newsfirstkannada.com

ರಾಹುಲ್ ಗಾಂಧಿ ಸಂತ್ರಸ್ತ ಮಗ, 3 ಈಡಿಯಟ್ಸ್ ಸಿನಿಮಾ ರೀತಿ -ಕಂಗನಾ ವಾಗ್ದಾಳಿ

Share :

Published April 5, 2024 at 6:26am

  ‘ಮಹತ್ವಾಕಾಂಕ್ಷಿ ತಾಯಿಯ ಸಂತ್ರಸ್ತ ಮಕ್ಕಳು’ ಎಂದ ಕ್ವೀನ್

  ರಾಹುಲ್ ಗಾಂಧಿ ವೈಯಕ್ತಿಕ ವಿಚಾರ ಕೆದಕಿದ ಬಾಲಿವುಡ್​ ನಟಿ

  ರಾಹುಲ್, ಪ್ರಿಯಾಂಕ ಗಾಂಧಿ ಬಲಿಪಶುಗಳು ಎಂದ ಕಂಗನಾ

ರಾಹುಲ್‌ ಗಾಂಧಿಯವರು ವಯನಾಡು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್‌ ಸ್ಪರ್ಧೆ ಬಗ್ಗೆ ಬಾಲಿವುಡ್​ ಖ್ಯಾತ ನಟಿ ಕಂಗನಾ ರಣಾವತ್ ಲೇವಡಿ ಮಾಡಿ ಹೊಸ ಬಾಂಬ್ ಸಿಡಿಸಿದ್ದಾರೆ. ರಾಹುಲ್ ಗಾಂಧಿ ಬಲಿಪಶು ಅಂತ ಕರೆದಿದ್ದಾರೆ. ರಾಹುಲ್ ಗಾಂಧಿ ವೈಯಕ್ತಿಕ ವಿಷಯಗಳನ್ನು ಕೆದಕಿ ರಾಹುಲ್ ಗಾಂಧಿಗೆ ಭವಿಷ್ಯವೇ ಇಲ್ಲ ಲೇವಡಿ ಮಾಡಿದ್ದಾರೆ.

ರಾಹುಲ್, ಪ್ರಿಯಾಂಕ ಬಲಿಪಶುಗಳು ಎಂದ ಬಾಲಿವುಡ್ ಫೈರ್​ಬ್ರ್ಯಾಂಡ್​!

ನಟನೆ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಬಾಲಿವುಡ್​​ನ ಖ್ಯಾತ ನಟಿ ಕಂಗನಾ ರಣಾವತ್ ರಾಜಕೀಯ ರಂಗಕ್ಕೂ ಕಾಲಿಟ್ಟಿದ್ದಾರೆ. ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿರುವ ಮಾತುಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿವೆ. ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ತಾಯಿಯ ಸಂತ್ರಸ್ತ ಮಗ, ಬಲಿಪಶು ಅಂತ ಟೀಕಿಸಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಗೆ ರಾಜಕೀಯ ಆಗಿ ಬರಲ್ಲ. ಹೀಗಿದ್ದರೂ ತಾಯಿ ಸೋನಿಯಾ ಗಾಂಧಿ ಇಬ್ಬರು ಮಕ್ಕಳನ್ನು ಬಲವಂತವಾಗಿ ರಾಜಕೀಯ ರಂಗಕ್ಕೆ ತಳ್ಳಿಬಿಟ್ಟಿದ್ದಾರೆ. ರಾಜಕೀಯದಲ್ಲಿ ಏನಾದ್ರೂ ಸಾಧಿಸಲೇಬೇಕು ಅಂತ ಒತ್ತಡ ಹೇರಿದ್ದಾರೆ. ರಾಹುಲ್ ಗಾಂಧಿ ರಾಜಕಾರಣಿ ಆಗೋ ಬದಲು ಒಳ್ಳೆಯ ನಟನಾಗಬಹುದಿತ್ತು ಅಂತ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ತಮಾಷೆ ಅಲ್ಲ.. ಜರ್ಮನಿಗೆ 20,000 ಆನೆ ನುಗ್ಗಿಸೋ ಎಚ್ಚರಿಕೆ ಕೊಟ್ಟ ಬೋಟ್ಸ್‌ವಾನಾ; ಕಾರಣವೇನು?

ನಾನು ನಿಮ್ಮ ಬಳಿ ಸತ್ಯ ಹೇಳ್ತಿದ್ದೀನಿ, ರಾಹುಲ್ ಗಾಂಧಿ ಅವರು ಸಂತ್ರಸ್ತರಂತೆ ಕಾಣ್ತಿದ್ದಾರೆ. ರಾಹುಲ್ ಒಬ್ಬ ಮಹತ್ವಾಕಾಂಕ್ಷಿ ತಾಯಿಯ ಸಂತ್ರಸ್ತ ಮಗ, ಬಲಿಪಶು ಆಗಿದ್ದಾರೆ. 3 ಈಡಿಯಟ್ಸ್ ಸಿನಿಮಾದಲ್ಲೂ ಇದೇ ರೀತಿ ಇದೆ. ಮಕ್ಕಳೇ ಪರಿವಾರವಾದದ ಬಲಿಪಶುಗಳಾಗುತ್ತಾರೆ. ರಾಹುಲ್ ಗಾಂಧಿ ಒಳ್ಳೆಯ ನಟನಾಗಬಹುದಿತ್ತು.

ಕಂಗನಾ ರಣಾವತ್, ನಟಿ, ಬಿಜೆಪಿ ಅಭ್ಯರ್ಥಿ

ಕಾಂಗ್ರೆಸ್ ಒಂದು ವಂಚಕ ಪಾರ್ಟಿ -ಕಂಗನಾ 

ಬಾಲಿವುಡ್​​ ಸಿನಿಮಾಗಳಲ್ಲಿ ಕಮಾಲ್ ಮಾಡಿದ್ದ ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿ ಲೋಕಾಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ ವಿರುದ್ಧ ಸದಾ ಬೆಂಕಿಯುಗುಳುವ ಕಂಗನಾ ಕಾಂಗ್ರೆಸ್ ಒಂದು ವಂಚಕ ಪಾರ್ಟಿಯಾಗಿದೆ ಅಂತ ಕಿಡಿಕಾರಿದ್ದಾರೆ. ಇವತ್ತು ತಮ್ಮ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿರುವ ಕಂಗನಾ ರಣಾವತ್, ಪ್ರಧಾನಿ ಮೋದಿ ಭಗವಾನ್ ವಿಷ್ಣುವಿನ ಅಂಶ ಅಂತ ಹೊಗಳಿದ್ದಾರೆ.

ರಾಹುಲ್ ಗಾಂಧಿಗೆ ಇಷ್ಟು ವರ್ಷವಾದ್ರೂ ಇನ್ನೂ ಯಾಕೆ ಮದುವೆಯಾಗಿಲ್ಲ. ಯಾಕೆ ಮನೆ ಕಟ್ಟಿಲ್ಲ, ಯಾವುದೇ ಭವಿಷ್ಯದ ದಿಕ್ಕು ಕಾಣದೇ ರಾಹುಲ್​ ಏಕಾಂಗಿಯಾಗಿರುವಂತೆ ಕಾಣ್ತಿದ್ದಾರೆ ಎಂದಿದ್ದಾರೆ. ಅತ್ತ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಪ್ರಚಾರಕ್ಕಿಳಿದು ಅಬ್ಬರಿಸ್ತಿದ್ದಾರೆ. ನಟಿ ಕಂಗನಾ ರಣಾವತ್ ಹೇಳಿಕೆಗೆ ಗಾಂಧಿ ಕುಟುಂಬ ಅದ್ಯಾವ ರೀತಿ ಪ್ರತಿಕ್ರಿಯಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ಸಂತ್ರಸ್ತ ಮಗ, 3 ಈಡಿಯಟ್ಸ್ ಸಿನಿಮಾ ರೀತಿ -ಕಂಗನಾ ವಾಗ್ದಾಳಿ

https://newsfirstlive.com/wp-content/uploads/2024/04/rahul-gandi3.jpg

Load More