/newsfirstlive-kannada/media/post_attachments/wp-content/uploads/2025/06/karishma-kapoor-ex-husband-sanjay-kapoor-3.jpg)
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಅವರು ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಸಂಜಯ್ ಕಪೂರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಸಂಜಯ್ ಕಪೂರ್ ದಾರುಣ ಅಂತ್ಯಕ್ಕೆ ಕಾರಣವಾಗಿದ್ದು ಒಂದು ಜೇನು ನೋಣ ಅನ್ನೋದು ಆತಂಕಕ್ಕೆ ಕಾರಣವಾಗಿದೆ.
ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಅವರಿಗೆ 53 ವರ್ಷ ವಯಸ್ಸು. ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ಸಂಜಯ್ ಅವರು ಪೋಲೋ ಆಡುತ್ತಿದ್ದರು.
ಪೋಲೋ ಆಡುವ ವೇಳೆ ಸಂಜಯ್ ಕಪೂರ್ ಆಕಸ್ಮಿಕವಾಗಿ ಜೇನು ನೊಣ ನುಂಗಿದ್ದರು. ಜೇನು ನೊಣ ಗಂಟಲಿನಲ್ಲಿ ಸಿಲುಕಿಕೊಂಡು ತೀವ್ರ ನೋವು, ಕಿರಿಕಿರಿ ಅನುಭವಿಸಿದ್ದರು.
ಜೇನು ನೊಣದಿಂದಾಗಿ ಸಂಜಯ್ ಕಪೂರ್‌ಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಉಸಿರಾಟದ ತೊಂದರೆಯಿಂದ ಸಂಜಯ್ ಮೈದಾನದಲ್ಲಿ ಕುಸಿದು ಬಿದ್ದಿದ್ದರು.
ಇದನ್ನೂ ಓದಿ: ವಿಶ್ವಾಸ್ ಕುಮಾರ್ಗೆ ಮಾತ್ರವಲ್ಲ.. ಮತ್ತೊಬ್ಬ ಪ್ರಯಾಣಿಕನಿಗೂ ಮರುಜೀವ ನೀಡಿತ್ತು 11A ಸೀಟ್..!
ಕೂಡಲೇ ಸಂಜಯ್ ಕಪೂರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2003ರಲ್ಲಿ ಕರಿಷ್ಮಾ ಕಪೂರ್ ಅವರು ಸಂಜಯ್ ಕಪೂರ್ ಅವರನ್ನ ಮದುವೆಯಾಗಿದ್ದರು. 2016ರಲ್ಲಿ ಈ ಜೋಡಿ ಡಿವೋರ್ಸ್ ಪಡೆದು ಬೇರೆ, ಬೇರೆಯಾಗಿತ್ತು. ಸಂಜಯ್ ಕಪೂರ್ ಅವರು ತಮ್ಮ ನಿಧನಕ್ಕೂ ಮುನ್ನ ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ