/newsfirstlive-kannada/media/post_attachments/wp-content/uploads/2025/03/katrina-kaif-in-kukke-subramanya-temple-3.jpg)
ಮಂಗಳೂರು: ಕತ್ರಿನಾ ಕೈಫ್, ವಿಕಿ ಕೌಶಲ್ ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಕಪಲ್. ಈ ಸ್ಟಾರ್ ಜೋಡಿ ಪ್ರೀತಿಸಿ ಮದುವೆಯಾಗಿ 3 ವರ್ಷಗಳೇ ಕಳೆದಿದೆ. ಡಿಸೆಂಬರ್ 9, 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್, ವಿಕಿ ಕೌಶಲ್‌ಗೆ ಈಗ ಸಂತಾನ ಭಾಗ್ಯದ ಕೊರಗಿದ್ದಂತೆ ಕಾಣುತ್ತಿದೆ.
ಬಾಲಿವುಡ್ ಅಂಗಳದಲ್ಲಿ ಕತ್ರಿನಾ ಕೈಫ್ ಗರ್ಭಿಣಿಯಾದ ಸುದ್ದಿ ಬರೀ ಗಾಸಿಪ್ ಆಗಿಯೇ ಉಳಿದಿತ್ತು. ಹಲವು ಬಾರಿ ಸೋಷಿಯಲ್ ಮೀಡಿಯಾಗಳಲ್ಲಿ ಕತ್ರಿನಾ ಕೈಫ್ ಗುಡ್‌ನ್ಯೂಸ್ ವೈರಲ್ ಆಗಿದ್ದು ಸುಳ್ಳಾಗಿದೆ. ಇದೀಗ ಕತ್ರಿನಾ ಕೈಫ್ ಅವರು ಸಂತಾನ ಭಾಗ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/05/katrina-kaif.jpg)
ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ನಿನ್ನೆ ರಾತ್ರಿಯೇ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆಗೆ ದುಪ್ಪಟ್ಟ ಹಾಕಿದ್ದ ಕತ್ರಿನಾ ಕೈಫ್ ದೇವರ ದರ್ಶನ ಪಡೆದಿದ್ದಾರೆ.
/newsfirstlive-kannada/media/post_attachments/wp-content/uploads/2025/03/katrina-kaif-in-kukke-subramanya-temple.jpg)
ಇಂದು ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸರ್ಪಸಂಸ್ಕಾರ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. VIP ಊಟದ ಹಾಲ್​ನಲ್ಲಿ ಕತ್ರಿನಾ ಕೈಫ್ ಕುಟುಂಬ ದೇವರ ಪ್ರಸಾದವನ್ನು ಸ್ವೀಕರಿಸಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮೊರೆ ಹೋದ ಬಾಲಿವುಡ್ ನಟಿ ಕತ್ರಿನಾ ಕೈಫ್; ಫೋಟೋ ಇಲ್ಲಿದೆ!
ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ಪರಿಹಾರದಿಂದ ಸಂತಾನ ಭಾಗ್ಯ ಸಿಗುವ ನಂಬಿಕೆ ಇದೆ. ಮಕ್ಕಳ ಭಾಗ್ಯಕ್ಕಾಗಿ ಪ್ರಾರ್ಥಿಸುವ 9 ದೋಷ ಪರಿಹಾರದಲ್ಲಿ ನಾಗದೋಷ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕತ್ರಿನಾ ಕೈಫ್ ಅವರು ಖುದ್ದು ಕುಕ್ಕೆ ಶ್ರೀ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us