ನು ನೀಡಿ ಅಂತಾ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸದ್ಯ ನಟ ಕನ್ನಡದ ಕೆಡಿ ಹಾಗೂ ಡಬಲ್ ಇಸ್ಮಾರ್ಟ್ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಧೀರ’ ರಾಜಕೀಯಕ್ಕೆ ಮಾಸ್ ಎಂಟ್ರಿ? ಸಂಜಯ್‌ ದತ್‌ ಚುನಾವಣೆಗೆ ಸ್ಪರ್ಧಿಸ್ತಾರಾ? ಯಾವ ಪಾರ್ಟಿ?

https://newsfirstlive.com/wp-content/uploads/2024/04/sanjay-dat.jpg

Load More