ಬಿಜೆಪಿ 5ನೇ ಪಟ್ಟಿ ರಿಲೀಸ್​​​.. ನಟಿ ಕಂಗನಾ ರಣಾವತ್​ಗೆ ಲೋಕಸಭಾ ಟಿಕೆಟ್​​!

author-image
Veena Gangani
Updated On
ರಾಹುಲ್ ಗಾಂಧಿ ಸಂತ್ರಸ್ತ ಮಗ, 3 ಈಡಿಯಟ್ಸ್ ಸಿನಿಮಾ ರೀತಿ -ಕಂಗನಾ ವಾಗ್ದಾಳಿ
Advertisment
  • ಇಡೀ ದೇಶಾದ್ಯಂತ ತಾರಕಕ್ಕೇರಿದ ಲೋಕಸಭಾ ಚುನಾವಣೆ
  • ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 5ನೇ ಪಟ್ಟಿ ರಿಲೀಸ್​​
  • ಬಾಲಿವುಡ್​ ಸ್ಟಾರ್​ ನಟಿ ಕಂಗನಾಗೆ ಮಣೆ ಹಾಕಿದ ಹೈಕಮಾಂಡ್​​

18ನೇ ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಈ ಬಾರಿ ಲೋಕಸಭಾ ಚುನಾವಣೆಗೆ ಖ್ಯಾತ ನಟ ಹಾಗೂ ನಟಿಯರಿಗೆ ನಾನಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಇದರ ಮಧ್ಯೆ ಬಿಜೆಪಿ ಲೋಕಸಭಾ ಚುನಾವಣೆಗೆ 111 ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್​ ಮಾಡಿದೆ. ಇದೀಗ ಹಿಮಾಚಲ ಪ್ರದೇಶದ ಮಂಡಿಯಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಲೋಕಸಭಾ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಇದನ್ನು ಓದಿ: ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ತಮಿಳುನಾಡು ಮಿನಿಸ್ಟರ್​​​.. ಏನಿದು ವಿವಾದ?


">March 24, 2024

ಇನ್ನು ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಬಿಜೆಪಿ ಕೈಗಾರಿಕೋದ್ಯಮಿ ಮತ್ತು ಕಾಂಗ್ರೆಸ್ ಮಾಜಿ ಸಂಸದ ನವೀನ್ ಜಿಂದಾಲ್ ಅವರನ್ನು ಹರಿಯಾಣದ ಕುರುಕ್ಷೇತ್ರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಉತ್ತರ ಪ್ರದೇಶದ ಪಿಲಿಭಿತ್‌ನಿಂದ ವರುಣ್ ಗಾಂಧಿಯನ್ನು ಕೈ ಬಿಟ್ಟು ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ವರುಣ್ ಅವರ ತಾಯಿ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರನ್ನು ಸುಲ್ತಾನ್‌ಪುರದಿಂದ ಕಣಕ್ಕಿಳಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment