/newsfirstlive-kannada/media/post_attachments/wp-content/uploads/2024/06/varun-dhawan.jpg)
ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ನಟ ವರುಣ್ ಧವನ್ ತಂದೆಯಾಗಿದ್ದಾರೆ. ನಟ ವರುಣ್ ಧವನ್ ಪತ್ನಿ ನತಾಶಾ ದಲಾಲ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/varun-dhawan1.jpg)
ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಸುದ್ದಿಯನ್ನ ಖಚಿತಪಡಿಸಿದ್ದು, ವರುಣ್ ಧವನ್ ಹಾಗೂ ನತಾಶಾ ದಲಾಲ್ ದಂಪತಿಗೆ ಶುಭಕೋರಿದ ಎಲ್ಲರಿಗೂ ಧನ್ಯವಾದವನ್ನೂ ಕೂಡ ಡೇವಿಡ್ ಧವನ್ ತಿಳಿಸಿದ್ದಾರೆ. 2021ರಲ್ಲಿ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆ ನಟ ವರುಣ್ ಧವನ್ ಕುಟುಂಬದವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ತಂದೆಯಾಗುತ್ತಿರುವ ಬಗ್ಗೆ ಕಳೆದ ಫೆಬ್ರವರಿ 18ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದರು.
View this post on Instagram
ನತಾಶಾ ಅವರ ಬೇಬಿ ಬಂಪ್‌ಗೆ ಮುತ್ತು ಕೊಡುವ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡುವ ಮೂಲಕ ವರುಣ್ ಧವನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಸದ್ಯ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ವರುಣ್ ತಂದೆ ಡೇವಿಡ್ ಧವನ್ ತಾತನಾದ ಬಗ್ಗೆ ಖುಷಿ ಹಂಚಿಕೊಂಡಿದ್ದು, ಸದ್ಯ ವರುಣ್ ಹಾಗೂ ಪತ್ನಿ ನತಾಶಾಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us